ಬಿ.ಜೆ.ಪಿ. ಎಸ್.ಸಿ. ಮೋರ್ಚಾ ಹೇಳಿಕೆಗೆ ಖಂಡನೆ
ವಿಜಯಪುರ 02:ಮೊನ್ನೆ ದಿನ ಬಿ.ಜೆ.ಪಿ. ಎಸ್.ಸಿ. ಮೊರ್ಚಾದ ಯುವ ನಾಯಕರು ಸುದ್ಧಿಗೋಷ್ಠಿಯಲ್ಲಿ ಡಾಽಽ ಬಾಬಾಸಾಹೇಬ ಅಂಬೇಡ್ಕರ್ ಕುರಿತು ಸದನದಲ್ಲಿ ಅಮಿತ ಶಾ ಹೇಳಿಕೆಯನ್ನು ಆತ್ಮವಂಚನೆ ಮಾಡಿಕೊಂಡು ಸಮರ್ಥಿಸಿಕೊಂಡಿದ್ದು ನಾಚಿಕೆಗೇಡಿತನ.
ಉಮೇಶ ಕಾರಜೋಳ ಹಾಗೂ ಗೋಪಾಲ ಘಟಕಾಂಬಳೆ ಅವರೇ ದಲಿತ ಸಂಘಟನೆಗಳು ಸಂವಿಧಾನಕ್ಕೆ, ಡಾಽಽ ಬಾಬಾಸಾಹೇಬಿಗೆ, ದಲಿತ ಸಮಾಜಕ್ಕೆ ಅವಮಾನ ಆದಾಗ ಹೋರಾಟ ಮಾಡುವುದು ತಪ್ಪಾ ? ನಿಮ್ಮ ಅಸ್ತಿತ್ವದ ಬಗ್ಗೆ ಬೇರೆ ಯಾರಾದರೂ ನಿಂದಿಸಿ ನಿಮ್ಮ ದೇವರನ್ನು ನಿಂದಿಸಿದರೆ ತಾವು ಏನು ಮಾಡುತ್ತಿದ್ದೀರಿ ? ಅಮಿತ ಶಾ ಅವರು ಸದನದಲ್ಲಿ ಅಂಬೇಡ್ಕರ್ ಅಂಬೇಡ್ಕರ್ ಅಂತಾ 7 ಸಲ ಫ್ಯಾಷನ್ ಆಗಿದೆ ಅಂತಾ ಹೇಳಿ. ದೇವರಗಿಂತ ಅಂಬೇಡ್ಕರ ದೊಡ್ಡವನಲ್ಲ ಅಂತಾ ಹೇಳಿಕೆ ಕೊಟ್ಟಿದ್ದು ಅಂಬೇಡ್ಕರ್ ಹಾಗೂ ದಲಿತ ಸಮಾಜಕ್ಕೆ ಎಷ್ಟು ನೋವಾಗುತ್ತದೆ ಎಂಬುದು ತಮಗೆ ಗೊತ್ತಾ ? ಬಿ.ಜೆ.ಪಿ. ಪಕ್ಷದ ಆದೇಶವನ್ನು ಪಾಲಿಸಲು ತಮ್ಮ ಸ್ವಾಭಿಮಾನ ತಮ್ಮ ಅಸ್ತಿತ್ವವನ್ನೇ ಮರೆತು ದಲಿತ ಸಮಾಜದ ಸ್ಥಿತಿಗತಿಯನ್ನು ಪರಿಗಣಿಸದೇ ದಲಿತರಿಗೆ ಅನ್ಯಾಯ ಮಾಡುತ್ತಾ ತಾವೊಂದು ಅಸ್ಪ್ರಶ್ಯ ಸಮಾಜದವರೆಂದು ಮರೆತಿರಾ ? ಡಾಽಽ ಬಾಬಾಸಾಹೇಬ ಅಂಬೇಡ್ಕರ ರವರು ಮೀಸಲಾತಿಗಾಗಿ ಹೋರಾಟ ಮಾಡಿ ಸಂವಿಧಾನ ಬರೆದು ದಲಿತರಿಗೆ ಸ್ಥಿತಿಗತಿಗಳ ಬಗ್ಗೆ ಹಗಲಿರುಳು ಚಿಂತನೆ ಮಾಡಿ ಶ್ರಮ ಪಟ್ಟು ನಮ್ಮನ್ನೆಲ್ಲ ಒಳ್ಳೆಯ ಸ್ಥಿತಿವಂತವರನ್ನಾಗಿ ಮಾಡಿದ್ದು ತಪ್ಪಾ ?
ಇವುಗಳೆಲ್ಲವನ್ನೂ ತಿಳಿದಿದ್ದೂ ಬಿ.ಜೆ.ಪಿ. ಪಕ್ಷದ ಓಲೈಕೆಗಾಗಿ ಆತ್ಮವಂಚನೆ ಮಾಡಿಕೊಂಡು ಸಮಾಜವನ್ನು ದಲಿತ ಸಂಘಟನೆಗಳನ್ನು ಧಿಕ್ಕರಿಸಿ ಮಾತನಾಡುವುದು ಎಷ್ಟು ಸರಿ ? ದಲಿತ ಸಂಘಟನೆಗಳು ಹಗಲಿರುಳು ಹೋರಾಟ ಮಾಡುವುದು ದಲಿತರ ಹಿತ, ಸಂವಿಧಾನದ ರಕ್ಷಣೆ, ಅಸ್ಪ್ರಶ್ಯತೆಯ ವಿರುದ್ಧ ಹೋರಾಟ ಮಾಡುತ್ತಾ ಯಾವುದೇ ದಲಿತ ಗಣ್ಯ ವ್ಯಕ್ತಿಗಳ ಬಗ್ಗೆ ಅವಮಾನ ಅನ್ಯಾಯವಾದಾಗ ಚಳುವಳಿ ಮಾಡುವುದು ಕರ್ತವ್ಯವಾಗಿದೆ. ಅದು ತಮ್ಮಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ.
