ಬೆಳಗಾವಿ ಬಸವೇಶ್ವರ ಕೋ-ಆಪ್‌ರೇಟಿವ ಅತ್ಯುತ್ತಮ ಸಹಕಾರಿ ಬ್ಯಾಂಕ

Belagavi Basaveshwar Co-operative is the best co-operative bank

ಬೆಳಗಾವಿ ಬಸವೇಶ್ವರ ಕೋ-ಆಪ್‌ರೇಟಿವ ಅತ್ಯುತ್ತಮ ಸಹಕಾರಿ ಬ್ಯಾಂಕ  

ಬೆಳಗಾವಿ 29: ಹೆಮ್ಮೆಯ ಆರ್ಥಿಕ ಸಂಸ್ಥೆಯಾದ ಬೆಳಗಾವಿ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ ಬೆಳಗಾವಿ ಬ್ಯಾಂಕಿಗೆ ಪ್ರತಿಷ್ಠಿತ ಏವೀಸ್ ಪಬ್ಲಿಕೇಶನ, ಕೊಲ್ಹಾಪೂರ ಇವರು ಆಂಬಿ ವ್ಯಾಲಿ ಸಿಟಿ, ಲೊನವಳಾದಲ್ಲಿ ದಿ. 27 ರಿಂದ 29ರಂದು ಆಯೋಜಿಸಿದ ಬ್ಯಾಂಕೋ ಬ್ಲೂ ರಿಬ್ಬನ -2024 ವಾರ್ಷಿಕ ಸಮ್ಮೇಳನ ಸಮಾರಂಭದಲ್ಲಿ ಠೇವಣಿ ವಿಭಾಗದಲ್ಲಿ ಉತ್ತಮ ಕಾರ್ಯನಿರ್ವಹಣೆಗೆ “ಅತ್ಯುತ್ತಮ ಸಹಕಾರಿ ಬ್ಯಾಂಕು” ಪ್ರಶಸ್ತಿ ಲಭಿಸಿದೆ, ಇದು ಬ್ಯಾಂಕಿನ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಪರಿಣಮಿಸಿದೆ.  ಈ ಗೌರವಾನ್ವಿತ ಪ್ರಶಸ್ತಿ ಸಮಾರಂಭವು ದಿ. 27ರಿಂದ 29ರಂದು ಲೊನವಳಾದ ಆಂಬಿ ವ್ಯಾಲಿ ಸಿಟಿಯಲ್ಲಿ ಅತ್ಯಂತ ವೈಭವದಿಂದ ನೆರವೇರಿತು. ದೇಶಾದ್ಯಂತ ನೂರಾರು ಸಹಕಾರಿ ಬ್ಯಾಂಕುಗಳ ನಡುವೆ ನಡೆದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಬ್ಯಾಂಕು ಠೇವಣಿ ವಿಭಾಗದಲ್ಲಿ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.ಈ ವಿಶಿಷ್ಟ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ರಮೇಶ ಕಳಸಣ್ಣವರ, ನಿರ್ದೇಶಕ ಬಾಳಪ್ಪಾ ಕಗ್ಗಣಗಿ, ವಿಜಯಕುಮಾರ ಅಂಗಡಿ, ಪ್ರಕಾಶ ಬಾಳೇಕುಂದ್ರಿ, ಬಸವರಾಜ ಝೆಂಡ ಮತ್ತು ಬಸವರಾಜ ಉಪ್ಪಿನ ಇವರುಗಳು ಸದರೀ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಭಾರತೀಯ ರಿಸರ್ವ ಬ್ಯಾಂಕ, ಮುಂಬೈನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಭಾರ್ಗೆಶ್ವರ ಬ್ಯಾನರ್ಜಿ ಇವರಿಂದ ಸ್ವೀಕರಿಸಿದರು.  ಅಧ್ಯಕ್ಷ ರಮೇಶ ಕಳಸಣ್ಣವರ ಇವರು ಮಾತನಾಡಿ ಬ್ಯಾಂಕಿನ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಏವೀಸ್ ಪಬ್ಲಿಕೇಶನಗೆ ಧನ್ಯವಾದಗಳನ್ನು ತಿಳಿಸಿದರು.  ಈ ಸಾಧನೆಯ ಹಿಂದೆ ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರ ನಿರಂತರ ಬೆಂಬಲ ಮತ್ತು ಸಹಕಾರವಿರುವುದಾಗಿ ಅವರು ಹೇಳಿದರು.