ಬಳ್ಳಾರಿ: 'ಮತ್ತೆ ಕಲ್ಯಾಣ' ಕಾರ್ಯಕ್ರಮ: ಸಾರ್ವಜನಿಕ ಸಮಾವೇಶ

ಬಳ್ಳಾರಿ; ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 'ಮತ್ತೆ ಕಲ್ಯಾಣ' ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭಾರತ ಬಹುತ್ವದ ದೇಶ. ಆದರೆ ಇಂದು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವುದು ತುಂಬ ಕಷ್ಟಕರವಾಗುತ್ತಿದೆ. ಧರ್ಮದಲ್ಲೂ ಕೊಳ್ಳುಬಾಕು ಸಂಸ್ಕೃತಿ ಕಾಲಿಟ್ಟದೆ ಎಂದರು.    

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಭುಸ್ವಾಮಿಗಳು ಮಾತನಾಡಿ ಸರ್ವ ಧರ್ಮ ಸಮನ್ವಯ ಸಾರುವ ಕೆಲಸ ಮತ್ತೆ ಕಲ್ಯಾಣದ್ದು. ಬಳ್ಳಾರಿಯಲ್ಲಿ ಕನ್ನಡ ತೆಲಗು ಭಾಷಾ ಸಾಮರಸ್ಯವಿದೆ. ಬುದ್ಧ, ಪೈಗಂಬರ್, ಏಸು ಮುಂತಾದ ಎಲ್ಲರೂ ಕಲ್ಯಾಣವನ್ನು ಬಯಸಿದ್ದರು. ಸಾಧು ಸಂತರು ಜಾತಿ, ಮತ, ದೇಶ, ಭಾಷೆಗಳೆನ್ನುವ ಸಂಕುಚಿತತೆಯನ್ನು ತೊಡೆಯಬೇಕೆಂದರು.

ಕನ್ನಡದ ವಚನ ಧರ್ಮ ಕುರಿತಂತೆ ಪ್ರೊ.ಸಿದ್ಧರಾಮಯ್ಯ ಮಾತನಾಡಿ ಇಂದು ಯುವ ಜನತೆಯೊಂದಿಗೆ ಮಾತುಕತೆ ಕಡಿಮೆಯಾಗಿರುವುದರಿಂದಲೇ ಯುವಕರು ದಿಕ್ಕುತಪ್ಪುತ್ತಿದ್ದಾರೆ ಎಂದರು.   

ಹೆಚ್ ಎಸ್ ದ್ಯಾಮೇಶ್ 

ವಿದ್ಯಾಥರ್ಿಗಳೊಂದಿಗೆ ಸಂವಾದ  

'ಮತ್ತೆ ಕಲ್ಯಾಣ'ದ ನಿಮಿತ್ತ ಇಲ್ಲಿನ ಬಸವರಾಜೇಶ್ವರಿ ಕಾಲೇಜಿನ ಶರಣ ಮಂಟಪದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಪ್ರಶ್ನೆಗಳಿಗೆ ಉತ್ತರಿಸುತ್ತ ಮನುಷ್ಯ ಹುಟ್ಟುತ್ತ ವಿಶ್ವಮಾನವ, ಬೆಳೆದಂತೆ ಅಲ್ಪ ಮಾನವನಾಗುತ್ತಿದ್ದಾನೆ. ಬಾಲ್ಯದಲ್ಲಿ ಮಕ್ಕಳಿಗೆ ಕ್ರೂರ ಜೀವಜಂತುಗಳ ಮೇಲೂ ದ್ವೇಷವಿರುವುದಿಲ್ಲ. ಕ್ರಮೇಣ ದ್ವೇಷ, ಅಸೂಯೆ, ಸ್ವಾರ್ಥ ಮುಂತಾದವುಗಳನ್ನು ಬೆಳೆಸಿಕೊಳ್ಳುತ್ತ ತನ್ನ ಒಡಹುಟ್ಟಿದವರನ್ನೇ ದ್ವೇಷಿಸುವ ಹಂತಕ್ಕೆ ಬರುತ್ತಾನೆ. ಈ ಅಲ್ಪ ಮಾನವತೆಯಿಂದ ಮತ್ತೆ ವಿಶ್ವಮಾನವತೆಯ ಕಡೆಗೆ ಕರೆದುಕೊಂಡು ಹೋಗುವ ಮಾರ್ಗವೇ 'ಮತ್ತೆ ಕಲ್ಯಾಣ'. ನಾವು ಎಂತಹ ಬಟ್ಟೆ ಧರಿಸುತ್ತೇವೆ ಎನ್ನುವುದು ಮುಖ್ಯವಲ್ಲ; ಯಾವ ಬಟ್ಟೆ(ದಾರಿ)ಯಲ್ಲಿ ನಡೆಯುತ್ತೇವೆ ಎನ್ನುವುದು ಬಹುಮುಖ್ಯ. ಕಾವಿ ತ್ಯಾಗದ ಸಂಕೇತ, ಖಾದಿ ಶುಭ್ರತೆಯ ಸಂಕೇತ, ಖಾಕಿ ಸಂರಕ್ಷಣೆಯ ಸಂಕೇತ. ಇವುಗಳ ಮಹತ್ವ ಮರೆತು ದಾರಿ ತಪ್ಪಿದ ವಾತಾವರಣ ಇಂದು ನಿಮರ್ಾಣ ಆಗಿದೆ. ಇಂಥ ಬಟ್ಟೆ ಧರಿಸಿದವರು ಸರಿಯಾಗಬೇಕಾದರೆ ಮೊದಲು ಅಂತರಂಗ ಶುದ್ಧಿ ನಂತರ ಬಹಿರಂಗ ಶುದ್ಧಿ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು. ಪನ್ನರಾಜು ಸ್ವಾಗತಿಸಿದರೆ, ಸಿದ್ಧಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿ ಎಸ್ ಟಿ ರುದ್ರಪ್ಪ ವಂದಿಸಿದರು. 

ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಸಾಮರಸ್ಯ ನಡಿಗೆ ಆರಂಭವಾಯಿತು. ವಿವಿಧ ಧರ್ಮದ ಮುಖಂಡರು, ಜನಪ್ರತಿನಿಧಿಗಳು, ವಿದ್ಯಾಥರ್ಿಗಳು, ಸಾರ್ವಜನಿಕರು, ಕಲಾತಂಡಗಳು ಶರಣರ ಸ್ತಬ್ಧ ಚಿತ್ರಗಳನ್ನೊಳಗೊಂಡ ವಿಶೇಷ ವಾಹನದ ಜೊತೆ ಜೋಳದರಾಶಿ ದೊಡ್ಡನಗೌಡ  ರಂಗಮಂದಿರವನ್ನು ತಲುಪಿದರು. ವೇದಿಕೆಯ ಮೇಲೆ ವಿವಿಧ ಧರ್ಮದ ಮುಖಂಡರು ಉಪಸ್ಥಿತರಿದ್ದರು. ನೆರೆ ಸಂತ್ರಸ್ಥರಿಗೆ 17500 ರೂಪಾಯಿಗಳನ್ನು ಸಾರ್ವಜನಿಕರು ದೇಣಿಗೆಯಾಗಿ ನೀಡಿದರು.

ಗ್ರಾಮೀಣ ವಿದ್ಯಾಥರ್ಿಗಳಿಗೆ ಇಂಗ್ಲೀಷ್ ಕಲಿಕೆಗೆ ಅವಶ್ಯ