ಬಳ್ಳಾರಿ: ಅತೀವೃಷ್ಟಿ ರಾಷ್ಟೀಯ ವಿಪತ್ತು ಎಂದು ಘೋಷಣೆಗೆ ಕನರ್ಾಟಕ ಜನಸೈನ್ಯ ಒತ್ತಾಯ

ಲೋಕದರ್ಶನ ವರದಿ

ಬಳ್ಳಾರಿ 21: ಕರ್ನಾಟಕವು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಕೋಟ್ಯಾಂತರ ಜನರು ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು, ಇವರಿಗೆ ಪುನರ್ವಸತಿ ಕಲ್ಪಿಸುವ ಹಿನ್ನೆಲೆಯಲ್ಲಿ ಈ ವಿಪತ್ತನ್ನು "ರಾಷ್ಟ್ರೀಯ ವಿಪತ್ತು" ಎಂದು ಘೋಷಿಸಲು ಕರ್ನಾಟಕ ಜನಸೈನ್ಯ ಒತ್ತಾಯಿಸಿದೆ. 

ಈ ಕುರಿತು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕರ್ನಾಟಕ ಜನಸೈನ್ಯ ಸಂಘಟನೆಯ ಸಂಸ್ಥಾಪಕ ಕೆ.ಯರಿಸ್ವಾಮಿ, ಉಪಾಧ್ಯಕ್ಷ ಬಿ.ಹೊನ್ನುರುಸ್ವಾಮಿ, ಕಾರ್ಯದರ್ಶಿ  ರಾಗವೇಂದ್ರ, ಸಲಹಾ ಸಮಿತಿ ಸದಸ್ಯ ಎಂ.ಪೆಂಚಾಲಯ್ಯ, ಮತ್ತು ಫಯಾಜ್ ಮಾತನಾಡಿ ಈ ಶತಮಾನದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಸುರಿದ ಭಾರಿ ಮಳೆಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ನೆರೆಹಾವಳಿ ಉಂಟಾಗಿ ನೂರಾರು ಜಿಲ್ಲೆಗಳಲ್ಲಿ ಲಕ್ಷಾಂತರ ಗ್ರಾಮಗಳು ಜಲಾವೃತವಾಗಿ ಕೋಟ್ಯಾಂತರ ಜನರು ಅಗತ್ಯ ವಸ್ತುಗಳು ಸೇರಿದಂತೆ ವಿಶೇಷವಾಗಿ ರೈತ ಸಮುದಾಯವು ತಮ್ಮ ವೃತ್ತಿಯ ಸಂಗಾತಿಗಳಾದ ಜಾನುವಾರುಗಳನ್ನು, ಇತರೆ ಸಾಕು ಪ್ರಾಣಿಗಳನ್ನು ಕಳೆದುಕೊಂಡು ಉಟ್ಟ ಬಟ್ಟೆಯಲ್ಲಿಯೇ ಸೇನಾ ಸಿಬ್ಬಂಧಿಯವರ ನೆರವಿನಿಂದ ಜೀವಂತವಾಗಿ ಹೊರಬಂದು ಸುರಕ್ಷಿತ ತಾಣಗಳಲ್ಲಿ ದುಃಖತಪ್ತರಾಗಿ ಜೀವಂತವಾಗಿ ಉಳಿದಿದ್ದಾರೆ. ಇವರ ಮುಂದಿನ ಬದುಕು ರೂಪಿಸಿಕೊಳ್ಳಲು ದಾರಿ ಕಾಣದೇ ಆಶ್ರಯ ನೀಡುವ ಧಾತರಿಗಾಗಿ ಜಾತಕ ಪಕ್ಷಿಗಳಂತೆ ಕಾಯುವಂತಹ ಧೀನಾತಿಧೀನ ಪರಿಸ್ಥಿತಿಯನ್ನು ನಮ್ಮ ಸಹೋದರ ಸಹೋದರಿಯರು ಎದುರಿಸುತ್ತಿದ್ದಾರೆ. 

ದೇಶದ ಪ್ರಧಾನಿಗಳಾದ ಮೋದಿಯವರು ಇತ್ತ ಗಮನಹರಿಸಿ, ದೇಶದ ದಕ್ಷಿಣ, ಪೂರ್ವ, ಪಶ್ಚಿಮ ರಾಷ್ಟ್ರಗಳಲ್ಲಿ ಸುರಿದ ಭಾರಿ ಮಳೆಯಿಂದ ನೆರೆ ಹಾವಳಿ ಸೃಷ್ಟಿಯಾಗಿ ಸಾವಿರಾರು ಕೋಟಿ.ರೂ.ಗಳ ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದು ಇದನ್ನು ಪ್ರಥಮ ಆಧ್ಯತೆಯ ಮೇರೆಗೆ ಪರಿಗಣಿಸಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ನೆರೆಹಾವಳಿಗೆ ತುತ್ತಾದ ಕೋಟ್ಯಾಂತರ ಜನರ ಸಹಾಯಕ್ಕೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ. 

