ಬಳ್ಳಾರಿ: ಪಿಂಚಣಿ ಕಂದಾಯ ಅದಲಾತ್ಗಳನ್ನು ಆಂದೋಲನದ ರೂಪದಲ್ಲಿ ಕೈಗೆತ್ತಿಕೊಳ್ಳಿ: ಡಿಸೋಜಾ

ಬಳ್ಳಾರಿ 05: ಪಿಂಚಣಿ ಅದಾಲತ್ಗಳನ್ನು ಹಾಗೂ ಕಂದಾಯ ಅದಾಲತ್ಗಳನ್ನು ಅಧಿಕಾರಿಗಳು ಆಂದೋಲನದ ರೂಪದಲ್ಲಿ ನಡೆಸಿ ಪ್ರತಿಯೊಬ್ಬ ಅರ್ಹ ಪಿಂಚಣಿದಾರನಿಗೆ ಮನೆ-ಮನೆಗೆ ಪಿಂಚಣಿ ಸೌಲಭ್ಯ ತಲುಪಿಸುವಲ್ಲಿ ಕ್ರಮವಹಿಸಬೇಕು ಎಂದು ಕಂದಾಯ ಸಚಿವ ಸಂಸದೀಯ ಕಾರ್ಯದರ್ಶಿಗಳು  ಹಾಗೂ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರ್ಹರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯ; ನಮ್ಮ ಸರಕಾರದ ಬದ್ಧತೆ ಸಾಮಾಜಿಕವಾಗಿ ಭದ್ರತೆ ನೀಡುವುದಾಗಿದೆ ಎಂದು ಹೇಳಿದ ಐವಾನ್ ಡಿಸೋಜಾ ಅವರು ಬಳ್ಳಾರಿ ಜಿಲ್ಲೆಯಲ್ಲಿ 4ಲಕ್ಷ ಜನರು ವಿವಿಧ ಯೋಜನೆಗಳಡಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಇದುವರೆಗೆ ನಡೆಸಲಾದ 1674 ಕಂದಾಯ ಅದಾಲತ್ಗಳಲ್ಲಿ 2870 ಅಜರ್ಿಗಳು ವಿಲೇವಾರಿ ಮಾಡಿ ಶೇ.98ರಷ್ಟು ಪ್ರಗತಿ ಸಾಧಿಸಿರುವುದು ಶ್ಲಾಘನೀಯವಾದುದು ಎಂದರು.

ಕೆಲವರಿಗೆ ಪಿಂಚಣಿ ಬಂದರೂ ಹಣ ಬರುವಲ್ಲಿ ತೊಂದರೆಗಳಿರುವುದು ಗಮನಕ್ಕೆ ಬಂದಿದ್ದು, ಈ ಅದಾಲತ್ಗಳು ನಡೆಸುವ ಸಂದರ್ಭದಲ್ಲಿ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಆಫೀಸರ್ಗಳು ತಮ್ಮೊಂದಿಗೆ ಇರುವಂತೆ ನೋಡಿಕೊಳ್ಳಿ ಎಂದು ಡಿಸಿ ನಕುಲ್ ಅವರಿಗೆ ಸೂಚಿಸಿದರು.

ಆತ್ಮಹತ್ಯೆ ಮಾಡಿಕೊಂಡ ರೈತಕುಟುಂಬಗಳ ಮನೆಗೆ ತಹಸೀಲ್ದಾರರು ಭೇಟಿ ನೀಡಿ ಅವರಿಗೆ ಸಾಂತ್ವಾನ ಹೇಳಬೇಕು ಮತ್ತು ಅವರ ಸ್ಥಿತಿಗತಿ ಏನಿದೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಬೇಕು. ಅವರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೇ ಅದರ ವಿವರ; ಒದುವ ಆಸಕ್ತಿ ಕುರಿತ ಮಾಹಿತಿ ಸೇರಿದಂತೆ ಸಮಗ್ರ ವರದಿ ಮತ್ತು ಫೋಟೊ ವಿವರದೊಂದಿಗೆ ಸಲ್ಲಿಸಬೇಕು ಎಂದು ಡಿಸಿ ನಕುಲ್ ಅವರು ತಹಸೀಲ್ದಾರರಿಗೆ ಸೂಚಿಸಿದರು.

ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿಮರ್ಿಸಿರುವ ಮನೆಗಳ ಸಕ್ರಮೀಕರಣಕ್ಕಾಗಿ 94ಸಿ ಮತ್ತು 94 ಸಿಸಿ ಅಡಿ ಸಲ್ಲಿಸಿದ ಅಜರ್ಿಗಳ ವಿಲೇವಾರಿಗೆ ಬಳ್ಳಾರಿ ಜಿಲ್ಲಾಡಳಿತ ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬಾಕಿ ಇರುವ ಅಜರ್ಿಗಳನ್ನು ಶೀಘ್ರ ವಿಲೇವಾರಿ ಮಾಡಿ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ 3 ತಾಲೂಕುಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಜಿಲ್ಲಾಧಿಕಾರಿ ನಕುಲ್ ಅವರಿಂದ ಪಡೆದ ಐವಾನ್ ಡಿಸೋಜಾ ಅವರು ಅಗತ್ಯ ಕ್ರಮವನ್ನು ಸರಕಾರದ ಮಟ್ಟದಲ್ಲಿ ಕೈಗೊಳ್ಳುವುದಾಗಿ ತಿಳಿಸಿದರು.

ಹೊಸದಾಗಿ ಪಿಂಚಣಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.