ನಕಲಿ ವೈದ್ಯರ ಪತ್ತೆಗೆ ಕ್ರಮ ಜರುಗಿಸಿ: ಜಿ.ಪಂ. ಅಧ್ಯಕ್ಷ ಬಳಿಗಾರ

ಗದಗ 03: ಜಿಲ್ಲೆಯಲ್ಲಿ   ನಕಲಿ ವೈದ್ಯರ ಪತ್ತೆ ಕುರಿತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು  ಹಾಗೂ ಆಯುಷ್ ಇಲಾಖೆ ಅಧಿಕಾರಿಗಳು ಜಂಟಿ  ಕಾರ್ಯಾಚರಣೆ ನಡೆಸಿ  ಅಂತಹ  ವೈದ್ಯರ ವಿರುದ್ಧ ಕ್ರಮ ಕೈಗೊಂಡು    ಆ  ಕುರಿತು    ವರದಿಯನ್ನು ಸಲ್ಲಿಸಲು   ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ ಅವರು ನಿರ್ದೇಶನ ನೀಡಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ರೈತರ ಪಹಣಿ ಪತ್ರಿಕೆಗಳಲ್ಲಿ ನೀರಾವರಿ ಎಂದು ತಪ್ಪಾಗಿ ನಮೂದಾಗಿದ್ದು   ಸೌಲಭ್ಯಗಳು ಅರ್ಹ ರೈತರಿಗೆ ದೊರಕುತ್ತಿಲ್ಲ ಎಂಬ ದೂರುಗಳಿದ್ದು  ಈ  ಕುರಿತು  ಪರಿಶೀಲಿಸಿ  ಸೂಕ್ತ  ದಾಖಲೆಗಳೊಂದಿಗೆ    ಜಿಲ್ಲಾಧಿಕಾರಿಗಳ ಕಚೇರಿಗೆ   ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿದರ್ೇಶಕ ಸಿ.ಬಿ. ಬಾಲರೆಡ್ಡಿ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ ಈ ಕುರಿತು   ಕ್ರಮ  ಜರುಗಿಸಿ  ಬೆಳೆ ಪರಿಹಾರ, ಬೆಳೆ ಹಾನಿ  ಸೌಲಭ್ಯ ರೈತರಿಗೆ ದೊರಕಿಸುವಲ್ಲಿ  ಕ್ರಮ ಕೈಗೊಳ್ಳಬೇಕು.  ಹಾಗೂ ಜಿಲ್ಲೆಗಳಲ್ಲಿ ನಾದುರಸ್ತಾಗಿರುವ ಟ್ರಾನ್ಸ್ ಫರ್ಮರ್ಗಳನ್ನು ದುರಸ್ತಿ ಹಾಗೂ ಅಗತ್ಯವಿರುವ ಸ್ಥಳಾಂತರಕ್ಕೆ  ಕ್ರಮ ಜರುಗಿಸಬೇಕೆಂದರು.       

ಗದಗ ಶಹರ ಹಾಗೂ ಗ್ರಾಮೀಣ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ  ವೇತನವನ್ನು  ವಿಳಂಬಿಸದೇ ಪಾವತಿಸಲು    ಕ್ರಮ ಕೈಗೊಳ್ಳಬೇಕು.  ದೇಶದಲ್ಲಿ  ಹೊಸ ಶಿಕ್ಷಣ ನೀತಿ   ಕುರಿತು ಕಸ್ತೂರಿ ರಂಗನ್ ಸಮಿತಿ  ಕರಡು ವರದಿ ಬಂದಿದ್ದು  ಆ ಕುರಿತು  ಏನಾದರೂ ಸಲಹೆ ಸೂಚನೆಗಳನ್ನು ಸಲ್ಲಿಸಲು ಇನ್ನು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.  ಇದಕ್ಕಾಗಿ ತಜ್ಞರ  ವಿಚಾರ ಸಂಕಿರಣವನ್ನು ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು   ಕ್ರಮ ಕೈಗೊಳ್ಳಬೇಕು.  ಶಾಲಾ ಕಟ್ಟಗಳ ದುರಸ್ತಿ ಹಾಗೂ ಶಾಲೆಗಳಲ್ಲಿ  ಶೌಚಾಲಯ ವ್ಯವಸ್ಥೆಗೆ ಬೇಕಾಗುವ    ಅನುದಾನಕ್ಕಾಗಿ  ಪ್ರಯತ್ನ ಜರುಗಿಸುವುದಾಗಿ   ವಿ.ಪ. ಸದಸ್ಯ ಎಸ್.ವಿ. ಸಂಕನೂರ ಸೂಚಿಸಿದರು.     

