ಲೋಕದರ್ಶನ ವರದಿ
ಬಳ್ಳಾರಿ 24: ಅಯೊದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರ ನಿರ್ಣಾಯಕ ಘಟ್ಟಕ್ಕೆ ಸುಪ್ರಿಂ ಕೊರ್ಟನಲ್ಲಿ ವಿಚಾರ ನಡಿದಿದೆ. ಈ ಬಾರಿ ರಾಮಮಂದಿರ ನಿರ್ಮಾಣದ ಕನಸು ನನಸಾಗಲಿದೆ ಎಂಬ ಮಾತನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ಶನಿವಾರ ತಾಲೂಕಿನ ಮೋಕಾ ಗ್ರಾಮದ ಬಳಿ ಬಿಡಿ ಹಳ್ಳಿ ರಸ್ತೆಯಲ್ಲಿನ ಮರೂರು ಆಂಜೀನಯ್ಯ ದೇವಸ್ಥಾನದಲ್ಲಿ ನಡೆದ ಹನುಮ ಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮ ಮಂದಿರ ವಿವಾದದ ಕುರಿತು ಸುಪ್ರಿಂ ಕೊರ್ಟನಲ್ಲಿ ಕಲಾಪ ನಡೆಯುತ್ತಿದೆ. ಸತ್ಯದ ಆಧಾರದ ಮೇಲೆ ಭಕ್ತಿಯೂ ಸುಪ್ರಿಂ ಕೊರ್ಟನ ಹೃದಯಕ್ಕೆ ತಟ್ಟಬೇಕಿದೆ.
ನಿಮ್ಮ ಜೈಕಾರ ಸುಪ್ರಿಂ ಕೊರ್ಟವರೆಗೂ ತಲುಪಬೇಕೆಂದು ಹನುಮ ಮಾಲಾಧಾರಿಗಳಿಗೆ ವಿವರಿಸಿದರು. ತಕ್ಷಣ ಶ್ರೀ ರಾಮ್, ಜೈರಾಮ್, ಜೈ ಹನುಮಾನ್ ಎಂಬ ಘೋಷಣಗಳು ಮುಗಿಲು ಮುಟ್ಟುವಂತಾಗಿದ್ದು. ನಿಮ್ಮ ವ್ರತಾ ಕಲ್ಯಾಚರಣೆ ಲೋಕ ಕಲ್ಯಾಣಕ್ಕಾಗಿ ಆಗಲಿ ಎಂದರು.
ಇಂದು ನ್ಯಾಯಾಲಯಗಳು ಯಾವು ಯಾವುದೋ ಪ್ರಕರಣಗಳಲ್ಲಿ ರಾತ್ರೋ ರಾತ್ರಿ ವಿಚಾರಣೆ ಮಾಡಿ ತಕ್ಷಣ ತೀಪರ್ು ಕೊಡುತ್ತದೆ. ಆದರೆ ರಾಮ ಮಂದಿರ ವಿವಾದದ ವಿಚಾರಣೆ ಮಾತ್ರ ನಡೆಯುತ್ತಲೇ ಇದೆ. ಮಂದಿರ ವಿಚಾರಣೆಗೆ ನಾವು ನೀಡಿರುವ ದಾಖಲೆಗಳಿಂದ ತೀರ್ಪು ನಮ್ಮ ಪರ ಬರಲಿದೆ ಎಂಬ ವಿಶ್ವಾಸವಿದೆ. ಬರುವ 20 ದಿನಗಳಲ್ಲಿ ತೀಪರ್ಿನ ಬಗ್ಗೆ ಗೊತ್ತಾಗಲಿದೆ. ವೈದ್ಯನಾಥ ಎನ್ನುವವರು ರಾಮಮಂದಿರದ ವಿಷಯವಾಗಿ ಅಪೂರ್ವವಾದ ದಾಖಲೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ಅಸ್ಪ್ರಶ್ಯತೆ ಇನ್ನೂ ಕಾಡುತ್ತಿದೆ. ಅದನ್ನು ದೂರ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದ ಅವರು ಮತಾಂತರ ತಡೆಯಲು ಒಳ್ಳೆಯ ದಾರಿಗಳ ಮೂಲಕ ಪ್ರಯತ್ನಿಸಬೇಕೆಂದರು. ಕೇಸರಿ ಬಣ್ಣ ಕೆಲವರಿಗೆ ಭಯವನ್ನು ಮೂಡಿಸುತ್ತಿದೆ. ಆದರೆ ಅರಿತವರಿಗೆ ಭಯ ಭೇಕಾಗಿಲ್ಲ. ಹನುಮನ ಭಕ್ತಿಗೆ ಮೆಚ್ಚಿ ಒಮ್ಮೆ ಶ್ರೀರಾಮ ನೆನೆದರೆ ಯಾವ ಭಯವೂ ಇರುವುದಿಲ್ಲ ಎಂದ ಅವರು ಹನುಮಾನ ಸಂಘಟನೆಯ ಛತುರಾ ಎಂಬುವುದಕ್ಕೆ ರಾಮನಿಗೆ ವಾನರ ಸೈನ್ಯದ ಮೂಲಕ ಸಹಕಾರ ಮಾಡಿದ್ದು ಎಂದು ಸ್ಮರಿಸಿದರು. ದೇಶದಲ್ಲಿ ಕಾಶ್ಮೀರವನ್ನು ಒಂದಾಗಿಸುವ ಪ್ರಯತ್ನದ ಅಂಗವಾಗಿ 370 ಕಾಲಂ ರದ್ದು ಮಾಡಿದ್ದು ಒಂದು ಸಾಧನೆಯಾಗಿದೆ. ಇದಕ್ಕೆ ಅಲ್ಲಿಯ ಜನರ ಸಹಕಾರವೂ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ.ಸೋಮಶೇಖರರೆಡ್ಡಿ, ಸಂಸದ ದೇವೇಂದ್ರಪ್ಪ, ಪಾಲ್ಗೊಂಡಿದ್ದರು.