ಬಳ್ಳಾರಿ; ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಮನವಿ

ಬಳ್ಳಾರಿ 21: ಬಾಲಾಂಜನೇಯ ಸ್ವಾಮಿ ದೇವಸ್ಥಾನ, ಮಾರ್ಕಂಡೇಯ ದೇವಸ್ಥಾನ ಹಾಗೂ ಇವುಗಳಿಗೆ ಸಂಬಂಧಪಟ್ಟಂತಹ ಕಲ್ಯಾಣ ಮಂಟಪಗಳು ಮತ್ತು ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಸಂಬಂಧಪಟ್ಟಂತಹ ಸಕ್ಕರೆ ಕರಡೆಪ್ಪ ವಿದ್ಯಾರ್ಥಿ  ವಸತಿ ನಿಲಯ ಹಾಗೂ ಹೀರದ ಸೂಗಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮತ್ತಿತರ ಹದಗೆಟ್ಟಿದ ರಸ್ತೆಗಳನ್ನು ಅಭಿವೃಧ್ದಿ ಪಡಿಸಬೇಕೆಂದು ಆಯುಕ್ತರಿಗೆ ಮನವಿ ಪತ್ರದ ಮೂಲಕ ಸಾಮಾಜಿಕ ಕಾರ್ಯಕರ್ತರು ಮತ್ತು  

ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷರು ಮೇಕಲ ಈಶ್ವರ ರೆಡ್ಡಿ  ಮನವಿ  ಮಾಡಿದ್ದಾರೆ. 

ರಸ್ತೆಯ ಪ್ರಾರಂಭದಿಂದ (ಬೆಂಗಳೂರು ರಸ್ತೆಗೆ ಅಡ್ಡ ರಸ್ತೆ)ಕೊನೆಯ ಭಾಗದ ಕೆ.ಎಸ್.ಆರ್.ಟಿ.ಸಿ. ಹೊಸ ಬಸ್ ನಿಲ್ದಾಣ ಎದುರುಗಡೆ ರಸ್ತೆ ತಲುಪುವ ರಸ್ತೆವರೆಗೆ ರಸ್ತೆ ಕಾಮಗಾರಿಯನ್ನು ಕೈಗೊಂಡು ಸುಂದರವಾದಂತಹ ರಸ್ತೆ ಹಾಕುವಂತೆ ಸಾರ್ವಜನಿಕರ ಪರವಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ. 

ಚೇಂಬರ್ ಆಫ್ ಕಾಮರ್ಸ ಎದುರುಗಡೆ ಇರುವ ಏಕಮುಖ ಸಂಚಾರಿ ಕೆ.ಸಿ. ರಸ್ತೆ:

ಈ ರಸ್ತೆ ಅಂದಾಜು 150 ಮೀ. ಇರುತ್ತದೆ. ಈ ರಸ್ತೆ ಮೀನಾಕ್ಷಿ ವೃತ್ತದಿಂದ ಹಳೇ ಮಹಾನಗರ ಪಾಲಿಕೆ ಕಛೇರಿಯವರೆಗೆ ಪೂತರ್ಿಯಾಗಿ ಹದಗೆಟ್ಟಿದೆ. ಅಷ್ಟೇ ಅಲ್ಲದೇ ರಸ್ತೆ ಏಕಮುಖಿ ಸಂಚಾರಿ ರಸ್ತೆಯಾಗಿದ್ದು, ಜೆಸ್ಕಾಂ ಕಛೇರಿ ಹಾಗೂ ಇನ್ನಿತರೆ ವಾಣಿಜ್ಯ ಮಳಿಗೆಗಳು ಇವೆ, ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ತುಂಬಾ ಕುಣಿ(ತಗ್ಗು-ದಿನ್ನು)ಗಳಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನದಾರರು ಈ ರಸ್ತೆಯಿಂದ ಬೇಸತ್ತು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಇನ್ನಿತರರ ಮೇಲೆ ಕೀಳು ಭಾವನೆಯಿಂದ ಮಾತನಾಡುತ್ತಿದ್ದಾರೆ. ಆದ್ದರಿಂದ ದಯಮಾಡಿ ಖುದ್ದಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಆದಷ್ಟು ಬೇಗ ರಸ್ತೆಗಳ ಪರಿಶೀಲನೆ ಮಾಡಿ ರಸ್ತೆ ಕಾಮಗಾರಿ ಪ್ರಾರಂಭ ಮಾಡುವಂತೆ ಪಾಲಿಕೆಗೆ ಹಾಗೂ ಅಧಿಕಾರಿಗಳಿಗೆ ಗೌರವ ತರಬೇಕೆಂದು ಮನವಿ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.