ಭಗೀರಥ ಮಹರ್ಷಿ ಜಯಂತಿ

ಬೆಳಗಾವಿ, 11: ಭಗೀರಥ ಮಹರ್ಷಿ ಜಯಂತಿಯನ್ನು ಶನಿವಾರ (ಮೇ.11) ರಂದು ಆಚರಿಸಲಾಯಿತು.

ನಗರದ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಉಪ ನಿದೇರ್ಶಕರು  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಾದ ಶ್ರೀ ಸಿ.ಬಿ ರಂಗಯ್ಯ ಅವರು ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಿದರು.

 ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಸರಳ ರೀತಿಯಲ್ಲಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಿ.ಎಸ್ ಉಪ್ಪಾರ, ಸಮಾಜದ ಕಾರ್ಯದಶರ್ಿಗಾಳಾದ ಬಿ.ಪಿ ಮೆಲಮಟ್ಟಿ, ಹನುಮಂತ ರಾಜಪ್ಪನವರ, ಮಂಜುನಾಥ ರಾಜಪ್ಪನವರ, ಸಂಘದ ಕಾನೂನು ಸಲಹೆಗಾರರಾದ ಎಮ್. ಡಿ ಕೀಲಾರೆ, ಸಂಘದ ಕಜಾಂಚಿಯಾದ ಬಲರಾಜ ಮಳೆಪ್ಪಗೋಳ, ಲಕ್ಷ್ಮಣ ಗಾಟೀನ, ಪ್ರಭಾಕರ ಉಪ್ಪಾರ, ಚಮದ್ರಶೇಖರ ಅಳಗೋಡಿ, ಸಿದ್ದಪ್ಪ ಮದಲಬಾವಿ,ಸರೋಜಿನಿ ಉಪ್ಪಾರ, ಉಮಾ ಉಪ್ಪಾರ, ವಿನಾ ಕಿಡದಾಳೆ, ಕಿತರ್ಿ ಕೀಲಾರೆ, ಎಸ್.ಬಿ ಕಂಕನವಾಡಿ ಸೇರಿದಂತೆ ಸಮಾಜದ ಎಲ್ಲ ಹಿರಿಯ ಮುಖಂಡರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು  ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.