ಡಾಽಽ ಅಂಬೇಡ್ಕರ ಬಗ್ಗೆ ಬಿ.ಜೆ.ಪಿ. ಯವರಿಗೆ ಕಾಳಜಿ ಇದ್ದರೆ ಎಸ್.ಸಿ. ಮೋರ್ಚಾದ ಮುಖಂಡರೆ ಸಂವಿಧಾನದ ಅವಕಾಶ ಪಡೆದು ಪತ್ರಿಕಾ ಹೇಳಿಕೆ ನೀಡುತ್ತಿರುವ ಎಸ್.ಸಿ. ಮೋರ್ಚಾದ ಎಲ್ಲ ಮುಖಂಡರೆ ಅನಂತಕುಮಾರ ಹೆಗ್ಡೆ ಬಿ.ಜೆ.ಪಿ. ಯವರು ನಾವು ಬಂದಿರುವುದೇ ಸಂವಿಧಾನ ಬದಲಾವಣಣೆ ಮಾಡುವುದಕ್ಕೆ ಅಂತಾ ಹೇಳಿಕೆ ಕೊಟ್ಟಾಗ, ಆಗ ಬೀದಿಗಿಳಿದು ಹೋರಾಟ ಮಾಡಿದವರು ನೀವಾ, ಅಥವಾ ದಲಿತ ಸಂಘಟನೆಗಳಾ, ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಲ್ಲದೇ ಪೇಜಾವರ ಶ್ರೀಗಳು ಭಾರತದ ಸಂವಿಧಾನವನ್ನು ಒಪ್ಪುವುದಿಲ್ಲ ಎಂದಾಗ ಬಿ.ಜೆ.ಪಿ. ಯ ಯುವ ಮೋರ್ಚಾ ಎಲ್ಲಿ ಹೋಗಿತ್ತು ? ಆಗ ಹೋರಾಟ ಮಾಡಿದವರು ದಲಿತ ಸಂಘಟನೆಯವರು.
ನಾವು ದಲಿತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷದ ಗುಲಾಮರೂ ಅಲ್ಲ ಪರವಾಗಿಯೂ ಅಲ್ಲ ನಮ್ಮ ಸಮುದಾಯದ ಬಗ್ಗೆ ಯಾರು ಹಿತ ಬಯಸುವರು, ಸಂವಿಧಾನದ ಬಗ್ಗೆ ಹಿತ ಬಯಸುವವರು, ಸಂವಿಧಾನ ರಕ್ಷಣೆ ಮಾಡಿ ಬಾಬಾಸಾಹೇಬರ ಹಿತ ಬಯಸುವ ಅವರ ಜೊತೆ ನಾವು. ನೀವು ಯಾವ ಪಕ್ಷದಲ್ಲಿದ್ದಿರೋ ಆ ಪಕ್ಷದಲ್ಲಿ ನಮ್ಮ ದಲಿತ ಸಮಾಜದವರಿಗೆ ಅನ್ಯಾಯವಾದಾಗ ಧ್ವನಿ ಎತ್ತುವವರರು ನೀವಲ್ಲ, ದಲಿತ ಸಂಘಟನೆಗಳು. ನಾವು ನಿಮ್ಮ ದೃಷ್ಟಿಯಲ್ಲಿ ನಮ್ಮ ಹೇಳಿಕೆ ಫ್ಯಾಷನ್ ಅಲ್ಲ ಶತಶತಮಾನಗಳಿಂದ ನೊಂದು ಅಸ್ಪ್ರಶ್ಯತೆಯ ಕರಾಳ ಅನುಭವವನ್ನು ಅನುಭವಿಸಿ ನೋವಿನಿಂದ ಅಷ್ಟೇ ಕಠೋರವಾಗಿ ನಿಮಗೆ ಎಚ್ಚರಿಕೆ ಕೊಡುತ್ತಿದ್ದೇವೆ. ಒಬ್ಬ ಅಸ್ಪ್ರಶ್ಯದ ಅನುಭವ ಆ ಅಸ್ಪೃಶ್ಯನಿಗೇ ಗೊತ್ತು. ನಿಮ್ಮಂತ ಮೀಸಲಾತಿಯ ಫಲಾನುಭವಿ ಉಂಡು ಮನೆಗೆ ಎರಡು ಬಗೆಯುವ ನಿಮ್ಮಂತ ಕೃತಜ್ಞಹೀನರಲ್ಲ. ನಾವು ದಲಿತ ಮುಖಂಡರು ಇನ್ನು ಮುಂದೆ ಸಮಾಜದ ಸಂಘಟನೆಗಳ ಬಗ್ಗೆ ಪರಿಜ್ಞಾನ ಇಟ್ಟುಕೊಂಡು ಮಾತನಾಡಲು ಎಚ್ಚರ ಕೊಡುತ್ತಿದ್ದೇವೆ. ಎಚ್ಚರ ! ಎಚ್ಚರ ! ಎಚ್ಚರ !