ಸಂಭ್ರಮದ ಆಂಜನೇಯ ಸ್ವಾಮಿ ತೇರು.ಮುಳ್ಳೋತ್ಸವ
ಹೂವಿನಹಡಗಲಿ 01 : ತಾಲ್ಲೂಕಿನ ಹೊಳಗುಂದಿಯಲ್ಲಿ ಭಾನುವಾರ ಸಂಜೆ 5.30 ಕ್ಕೆ ಆಂಜನೇಯ ಸ್ವಾಮಿಯ ರಥೋತ್ಸವ ವೈಭವದಿಂದ ಜರುಗಿತು.ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿಬಂದ ಸ್ವಾಮಿಯ ಉತ್ಸವ ಮೂರ್ತಿ ರಥಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ನಮಿಸಿತು. ರಥವು ಪಾದಗಟ್ಟೆವರೆಗೂ ತೆರಳಿ ಮೂಲ ಸ್ಥಳಕ್ಕೆ ಹಿಂತಿರುಗಿತು. ಸಮಾಳ, ಡೋಲು, ಹಲಗೆ ಮಂಗಳ ವಾದ್ಯಗಳು ವಿಜೃಂಭಣೆಯ ರಥೋತ್ಸವದ ಮೆರುಗು ಹೆಚ್ಚಿಸಿದವು.ಮುಳ್ಳೋತ್ಸವ : ಶ್ರೀ ಆಂಜನೇಯ ಸ್ವಾಮಿ ಮುಳ್ಳೋತ್ಸವ ಸೋಮವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಶ್ರೀಸ್ವಾಮಿಯ ವಿಶಿಷ್ಟವಾದ ಮುಳ್ಳೋತ್ಸವ ನಡೆಯಿತು. ಊರು ಹೊರ ವಲಯದಲ್ಲಿ ಮೆರವಣಿಗೆ ಮೂಲಕ ಕಾರೆ ಮುಳ್ಳು ತಂದು ದೇವಾಲಯದ ಪಕ್ಕದಲ್ಲಿ ಕಾರೆ ಮುಳ್ಳಿನ ಗದ್ದುಗೆ ಸಿದ್ಧಪಡಿಸಲಾಗಿತ್ತು.ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಪೂಜಾರ ಬಸವರಾಜ ಮೂರು ಸುತ್ತು ಪ್ರದಕ್ಷಿಣೆ ನಂತರ ಮುಳ್ಳುಗದ್ದುಗೆ ಉತ್ಸವ ತೆರೆ ಕಂಡಿತು. ದೇಗುಲ ಅದ್ಯಕ್ಷ ಸಿ.ಬಸವರಾಜ್. ಟಿ.ಹನುಮಂತಪ್ಪ. ಪರಶುರಾಮ ಪ್ಪ. ಹಾವನೂರು ರಾಜಶೇಖರ. ಗ್ರಾ.ಪಂ.ಅದ್ಯಕ್ಷ ದಡಾರ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.