ಕನರ್ಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದವರ ಪ್ರಾಥಮಿಕ ವರದಿಗಳ ಅಂದಾಜಿನಂತೆ ರಾಜ್ಯದಲ್ಲಿ 61 ಜನ ಸಾವಿಗೀಡಾಗಿದ್ದು, 14 ಜನ ನಾಪತ್ತೆಯಾಗಿದ್ದಾರೆ, ಪ್ರವಾಹದಲ್ಲಿ ಸಿಲುಕಿದ್ದ  6,97,948 ಜನರನ್ನು ರಕ್ಷಿಸಿದ್ದಾರೆ. 1096 ಪರಿಹಾರ ಕೇಂದ್ರಗಳಲ್ಲಿ 3,75,663 ಜನರಿಗೆ ಆಶ್ರಯ ಕಲ್ಪಿಸಿದ್ದಾರೆ. 58620 ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದು ನಾಶವಾಗಿವೆ, 4,69,658 ಹೆಕ್ಟೇರು ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. 859 ಜಾನುವಾರುಗಳ ಸಾವು, 51,460 ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ವಿವರಿಸಿದರು. ಆದರೆ ಸಕರ್ಾರದ ಆದೇಶ ಸಂಖ್ಯೆ: ಆರ್.ಡಿ.91.ಟಿ.ಎನ್.ಆರ್./2019/ಬೆಂಗಳೂರು, ದಿನಾಂಕ: 14.08.2019 ರ ಪ್ರಕಾರ ರಾಜ್ಯದಲ್ಲಿ ಪ್ರವಾಹ ಪೀಡಿತವೆಂದು ಘೋಷಿಸಲ್ಪಟ್ಟ ತಾಲ್ಲೂಕುಗಳಲ್ಲಿ ಸಂತ್ರಸ್ತರ ಬಟ್ಟೆ-ಬರೆ ಹಾಗೂ ದಿನ ಬಳಕೆ ವಸ್ತುಗಳಿಗಾಗಿ ಪ್ರತಿ ಕುಟುಂಬಕ್ಕೆ ಎಸ್.ಡಿ.ಆರ್.ಎಫ್./ಎನ್.ಡಿ.ಆರ್.ಎಫ್. ಮಾರ್ಗಸೂಚಿಯನುಸಾರ ಪ್ರಸ್ತುತ ಜಾರಿಯಲ್ಲಿರುವ ರೂ.3,800/-ಗಳೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ವತಿಯಿಂದ ರೂ.6,200/-ಗಳನ್ನು ಸೇರಿಸಿ ಒಟ್ಟು ರೂ.10,000/-ರಂತೆ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರವು ಮಂಜೂರಾತಿ ನೀಡಿದೆ ಎಂದು ತಿಳಿಸಿದರು. 

ಆದರೆ ಮನೆಗಳಲ್ಲಿ ಶೇಖರಿಸಿಟ್ಟುಕೊಂಡಿದ್ದ ದವಸ-ಧಾನ್ಯಗಳು ಇತರೆ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಉಟ್ಟ ಬಟ್ಟೆಯಲ್ಲಿ ಹೊರಗಡೆ ಬಂದ ನಾಗರೀಕರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಒಂದು ಕುಟುಂಬಕ್ಕೆ ರೂ.10,000/-ಗಳನ್ನು ನೀಡುವುದು ನ್ಯಾಯೋಚಿತವೇ? ರೂ.10,000/-ಗಳಲ್ಲಿ ಒಂದು ಕುಟುಂಬಕ್ಕಾಗುವ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವೇ? ಎಂದರು. 

