ಬ್ಯಾಡಗಿ: ಧಾರಾಕಾರವಾಗಿ ಸುರಿದ ಮಳೆ

ಲೋಕದರ್ಶನ ವರದಿ

ಬ್ಯಾಡಗಿ 17: ಮಂಗಳವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ರಾತ್ರಿವರೆಗೂ ಸುರಿದ ಭಾರಿ ಮಳೆಯಿಂದ ಕೆಲಕಾಲ ಪಟ್ಟಣದ ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿತು.

 ಬೆಳಿಗ್ಗೆ ಪ್ರಖರ ಬಿಸಿಲಿ ಬಿದ್ದಿದ್ದು ಮಧ್ಯಾಹ್ನದ ಬಳಿಕ ಸಣ್ಣದಾಗಿ ಮಳೆ ಸುರಿಯಿತು, ಆದರೆ ಸಂಜೆ 5 ಗಂಟೆಯ ಬಳಿಕ ಎಕಾಎಕಿ ಸುರಿದ ಮಳೆ ಸಂತೋಷದ ಜೊತೆಗೆ ಆತಂಕವನ್ನು ತಂದೊಡ್ಡಿತು..

 ಗುಡುಗು ಸಮೇತ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಭಸವಾಗಿ ನೀರು ಹರಿದಿದ್ದು ಚರಂಡಿಗಳು ತುಂಬಿ ರಸ್ತೆ ಮೇಲೆ ನೀರೆಲ್ಲಾ ಹರಿಯಿತು. ಇದಿರಂದಾಗಿ ಮುಖ್ಯರಸ್ತೆಯಲ್ಲಿ ವಾಸಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಯಿತು.

   ತಾಲೂಕಿನಾದ್ಯಂತ ಉತ್ತಮ ಮಳೆ: ಬ್ಯಾಡಗಿ ಮಾತ್ರವಲ್ಲದೇ ತಾಲೂಕಿನ ಕಾಗಿನೆಲೆ, ಮಾಸಣಗಿ, ಬನ್ನಿಹಟ್ಟಿ, ಕಲ್ಲೇದೇವರು, ಬುಡನಪಹಳ್ಳಿ ಮೋಟೆಬೆನ್ನೂರ ಸೇರಿದಂತೆ ಹಲವಡೆಗಳಲ್ಲಿ ಗುಡುಗು ಸಹಿತ ಮಳೆಯಾದ ಬಗ್ಗೆ ವರದಿಯಾಗಿದೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಆದರೆ ಯಾವುದೇ ಪ್ರಾಣಾಪಾಯವಾದ ಬಗ್ಗೆ ತಿಳಿದು ಬಂದಿಲ್ಲ.