ಲೋಕದರ್ಶನ ವರದಿ
ಬಳ್ಳಾರಿ 26: ಜಿಲ್ಲಾಡಳಿತ, ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲೆಯ ಚಲನಚಿತ್ರಮಂದಿರಗಳಲ್ಲಿ ಒಂದು ವಾರಗಳ ಕಾಲ ಆಯೋಜಿಸಲಾಗಿರುವ ಮಕ್ಕಳ ಚಲನಚಿತ್ರೋತ್ಸವಕ್ಕೆ ನಗರದ ರಾಧಿಕ ಚಲನಚಿತ್ರಮಂದಿರದಲ್ಲಿ ಶುಕ್ರವಾರ ಚಾಲನೆ ದೊರಕಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರನ್ ಅವರು ಚಲನಚಿತ್ರ ವೀಕ್ಷಣೆಗೆ ಆಗಮಿಸಿದ್ದ ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಶಾಲಾ ಮಕ್ಕಳಲ್ಲಿ ಶೈಕ್ಷಣಿಕ ಮತ್ತು ಪರಿಸರದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೂರು ಪ್ರಮುಖ ಚಲನಚಿತ್ರಗಳನ್ನು ಜಿಲ್ಲೆಯ 29 ಚಲನಚಿತ್ರಮಂದಿರಗಳಲ್ಲಿ ಒಂದು ವಾರಗಳ ಕಾಲ ಪ್ರದರ್ಶನಗೊಳ್ಳಲಿದೆ. ಚಲನಚಿತ್ರಗಳಲ್ಲಿನ ಪ್ರಮುಖ ವಿಷಯಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಇಂದಿನಿಂದ ಪ್ರತಿ ದಿನ ಸೂರ್ಯ ಇವ ವೃಕ್ಷಮಿತ್ರ, ಪ್ರಾರ್ಥನೆ, ಬಾನಾಡಿ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿದ್ಯಾಥರ್ಿಗಳು ಚಲನಚಿತ್ರ ಮಂದಿರಕ್ಕೆ ಆಗಮಿಸಿ ವೀಕ್ಷಿಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಬಸವರಾಜ್ ಅವರು ಚಲನಚಿತ್ರಗಳ ಮೌಲ್ಯ ಅಂಶಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಚಲನಚಿತ್ರ ಪ್ರದರ್ಶನವನ್ನು 500ಕ್ಕೂ ಹೆಚ್ಚು ವಿದ್ಯಾಥರ್ಿಗಳು, ಶಿಕ್ಷಕ-ಶಿಕ್ಷಕಿಯರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ವೀರೇಶಪ್ಪ.ಹೆಚ್. ಸತ್ಯನಾರಾಯಣ, ಕಾರ್ಯನಿರ್ವಹಕ ಅಧಿಕಾರಿ ಗಣೇಶ್, ಅಧೀಕ್ಷಕರಾದ ನಾರಾಯಣ ದಾಸ್, ರಾಧಿಕ ಚಲನಚಿತ್ರ ಮಂದಿರದ ವ್ಯವಸ್ಥಪಕರಾದ ಶಿವು, ಚೆನ್ನಪ್ಪ, ಮಕ್ಕಳ ಚಲನಚಿತ್ರದ ಸಂಯೋಜಕರಾದ ಖಾಜಾಮುದ್ದೀನ್, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಜಿ.ಅಂಜಿನಪ್ಪ ಸೇರಿದಂತೆ ಇತರರು ಇದ್ದರು.