ವಾಹನ ಚಲಾಯಿಸುವಾಗ ಮುಂಜಾಗ್ರತೆ ವಹಿಸಿ -ವಿನೋದ ಮುಕ್ತೆದಾರ

Be careful while driving - enjoy yourself

ವಾಹನ ಚಲಾಯಿಸುವಾಗ ಮುಂಜಾಗ್ರತೆ ವಹಿಸಿ  -ವಿನೋದ ಮುಕ್ತೆದಾರ 

ಹುಬ್ಬಳ್ಳಿ 24: ಜನರು ವಾಹನ ಚಲಾಯಿಸುವಾಗ ಮುಂಜಾಗ್ರತೆ ವಹಿಸಬೇಕು ಎಂದು ಸಹಾಯಕ ಪೊಲೀಸ್ ಆಯುಕ್ತರಾದ ವಿನೋದ ಮುಕ್ತೆದಾರ ಹೇಳಿದರು.  

ಇಂದು ಹೊಸೂರು ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಅವಸರವಾಗಿ ವಾಹನವನ್ನು ಚಲಾಯಿಸುವುರಿಂದ ಅಪಘಾತ ಸಂಭವಿಸುತ್ತವೆ. ಹೀಗಾಗಿ ನಿಧಾನಗತಿಯಲ್ಲಿ ವಾಹನ ಚಲಾಯಿಸಬೇಕು. ವಾಹನಗಳಿಗೆ ವಿಮೆ ಮಾಡಿಸಬೇಕು. ಚಿಕ್ಕಮಕ್ಕಳಿಗೆ ಬೈಕ್, ಕಾರ್ ಗಳನ್ನು ಚಲಾಯಿಸಲು ಕೊಡಬಾರದು. ಸಂಚಾರ ನಿಯಮಗಳನ್ನು ತಪ್ಪದೇ ಅನುಸರಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.  

ಶಾಲಾ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರಿಗೆ ರಸ್ತೆ ಸುರಕ್ಷತಾ ಕರಪತ್ರಗಳನ್ನು ವಿತರಿಸಿ, ಅರಿವು ಮೂಡಿಸಲಾಯಿತು.  

ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್‌.ಎಂ. ರಾಮನಗೌಡರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ.ದಾಮೋದರ, ಹಿರಿಯ ಮೋಟಾರು ವಾಹನ ನೀರೀಕ್ಷರಾದ ಎಸ್‌.ಡಿ.ಬೆಲ್ಲದ್, ಅಧೀಕ್ಷಕರಾದ ಕೆ.ಎಂ.ಗೀತಾ, ನಿಂಗಪ್ಪ ಬಳ್ಳೂರು, ಪಿ.ವೈ.ಗಡೇದ, ವಿಜಯಕುಮಾರ್ ಕುಮಟಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.