ಬಿ. ಎಫ್‌. ಟಿ ಗಳಿಗೆ ಭದ್ರತೆಗೆ ಸರ್ಕಾರ ಅರೋಗ್ಯ ವಿಮೆ ಕಲ್ಫಿಸಬೇಕು : ಭೀಮೇಶ್ ಒತ್ತಾಯ

B. F. Govt should provide health insurance for T's security: Bhimesh urges

ಬಿ. ಎಫ್‌. ಟಿ ಗಳಿಗೆ ಭದ್ರತೆಗೆ ಸರ್ಕಾರ ಅರೋಗ್ಯ ವಿಮೆ ಕಲ್ಫಿಸಬೇಕು : ಭೀಮೇಶ್ ಒತ್ತಾಯ  

ಹಾವೇರಿ  30: ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಬಿ.ಎಫ್‌.ಟಿಗಳು ಕೇಂದ್ರ ಸರ್ಕಾರದ ಬಹು ಆಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮ-ನರೇಗಾ ಯೋಜನೆಯಲ್ಲಿ ಕ್ಷೇತ್ರ ಮಟ್ಟದ (ತಂತ್ರಜ್ಞ) ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ರೀತಿಯ ಭದ್ರತೆಯಿಲ್ಲದೇ ಅನಾರೋಗ್ಯ ಕಾರಣಗಳಿಂದ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಇವರನ್ನೇ ನಂಬಿರುವ ಕುಟುಂಬಸ್ಥರು ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ಈ ನಿಟ್ಟಿನಲ್ಲಿ ಘನ ಸರ್ಕಾರವು ಬಿ.ಎಫ್‌.ಟಿಗಳಿಗೆ ಆರೋಗ್ಯ ವಿಮೆ ಕಲ್ಪಿಸಬೇಕೆಂದು ಬಿ.ಎಫ್‌.ಟಿ ಸಂಘದ ರಾಜ್ಯ ಅಧ್ಯಕ್ಷ ಕೆ.ಆರೀ​‍್ಭಮೇಶ್ ಒತ್ತಾಯಿಸಿದ್ದಾರೆ.ಜಿಲ್ಲೆಯ ಹಾನಗಲ್ ತಾಲೂಕಿನ ಗುಡಗುಡಿ ಗ್ರಾಮದ ನಿವಾಸಿಯಾದ ಬಿ.ಎಫ್‌.ಟಿ ನಿಂಗಯ್ಯ ಕುಲಕರಣಿಯವರು ಅಕಾಲಿಕ ಮರಣ ಹೊಂದಿದ್ದು, ಇದರ ಪ್ರಯುಕ್ತ ಕ.ರಾ.ಬೆ.ಫೂ. ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘ(ರಿ) ರಾಜ್ಯ ಸಂಘಟನೆಯ ನಿರ್ಣಯದಂತೆ ಮೃತರ ಕುಟುಂಬಕ್ಕೆ 1 ಲಕ್ಷ ಸಹಾಯಧನ ನೀಡುವುದರ ಮೂಲಕ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ಸಂಘಟನೆಯು ತೆಗೆದುಕೊಂಡಿರುವ ತೀರ್ಮಾನವು ತುಂಬಾ ಹೆಮ್ಮೆಯ ವಿಚಾರ ನಮ್ಮ ಸಂಘಟನೆಯಿಂದ  ಪ್ರಸ್ತುತದವರೆಗೆ ಸುಮಾರು ಎಂಟು ಜನ ಸದಸ್ಯರು ಅಕಾಲಿಕ ಮರಣ ಹೊಂದಿದ್ದಾರೆ.  

ಹಲವಾರು ಜನರಿಗೆ ಕೆಲಸದ ಸಂದರ್ಭದಲ್ಲಿ ಅಪಘಾತ ಸಂಭವಿಸುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೇವಾವಧಿಯಲ್ಲಿ ಅಕಾಲಿಕ ಮರಣ ಹೊಂದುತ್ತಿರುವ ಬಿ.ಎಫ್‌.ಟಿಗಳಿಗೆ ಸರ್ಕಾರದ ವತಿಯಿಂದ ಇ.ಎಸ್‌.ಐ.ಪಿ.ಎಫ್ ಮತ್ತು ಆರೋಗ್ಯ ವಿಮಾ ಸೌಲಭ್ಯವನ್ನು ನೀಡುವುದರ ಮೂಲಕ ಮೃತರ ಕುಟುಂಬಕ್ಕೆ ಸರ್ಕಾರ ರಕ್ಷಣೆಗೆ ಬರಬೇಕೆಂದು ಒತ್ತಾಯಿಸಿದರು.ಹಾನಗಲ್ ತಾಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಪರಶುರಾಮ್ ಪೂಜಾರ ಮಾತನಾಡಿ, ನರೇಗಾ ಯೋಜನೆಯು ರಾಷ್ಟ್ರ ಮಟ್ಟದ ಬಹು ದೊಡ್ಡ ಯೋಜನೆಯಾಗಿದ್ದು, ಈ ಯೋಜನೆಯ ಯಶಸ್ವಿಯಲ್ಲಿ ಬಿ.ಎಫ್‌.ಟಿಗಳ ಪಾತ್ರ ಅತ್ಯಂತ ಅಮೂಲ್ಯವಾದದ್ದು ಮತ್ತು ಯೋಜನೆ ಅನುಷ್ಠಾನದಲ್ಲಿ ಬಹಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿ ಯಾವ ಸಂಘಟನೆಯು ಮಾಡದಂತಹ ದೃಢ ನಿರ್ಧಾರ ಮಾಡಿ ಸಹಾಯ ಧನ ನೀಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಎನ್‌.ಈ.ಡಬ್ಲ್ಯೂ.ಎ.ಕೆ. ಹಾವೇರಿ ಜಿಲ್ಲಾ ಸಂಘದ ಅಧ್ಯಕ್ಷ ಸಿದ್ದನಗೌಡ್ರು, ಬಿ.ಎಫ್‌.ಟಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ರಾಜ್ಯ ಖಜಾಂಚಿ  ಕಿರಣಕುಮಾರ, ರಾಜ್ಯ ಕಾರ್ಯಾಧ್ಯಕ್ಷ ಬಸವರಾಜು ಎಂ, ರಾಜ್ಯ ಸಂಘಟನೆ ಆಡಳಿತ ನಿರ್ದೇಶಕ ಬಸವರಾಜ್ ಹರಪನಹಳ್ಳಿ, ಹಾವೇರಿ ಜಿಲ್ಲಾಧ್ಯಕ್ಷ ಮಹೇಶ ಕುಪ್ಪೆಲೂರ, ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.