'ಕಲಾವಿದರಿಗೆ, ಕಲೆಗೆ ಪ್ರೋತ್ಸಾಹ ದೊರಕಲಿ'

ಲೋಕದರ್ಶನ ವರದಿ

ರಾಯಬಾಗ 27: ನಮ್ಮ ದೇಶ ಕಲೆ, ಸಂಸ್ಕೃತಿ ಉಳಿಯಬೇಕಾದರೆ ಕಲಾವಿದರಿಗೆ ಮತ್ತು ಕಲೆಗೆ ಪ್ರೋತ್ಸಾಹ ದೊರಕಬೇಕು. ಸರಕಾರದಿಂದ ಗ್ರಾಮೀಣ ಬಡಕಲಾವಿದರಿಗೆ ಎಲ್ಲ ಸೌಲತ್ತುಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಶಾಸಕ ಡಿ.ಎಮ್.ಐಹೊಳೆ ಹೇಳಿದರು. 

ತಾಲೂಕಿನ ಮಂಟೂರ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಬೆಳಗಾವಿ ಹಾಗೂ ಬಸವೇಶ್ವರ ಕಲಾ ಪೋಷಕ ಸಂಘ ಮಂಟೂರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ಬಸವೇಶ್ವರ ಕಲಾ ಪೋಷಕ ಸಂಘ ಉದ್ಘಾಟನೆ ಅಂಗವಾಗಿ ನಡೆದ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾ ಸಂಘಗಳು ಮತ್ತು ಕಲಾವಿದರು ಕಲೆಯನ್ನು ಉಳಿಸಿ, ಬೆಳೆಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. 

ಭೆಂಡವಾಡ ವಿರಕ್ತಮಠದ ಗುರುಸಿದ್ಧೇಶ್ವರ ಸ್ವಾಮಿಜಿಯವರು ಸಾನಿಧ್ಯವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಟೂರ ಸಿದ್ಧಾರೂಢ ಮಠದ ಮಾತೋಶ್ರೀ ಗಂಗಮ್ಮಾತಾಯಿ, ಬಸಯ್ಯ ಹಿರೇಮಠ, ಸಿದ್ರಾಮಯ್ಯ ಹಿರೇಮಠ, ಬಸಯ್ಯಸ್ವಾಮಿ, ಅಪ್ಪಾಸಾಹೇಬ ದೇಸಾ ಉಪಸ್ಥಿತರಿದ್ದರು.