ಬಾಲಕಾರ್ಮಿಕ ಪದ್ಧತಿ ವಿರೋಧಿ ಜನಜಾಗೃತಿ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

Anti-child labor public awareness vehicle driven by district collector

ಬಾಲಕಾರ್ಮಿಕ ಪದ್ಧತಿ ವಿರೋಧಿ ಜನಜಾಗೃತಿ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ 

ಗದಗ 09 :  ಗದಗ   ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ(ರಿ) ಗದಗ ಇವರ ಸಂಯುಕ್ತ ಆಶ್ರಯದಲ್ಲಿ  ಗುರುವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ   ಬಾಲ ಕಾರ್ಮಿಕ  ಹಾಗೂ  ಕಿಶೋರ ಕಾರ್ಮಿಕ ಪದ್ಧತಿ  ವಿರೋಧಿ ಜನಜಾಗೃತಿ ಸಂಚಾರಿ ವಾಹನಕ್ಕೆ  ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಅವರು ಚಾಲನೆ ನೀಡಿದರು. 

ಜಿಲ್ಲಾಧಿಕಾರಿ  ಸಿ.ಎನ್‌. ಶ್ರೀಧರ್ ಅವರು ಮಾತನಾಡಿ  1986 ರ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ನಿಷೇದ ಮತ್ತು ನಿಯಂತ್ರಣ ತಿದ್ದುಪಡಿ ಕಾಯ್ದೆ 2016 ರ ಪ್ರಕಾರ 14 ವರ್ಷದ ಮೇಲ್ಪಟ್ಟ ಹಾಗೂ 18 ವರ್ಷ ಒಳಗಿನ  ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ಯಮದಲ್ಲಿ ಹಾಗೂ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಒಂದು ವೇಳೆ  ನೇಮಿಸಿಕೊಂಡಲ್ಲಿ  ಕನಿಷ್ಠ 20000 ದಿಂದ  ಗರಿಷ್ಠ 50000 ರ ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿಗಳಾದ ಶ್ರೀಶೈಲ್ ಸೊಮನಕಟ್ಟಿ, ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಸಂದೇಶ ಪಾಟೀಲ,  ಕಾರ್ಮಿಕ ನೀರೀಕ್ಷಕರಾದ ಉಮೇಶ ಹುಲ್ಲಣ್ಣವರ 2ನೇ ವೃತ್ತ ಗದಗ, ಕುಮಾರಿಸುಶ್ಮಾ 1ನೇ ವೃತ್ತ ಗದಗ  ಹಾಗೂ ಫಕಿರ​‍್ಪ ಹಡಗಲಿ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.   ಸದರಿ ವಾಹನವು ಜಿಲ್ಲೆಯಾದ್ಯಂತ 15 ದಿನಗಳವರೆಗೆ ಸಂಚರಿಸಲಿದೆ.