ಲೋಕದರ್ಶನ ವರದಿ
ಬಳ್ಳಾರಿ 09: ನಗರದ ರೋಟರಿ ಕ್ಲಬ್ ಮತ್ತು ಇನ್ಹರ್ ವೀಲ್ ಕ್ಲಬ್ನಲ್ಲಿ ನೂತನ ಸದಸ್ಯರ ಸೇರ್ಪಡೆ, ಅಧ್ಯಕ್ಷರ ಹಾಗೂ ಕಾರ್ಯದರ್ಶಿಗಳ ಪದಗ್ರಹಣ ಕಾರ್ಯಕ್ರಮವನ್ನು ಬಳ್ಳಾರಿಯ ರಾಯಲ್ ಫೋರ್ಟನಲ್ಲಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಮಾಜಿ ಜಿಲ್ಲಾ ಗವರ್ನರ್ 3160 ಆದ ಪಿ.ಎಸ್.ಶಂಭುಲಿಂಗಪ್ಪನವರು ನೂತನ ರೋಟರಿ ಕ್ಲಬ್ನ ಅಧ್ಯಕ್ಷರಾಗಿ ಆಯ್ಕೆಯಾದ ಯು.ಚಂದ್ರಶೇಖರವರಿಗೆ ಮತ್ತು ಕಾರ್ಯದರ್ಶಿಗಳಾಗಿ ಆಯ್ಕೆಯಾದ ಪಿ.ಆರ್.ಸುರೇಶರವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು ಹಾಗೂ ನೂತನವಾಗಿ ಸೇರ್ಪಡೆಗೊಂಡ ರೋಟರಿ ಸದಸ್ಯರಾಗಿ ರಾಜಕುಮಾರ ಗೋಗಿ, ಮನೋಹರ ಹಾಗೂ ಮಲ್ಲಿಕಾರ್ಜುನ ಗೌಡ ಇವರಿಗೆ ರೋಟರಿ ಪಿನ್ನನ್ನು ನೀಡಿ ಅಭಿನಂದಿಸಿದರು.
ಅದೇ ರೀತಿ ಇನ್ಹರ್ ವೀಲ್ನ ಮಾಜಿ ಜಿಲ್ಲಾ ಚೇರಮನ್ 316 ರಾದ ಗೀತಾ ರವೀಂದ್ರನಾಯ್ಡು ಇವರು ನೂತನ ಇನ್ಹರ್ ವೀಲ್ನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಮಂಜುಳ ರಮಣ ಮತ್ತು ಕಾರ್ಯದರ್ಶಿಗಳಾಗಿ ಆಯ್ಕೆಯಾದ ರಮ್ಯರಘು ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು ಹಾಗೂ ನೂತನವಾಗಿ ಸೇರ್ಪಡೆಗೊಂಡ ಇನ್ಹರ್ ವೀಲನ ಸದಸ್ಯರಾಗಿ ಲೀಲ, ವಿಶಾಲಾಕ್ಷಿ ನಿರಂಜನ್, ಶ್ರೀಲತ ಇವರಿಗೆ ಇನ್ಹರ್ ವೀಲನ ಪಿನ್ನನ್ನು ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾಗವರ್ನರ್ ಆದ ಆನಂದರಾವ್, ಎನ್.ಎನ್. ಶ್ರೀನಿವಾಸುಲು, ಮೈನುದ್ದೀನ್, ನಿಕಟಪೂರ್ವ ರೋಟರಿ ಕ್ಲಬ್ನ ಅಧ್ಯಕ್ಷ ಕೆ.ಎಂ.ಶಿವಕುಮಾರ, ಕಾರ್ಯದರ್ಶಿಗಳಾದ ಗಟ್ಟು ಮುನೀರ ಹಾಗೂ ನಿಕಟಪೂರ್ವ ಇನ್ಹರ್ ವೀಲ್ ಕ್ಲಬ್ ಅಧ್ಯಕ್ಷರಾದ ಟಿ.ವೈಷ್ಣವಿ ಕೌಶಿಕ್ ಮತ್ತು ಕಾರ್ಯದರ್ಶಿಗಳಾದ ಡಿ.ಮಂಜುಳರಮಣ ರವರು ಹಾಗೂ ರೋಟರಿ ಕ್ಲಬ್ನ ಹಾಗೂ ಇನ್ಹರ್ ವೀಲ್ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.