ಅಭಿವೃದ್ಧಿಯಲ್ಲಿ ಮೂಂಚೂಣಿಯಲ್ಲಿದೆ ಅಥಣಿ ವಿಧಾನಸಭಾ ಕ್ಷೇತ್ರ: ಚಿದಾನಂದ
ಸಂಬರಗಿ 28: ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮೂಂಚೂಣಿಯಲ್ಲಿದ್ದು, ಪ್ರತಿ ಗ್ರಾಮದ ಜಮೀನಿಗೆ ನೀರು ತಲುಪಲು ಹಾಗೂ ಅಮ್ಮಾಜೇಶ್ವರಿ ಏತ ನೀರಾವರಿ ಶೀಘ್ರದಲ್ಲಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಕೊಟ್ಟು ಹರಿತ್‌ಕ್ರಾಂತಿ ಮಾಡುವ ಗುರಿ ಮಾಜಿ ಉಪಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ ಗುರಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಯುವ ನೇತಾರ ಚಿದಾನಂದ ಸವದಿ ಹೇಳಿದರು.
ಮಸರಗುಪ್ಪಿ ಗ್ರಾಮದಲ್ಲಿ ಹಾಗು ಇನ್ನೀತರ ಗ್ರಾಮದಲ್ಲಿ 6 ಅಂಗನವಾಡಿ ಕಟ್ಟಡ ಕಾಮಗಾರಿ ಸುಮಾರು 1 ಕೋಟಿ 20 ಲಕ್ಷ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಅವರು ಈಗಾಗಲೇ ಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ಹೆಚ್ಚು ಒತ್ತು ನೀಡಿ ಅಥಣಿ ಪೂರ್ವ ಭಾಗದಲ್ಲಿ ಕೆರೆ ತುಂಬುವ ಯೋಜನೆ ಜಾರಿಗೆ ಬಂದಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವ ಒಂದೇ ಗುರಿ ಹೊಂದಿದ್ದಾರೆ. ಕ್ಷೇತ್ರದಲ್ಲಿ ಶಾಲಾ ಕೊಠಡಿ, ರಸ್ತೆ ಡಾಂಬರಿಕರಣ, ಶುದ್ಧ ಕುಡಿಯುವ ನೀರಿನ ಘಟಕ, ಅಥಣಿ ಪಟ್ಟಣಕ್ಕೆ 24ಘಿ7 ಕುಡಿಯುವ ನೀರಿನ ಕಾಮಗಾರಿ ಭರದಿಂದ ಸಾಗುತ್ತಿದೆ. ಜನರ ಸಹಕಾರದಿಂದ ರಾಜ್ಯದಲ್ಲಿ ಅಥಣಿ ವಿಧಾನ ಸಭಾ ಕ್ಷೇತ್ರ ಮಾದರಿ ಮಾಡುವ ಗುರಿ ಹೊಂದಿದ್ದಾರೆ. ಜನರ ಸಹಕಾರದಿಂದ ಅಥಣಿ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಾ ಇದೆ.
ಸಂಕೋನಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು ಶಂಕರ ಗಡದೆ, ಶಿವರುದ್ರ ಗುಳಪ್ಪನವರ, ಅರುಣ ಬಾಶಿಂಗೆ, ಶ್ರೀಶೈಲ ನಾಯಿಕ ಪಿ.ಕೆ.ಪಿ.ಎಸ್. ಅಧ್ಯಕ್ಷರು, ಅರ್ಜುನ ನಾಯಿಕ, ಸಿದ್ದು ನಾಯಿಕ ಪಿ.ಕೆ.ಪಿ.ಎಸ್. ದೇವರಡ್ಡೇರಹಟ್ಟಿ ಮುಖ್ಯ ಕಾರ್ಯ ನಿರ್ವಾಹಕರು, ರಾವಸಾಬ ನಾಯಿಕ, ಪರಶುರಾಮ ಸೋಂದಕರ, ಧರ್ಮು ಹಲ್ಯಾಳ, ಕೃಷ್ಣಾ ಸಲಗರ, ಸಿದಲಿಂಗ ನಾಯಿಕ, ಕುಮಾರ ಅಲಾಸೆ, ಚಂದು ಪವಾರ, ವಿನಾಯಕ ಕರಬಸನವರ, ಮುತ್ತಪ್ಪ ಜಮಖಂಡಿ, ರಾಮು ನಾಯಿಕ, ಹಣಮಂತ ನಾಯಿಕ, ಮಂಜುನಾಥ ಕುಲಕರ್ಣಿ, ಸಿ.ಡಿ.ಪಿ.ಓ ರೇಣುಕಾ ಹೊಸಮನಿ, ಜಿಲ್ಲಾ ಪಂಚಾಯತ ಅಭಿಯಂತರರು ವೀರಣ್ಣ ವಾಲಿ ಸೇರಿದಂತಹ ಗಣ್ಯರು ಉಪಸ್ಥಿತರಿದ್ದರು.
ಹೊಸಟ್ಟಿ, ದೇವರಡ್ಡೇರಹಟ್ಟಿ, ಸಂಕೋನಟ್ಟಿ ಗ್ರಾಮೀಣ ಗಣೇಶ ನಗರ, ಇನ್ನೀತರ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಪ್ರಾರಂಭ ಮಾಡಿದರು.