ಲೋಕದರ್ಶನವರದಿ
ರಾಣೇಬೆನ್ನೂರು30: ನರೇಂದ್ರ ಮೋದಿಜಿಯವರು ಭವ್ಯ ಭಾರತ ದೇಶದ ಪ್ರಧಾನಿಯಾಗಿ ಎರಡನೇ ಭಾರಿಗೆ ಪುನರಾಯ್ಕೆಯಾಗಿ ದೇಶದ ಚುಕ್ಕಾಣಿ ಹಿಡಿಯುತ್ತಿರುವ ಈ ಶುಭ ಸಂದರ್ಭದಲ್ಲಿ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸಂಭ್ರಮಾಚರಣೆ ಆಚರಿಸಿದರು.
ಇದರ ಪ್ರಯುಕ್ತ ಹಲಗೇರಿ ಗ್ರಾಮದಲ್ಲಿ ನರೇಂದ್ರ ಮೋದಿ ಟೀ ಸ್ಟಾಲ್ನಲ್ಲಿ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಉಚಿತ ಟಿಫನ್ -ಚಹಾ ವ್ಯವಸ್ಥೆ ಮಾಡಲಾಯಿತು. ಈ ಅಭಿಮಾನದ ದ್ಯೋತಕವಾಗಿ ಟೀ ಸ್ಟಾಲ್ನ ಮಾಲೀಕರಾದ ಅಕ್ಕಮ್ಮ ವೀರನಗೌಡ ಕೋಟಿಹಾಳ (ಉಜ್ಜನಗೌಡ್ರ) ದಂಪತಿಗಳನ್ನು ಹಿರೇಕೇರೂರಿನ ಮಾಜಿ ಶಾಸಕ ಯು.ಬಿ.ಬಣಕಾರ ಮತ್ತು ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಡಾ|| ಬಸವರಾಜ ಕೇಲಗಾರ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ವಿಶ್ವನಾಥ ಪಾಟೀಲ, ಪವನಕುಮಾರ ಮಲ್ಲಾಡದ, ಪರಮೇಶಣ್ಣ ಗೂಳಣ್ಣನವರ, ಸಿದ್ದಯ್ಯ ಹಿರೇಮಠ, ರುದ್ರಗೌಡ ಕೋಟಿಹಾಳ, ಶಿವಪುತ್ರಪ್ಪ ದೇಸಾಯಿ, ಮಂಜಪ್ಪ ಕೈಲಾಸದ, ನಂದೆಪ್ಪ ದೇಸಾಯಿ, ರಾಜು ಕನ್ನಪ್ಪಳವರ, ಮಲ್ಲೇಶ ಹಲಗೇರಿ, ತ್ಯಾಗರಾಜ ಮೋಟಗಿ ಸೇರಿದಂತೆ ಅಭಿಮಾನಿಗಳು ಇದ್ದರು.