ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ, ಶ್ರದ್ಧಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮ

Anniversary program of Shraddha Jnanavikasa Kendra at Kuruvinakoppa village of Savadatti taluk

ಸವದತ್ತಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ, ಶ್ರದ್ಧಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ  ಕಾರ್ಯಕ್ರಮ  

ಉಗರಗೋಳ  1 : ಪೂಜ್ಯ  ಹೇಮಾವತಿ  ಹೆಗ್ಗಡೆಯವರು  ಮಹಿಳಾ  ಸಬಲೀಕರಣಕ್ಕೆ  ಆಧ್ಯತೆ ನೀಡಿದ್ದು,  ಇದರ  ಪ್ರಯುಕ್ತ,  ರಾಜ್ಯಾಂದ್ಯಂತ  ಹೆಚ್ಚೆಚ್ಚು  ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುತ್ತಿದೆ ಎಂದು  ತಾಲೂಕಾ  ಯೋಜನಾಧಿಕಾರಿ  ಸುಭ್ರಾಯ  ನಾಯ್ಕ  ಹೇಳಿದರು. 

ಸವದತ್ತಿ  ತಾಲೂಕಿನ  ಕುರುವಿನಕೊಪ್ಪ  ಗ್ರಾಮದಲ್ಲಿ  ಶುಕ್ರವಾರ  ರಂದು  ಧರ್ಮಸ್ಥಳ  ಗ್ರಾಮಾಭಿವೃದ್ದಿ  ಯೋಜನೆ ಬಿ ಸಿ ಟ್ರಸ್ಟ್‌ ಅಡಿ, ಉಗರಗೋಳ ವಲಯದ ಕುರವಿನಕೊಪ್ಪ ಗ್ರಾಮದ ಶ್ರದ್ಧಾ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಹಿಳೆಯರಿಗೆ ಹಲವಾರು ಯೋಜನೆಗಳಿದ್ದು ಇದರ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪಯೋಜನಾಧಿಕಾರಿ ಚೇತನಾ ಹಳ್ಳಿ, ಒಕ್ಕೂಟದ ಅಧ್ಯಕ್ಷೆ ಮಹಾದೇವಿ ಜ್ಯೋತಿ, ಮಮತಾ ವೈದ್ಯ, ನಿರ್ಮಲಾ ಕಳಸನಗೌಡರ, ಮಡಿವಾಳಪ್ಪ ತಳವಾರ, ರೇಖಾ ಪಾಟೀಲ, ಗುರುಲಿಂಗಮ್ಮಾ ಹಿರೇಮಠ, ಜ್ಞಾನವಿಕಾಸದ ಸದಸ್ಯರು ಹಾಗೂ ಸಿಬ್ಬಂದಿ ಮತ್ತು  ಗ್ರಾಮಸ್ಥರು ಇದ್ದರು 

ಜ್ಞಾನವಿಕಾಸದ ಸದಸ್ಯರಿಂದ ವಿವಿಧ ಸಾಂಸ್ಕ್ರುತಿಕ ಕಾರ್ಯಕ್ರಮಗಳು ಜರುಗಿದವು.