ಅಕ್ಕಮಹಾದೇವಿಯ ವಚನಗಳು ಆಧ್ಯಾತ್ಮಿಕ ನೆಲೆಯಲ್ಲಿ ಮಹೋನ್ನತ ಸ್ಥಾನ:ಕೊಟ್ರೇಶ್

Akkamahadevi's verses hold a high place in spiritual terms: Kotresh

ಅಕ್ಕಮಹಾದೇವಿಯ ವಚನಗಳು ಆಧ್ಯಾತ್ಮಿಕ ನೆಲೆಯಲ್ಲಿ ಮಹೋನ್ನತ ಸ್ಥಾನ:ಕೊಟ್ರೇಶ್  

ಬಳ್ಳಾರಿ 12 : ರಂದು ಸ್ತುತಿ ನಿಂದೆಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ರೂಢಿಸಿಕೊಳ್ಳುವಂತೆ ಅಕ್ಕಮಹಾದೇವಿ ಕರೆ ನೀಡಿದ್ದಾರೆಂದು ತುಮಕೂರು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಎಂ. ಕೊಟ್ರೇಶ್ ತಿಳಿಸಿದರು.ಬಳ್ಳಾರಿ ಜಿಲ್ಲಾ ಕ ಸಾ.ಪ ಟಿ.ಹೆಚ್‌.ಎಂ. ಸಾಂಸ್ಕೃತಿಕ ಕಲಾ ಟ್ರಸ್ಟ್‌, ಬಳ್ಳಾರಿ, ಇತಿಹಾಸ ಅಕಾಡೆಮಿ ಮತ್ತು ರಾಷ್ಟ್ರೀಯ ಬಸವ ದಳದ ಸಂಯುಕ್ತ ಆಶ್ರಯದಲ್ಲಿ ಬಸವ ಮಂಟಪದಲ್ಲಿ ಇಂದು ಸಂಜೆ ನಡೆದ ಟಿ.ಹೆಚ್‌.ಎಂ. ಶಿವರುದ್ರಶಾಸ್ತ್ರಿ ಮತ್ತು ವೀರಮ್ಮ ವೀರಮ್ಮ ದತ್ತಿ, ಟಿ.ಹೆಚ್‌.ಎಂ. ಸದಾಶಿವಯ್ಯ ಮತ್ತು ಸರ್ವಮಂಗಳಮ್ಮ ದತ್ತಿ, ಟಿ.ಹೆಚ್‌.ಎಂ ಶಿವಯ್ಯ ಮತ್ತು ಶಿವಗಂಗಮ್ಮ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಅಕ್ಕಮಹಾದೇವಿಯ ವಚನಗಳು ಆಧ್ಯಾತ್ಮಿಕ ನೆಲೆಯಲ್ಲಿ ಮಹೋನ್ನತ ಸ್ಥಾನಪಡೆದಿವೆ ಎಂದು ಡಾ. ಎಂ. ಕೊಟ್ರೇಶ್ ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆ ವಚನಾಂಬಿಕ ವಹಿಸಿದ್ದರು.ಬಳ್ಳಾರಿ ಕಲ್ಚರಲ್ ಆಕ್ಟಿವೀಟೀಸ್ ಸಂಸ್ಥೆಯ ಅಧ್ಯಕ್ಷ ಶೀಲಾ ಬ್ರಹ್ಮಯ್ಯ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಖ್ಯಾತ ಗಾಯಕ ರಾಯಚೂರಿನ ಆಂಬಯ್ಯ ನೂಲಿ ಮತ್ತು ಚಿದಾನಂದ ನೂಲಿ ವಚನ ಗಾಯನ ನಡೆಸಿಕೊಟ್ಟರು. ಗಾಯಕರಾದ ಅಂಬಯ್ಯ ನೂಲಿಯವರಿಗೆ ವಚನ ಭೂಷಣ ಮತ್ತು ಸಂಶೋಧಕರಾದ ಡಾ. ಎಂ. ಕೊಟ್ರೇಶ್ ಅವರಿಗೆ ಇತಿಹಾಸ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಕ ಸಾ ಪ ಜಿಲ್ಲಾಧ್ಯಕ್ಷರು ಡಾ. ನಿಷ್ಠಿ ರುದ್ರ​‍್ಪ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ದತ್ತಿ ದಾನಿಗಳಾದ ಟಿ.ಹೆಚ್‌.ಎಂ. ಬಸವರಾಜ ಕಾರ್ಯಕ್ರಮ ನಿರೂಪಿಸಿ ದತ್ತಿ ದಾನಿಗಳ ಪರಿಚಯಸಿದರು.