ಸರ್ಕಾರವು ನಿರಾಶ್ರಿತರ ಒಂದು ಕುಟುಂಬಕ್ಕೆ ಮನೆ ನಿಮರ್ಾಣಕ್ಕಾಗಿ ಕೇವಲ ರೂ.5.00ಲಕ್ಷ ಗಳನ್ನು ನೀಡುವುದಾಗಿ ಆಶ್ವಾಸನೆ ನೀಡಿದೆ. ಆದರೆ ರೂ.5.00 ಲಕ್ಷಗಳಲ್ಲಿ ಅವಿಭಕ್ತ ಕುಟುಂಬವು ವಾಸಿಸಲು ಯೋಗ್ಯವಾದ ಮನೆಯನ್ನು ನಿಮರ್ಾಣ ಮಾಡಲು ಸಾಧ್ಯವೇ? ಈ ವಿಷಯವು ರಾಜ್ಯ ಸರ್ಕಾರವು ಮಾನವೀಯತೆಯ ದೃಷ್ಟಿಯಿಂದ ನೋಡಬೇಕೇ ವಿನಃ, ತಾಂತ್ರಿಕ ಅಧಿಕಾರಿಗಳು ನೀಡಿದ ವರದಿಯ ಆಧಾರದ ಮೇಲೆ ಮನೆ ನಿರ್ಮಾಣಕ್ಕಾಗಿ ಹಣ ನಿಗಧಿ ಮಾಡುವುದು ಯೋಗ್ಯವಾದುದಲ್ಲ. ಒಂದು ಮನೆ ನಿರ್ಮಾಣ ಮಾಡಲು ಕನಿಷ್ಠವೆಂದರೂ ರೂ.20.00ಲಕ್ಷ ಗಳನ್ನು ಮಂಜೂರು ಮಾಡಿ ಸಕರ್ಾರವೇ ಸರ್ವಋತುಗಳಲ್ಲಿ ಬಾಳಿಕೆ ಬರುವ ರೀತಿಯಲ್ಲಿ ಗಟ್ಟಿಮುಟ್ಟಾದ ಮನೆಗಳನ್ನು ನಿರ್ಮಾಣ  ಮಾಡಿಕೊಡಬೇಕು  ಹಾಗೂ  ರೈತರು  ಕಳೆದುಕೊಂಡ  ಜಾನುವಾರುಗಳನ್ನು ಸರ್ಕಾರವೇ ಖರೀದಿ ಮಾಡಿ ರೈತರಿಗೆ ಕೊಡಬೇಕು. ನಿರಾಶ್ರಿತರ ಮನೆಗಳು ಭಾಗಶಃ ಹಾನಿಗೊಳಗಾಗಿದ್ದಲ್ಲಿ (ಮಣ್ಣಿನ ಮನೆಗಳಾಗಿದ್ದಲ್ಲಿ) ಆ ಮನೆಗಳನ್ನು ಸಂಪೂರ್ಣ ಕೆಡವಿ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು, ಹಾಗೂ ನಿರಾಶ್ರಿತರ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಪರಿಕರಗಳನ್ನು ಸರ್ಕಾರವೇ ಉಚಿತವಾಗಿ ವಿತರಿಸಬೇಕು. ಪ್ರಾಥಮಿಕ ವರದಿಗಳ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಇಪ್ಪತ್ತು ಸಾವಿರ ಕೋಟಿಗಳಿಗೂ ಹೆಚ್ಚು ನಷ್ಟವುಂಟಾಗಿದೆ ಎಂದು ತಿಳಿದುಬರುತ್ತಿದೆ. ರಾಜ್ಯದ ನಾಗರೀಕರು ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ ಎಂಭತ್ತು ಸಾವಿರದಿಂದ ಒಂದು ಲಕ್ಷ ಕೋಟಿ ರೂ.ಗಳವರೆಗೆ ತೆರಿಗೆಯನ್ನು ಕಟ್ಟುತ್ತಿದ್ದರೂ ಸಹ ರಾಜ್ಯ ಸರ್ಕಾರವು ನೆರೆಹಾವಳಿಗೊಳಗಾದ ನಿರಾಶ್ರಿತರ ಪುನರ್ವಸತಿಗಾಗಿ ಕೇವಲ ಆರು ಸಾವಿರ ಕೋಟಿ ರೂ.ಗಳನ್ನು ಕೇಳುತ್ತಿರುವುದು ಯಕ್ಷ ಪ್ರಶ್ನೆಯಾಗಿ ನಾಗರೀಕರನ್ನು ಕಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ನಡೆಸುತ್ತಿರುವ ಪಕ್ಷವು ಒಂದೇ ಆಗಿದ್ದರೂ ಸಹ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಡಲು ರಾಜ್ಯದ ಮುಖ್ಯಮಂತ್ರಿಗಳಿಗೆ ಮುಜಗರವೇಕೆ? ನಾಗರೀಕರ ಪರವಾಗಿ ಪ್ರತಿಭಟನಾ ರೀತಿಯಲ್ಲಿ ಪರಿಹಾರವನ್ನು ಕೇಳಬೇಕಾಗಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ವಿಳಂಬನೀತಿ ಏಕೆ? ಎಂದು ಪ್ರಶ್ನಿಸಿದರು. ನೆರೆಹಾವಳಿಗೆ ಒಳಗಾದ ನಿರಾಶ್ರಿತರಿಗೆ ಎಲ್ಲಾ ರೀತಿಯ ಸಹಾಯ, ಸಹಕಾರ, ಮಾನಸಿಕ ಸ್ಥೈರ್ಯ ನೀಡುವುದರೊಂದಿಗೆ ಅವರ ಬದುಕನ್ನು ಪುನರ್ನಿಮರ್ಿಸಿಕೊಳ್ಳಲು ರಾಜ್ಯ ಸರ್ಕಾರವು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು, ಇಲ್ಲದ ಪಕ್ಷದಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆಯು ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸಮುಚಿತವಾದ ರೀತಿಯಲ್ಲಿ ಸಮಾಲೋಚಿಸಿ ಅವರ ಸಹಕಾರ ಪಡೆದು, ಸಂವಿಧಾನದ ಅಡಿಯಲ್ಲಿ ಶಾಂತಿಯುತವಾಗಿ ಹೋರಾಟಗಳನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.