ಡಾ.ಬಾಬು ಜಗಜೀವನರಾಮ್ ಆದರ್ಶ ಅಳವಡಿಸಿಕೊಳ್ಳಿ: ಶ್ರಿಕಾಂತ ಪತ್ತಾರ
ತಾಳಿಕೋಟಿ 05: ಡಾ.ಬಾಬುಜಗಜೀವನ ರಾಮ್ ಆದಿಯಾಗಿ ಎಲ್ಲ ಮಹಾತ್ಮರ, ದಾರ್ಶನಿಕರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಬದುಕಿನ ಆದರ್ಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವಂತಾಗಬೇಕು ಎಂದು ಜೆಎಸ್ ಜಿ ಫೌಂಡೇಶನ್ ಕಾರ್ಯದರ್ಶಿ, ಸಾಹಿತಿ ಶ್ರೀಕಾಂತ್ ಪತ್ತಾರ ಹೇಳಿದರು.
ಶನಿವಾರ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 118ನೇ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಡಾ.ಬಾಬು ಜಗಜೀವನ ರಾಮ್ ಅವರು ಈ ದೇಶ ಕಂಡ ಮಹಾನ್ ನಾಯಕ, ಶ್ರೇಷ್ಠ ಮೇಧಾವಿ, ಜೀವನದುದ್ದಕ್ಕೂ ಹಿಂಸೆ ದೌರ್ಜನ್ಯ ಹಾಗೂ ಅಪಮಾನವನ್ನು ಸಹಿಸಿ ತಮ್ಮ ಅಗಾಧವಾದ ಪ್ರತಿಭೆಯ ಮೂಲಕ ಗುರುತಿಸಿಕೊಂಡವರು. ಜೀವನದಲ್ಲಿ ತಮ್ಮ ಸ್ವಾರ್ಥಕ್ಕೆ ಅವಕಾಶ ನೀಡಿದೆ ದೇಶದ ಹಿತಕ್ಕಾಗಿ ತನ್ನನ್ನು ತಾನು ಸಮರ್ಿಸಿದ ಮಹಾನ್ ದೇಶಭಕ್ತ, 40 ವರ್ಷಗಳವರೆಗೆ ಕೇಂದ್ರದಲ್ಲಿ ವಿವಿಧ ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ಏಕೈಕ ರಾಜಕಾರಣಿ ಇಂತಹ ಶ್ರೇಷ್ಠ ವ್ಯಕ್ತಿಯನ್ನು ಮುಂದಿನ ಪೀಳಿಗೆ ಸದಾ ಸ್ಮರಿಸುವಂತಾಗಲು ಅವರ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ಪ್ರಕಟಿಸುವಂತಾಗಬೇಕು, ಇಂಥಹ ಶ್ರೇಷ್ಠ ವ್ಯಕ್ತಿಯ ಜಯಂತಿ ದಿನವಾದ ಇಂದು ನಾವು ಕನಿಷ್ಠ ಅವರ ಬದುಕಿನ ಒಂದು ಆದರ್ಶವನ್ನಾದರೂ ಅಳವಡಿಸಿಕೊಂಡು ಪಾಲಿಸಿದರೆ ಈ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದರು.
ಡಿಎಸ್‌ಎಸ್ ವಿಭಾಗೀಯ ಸಂಚಾಲಕ ದೇವೇಂದ್ರ ಹಾದಿಮನಿ, ಹರಳಯ್ಯ ಸಮಾಜದ ಮುಖಂಡ ರಾಘವೇಂದ್ರ ವಿಜಾಪುರ ಮಾತನಾಡಿದರು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಾದ ವರ್ರಸಾದ್ ವನಹಳ್ಳಿ (600/586), ಚಂದ್ರಕಾಂತ್ ಜಾದವ್ (600/582), ಮೌನೇಶ ಭೀಮಪ್ಪ(600/582), ಇದೇ ರೀತಿಯ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರವೀಣ ಕುಮಾರ್ ಹೊಸಮನಿ (625/582), ಚಂದ್ರಕಲಾ ತಳವಾರ(625/577), ಶ್ರೀಕಾಂತ ರಾಥೋಡ( 625/574) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣಕ್ಕೆ ತಶೀಲ್ದಾರ್ ಆಗಿ ವರ್ಗಾವಣೆಗೊಂಡು ಬಂದ ಡಾ. ವಿನಯಾ ಹೂಗಾರ ಹಾಗೂ ಸಾಹಿತಿ ಶ್ರೀಕಾಂತ ಪತ್ತಾರ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿ ತಹಸಿಲ್ದಾರ್ ಡಾ. ವಿನಯಾ ಹೂಗಾರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜುಬೇದಾ ಹುಸೇನ್ ಭಾಷಾ ಜಮಾದಾರ,ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ,ಸ.ಕ.ಇ. ಕಚೇರಿ ಅಧೀಕ್ಷಕ ಶಿವಲಿಂಗ ಹಚಡದ, ನಿವೃತ್ತ ಎಸ್ಪಿ ಎಸ್.ಬಿ.ಕಟ್ಟಿಮನಿ, ದಲಿತ ಮುಖಂಡ ಮುತ್ತಪ್ಪ ಚಮಲಾಪೂರ, ಪತ್ರಕರ್ತ ಬಸವರಾಜ್ ಕಟ್ಟಿಮನಿ, ಮಹೇಶ ಚಲವಾದಿ, ರಾಮಣ್ಣ ಕಟ್ಟಿಮನಿ, ಗೋಪಾಲ್ ಕಟ್ಟಿಮನಿ, ಕಾಶಿನಾಥ ಮಬ್ರೂಮಕರ್, ಪರಶುರಾಮ ಹೊಟಗಾರ, ಸಿರಸ್ತೆದಾರ ಜೆ.ಆರ್.ಜೈನಾಪೂರ, ನಿಲಯ ಪಾಲಕರಾದ ಎಸ್.ಎಂ. ಕಲಬುರ್ಗಿ, ಎನ್.ವಿ.ಕೋರಿ, ಮಲ್ಲಾಡೆ, ವಿವಿಧ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರು ಇದ್ದರು.