ಜಿಲ್ಲೆಯಲ್ಲಿ  ಪಶು ವೈದ್ಯಕೀಯ ಇಲಾಖೆಯ  62 ಹುದ್ದೆಗಳು ಮಂಜೂರಾಗಿದ್ದು 13 ಮಾತ್ರ ಭತರ್ಿಯಾಗಿವೆ.   ಖಾಲಿ ಇರುವ ಹುದ್ದೆಗಳಿಗೆ  ಪಶು ವೈದ್ಯರುಗಳ  ನೇಮಕಕ್ಕೆ   ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ ಆಗ್ರಹಿಸಿದರು.  ಜಿಲ್ಲೆಯಲ್ಲಿ   28 ಮೇವು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ.    ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಗಂಟಲು ಬೇನೆ, ಕಾಲುಬಾಯಿ ರೋಗ ಹರಡದಂತೆ  6 ತಿಂಗಳಿಗೊಮ್ಮೆ  ಲಸಿಕೆ ಹಾಕಲಾಗುತ್ತಿದೆ ಎಂದು ಪಶು ಪಾಲನಾ ಹಾಗೂ ಪಶು ವೈದ್ಯ ಸೇವೆ ಇಲಾಖೆಯ ಉಪನಿದರ್ೇಶಕರು ಸಭೆಗೆ ತಿಳಿಸಿದರು.  ಪಶು ವೈದ್ಯಾಧಿಕಾರಿಗಳು ಲಸಿಕಾ ಕಾರ್ಯಕ್ರಮ,    ಜಾನುವಾರುಗಳಿಗೆ  ಔಷಧಿ   ವಿತರಣೆ ಯನ್ನು  ಆಯಾ ವ್ಯಾಪ್ತಿಯ ಜನಪ್ರತಿನಿಧಿಗಳ ಗಮನಕ್ಕೆ ತಂದು  ಕ್ರಮ ಕೈಗೊಳ್ಳುವಂತೆ   ಜಿ.ಪಂ. ಸದಸ್ಯೆ ಮಂಜುಳಾ ಹುಲ್ಲಣ್ಣವರ ಆಗ್ರಹಿಸಿದರು.  

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದ್ದು    ಸೊರಟೂರ ಗ್ರಾಮದಲ್ಲಿನ  ಪರಿಶಿಷ್ಟರ    ಕಾಲೋನಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು. 

       ಹಲರ್ಾಪುರ ಗ್ರಾಮದ ಕೆರೆ ಅಭಿವೃದ್ಧಿ ಪಡಿಸಲು  ಸರ್ಕಾರಕೆ  ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು  ಸಣ್ಣ  ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ  ತಿಳಿಸಿದರು. ವಿವಿಧ ಇಲಾಖೆಗಳ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಗಳ ಕುರಿತು ಸಭೆಯಲ್ಲಿ ಚಚರ್ಿಸಿ ಅನುಮೋದನೆ ನೀಡಲಾಯಿತು.

         ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ,  ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ,  ಉಪಕಾರ್ಯದಶರ್ಿ ಡಿ.ಪ್ರಾಣೇಶ ರಾವ್,  ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ,  ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಈರಪ್ಪ ಈಶ್ವರಪ್ಪ ನಾಡಗೌಡ್ರ, ಜಿ.ಪಂ. ಸದಸ್ಯರುಗಳು,  ಜಿ.ಪಂ. ಯೋಜನಾ ನಿರ್ದೇಶಕ ಟಿ. ದಿನೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.