ಗಣರಾಜ್ಯೋತ್ಸವ ಪರೇಡಗೆ ಭರತೇಶ ವಿದ್ಯಾರ್ಥಿ ಫೃಥ್ವಿರಾಜ ಆಯ್ಕೆ
ಬೆಳಗಾವಿ 21: ಇದೇ ಜನೇವರಿ 26 ರಂದು ರಂದು ನವ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡದಲ್ಲಿ ಭರತೇಶ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿ.ಕಾಂ. ಮೊದಲನೇಯ ಸೆಮಿಸ್ಟಾರ ವಿದ್ಯಾರ್ಥಿ ಪೃಥ್ವಿರಾಜ ಸಕ್ರಿ ಆಯ್ಕೆಯಾಗಿದ್ದಾರೆ.
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಈ ಆಯ್ಕೆಯನ್ನು ಪ್ರಕಟಮಾಡಿದೆ.ಫೃಥಿರಾಜ ಸಕ್ರಿ ಇವರು ಭರತೇಶ ಶಿಕ್ಷಣ ಸಂಸ್ಥೆಯ ಎನ.ಎಸ್.ಎಸ್. ಸ್ವಯಂ ಸೇವಕರಾಗಿದ್ದು, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 25000 ಸ್ವಯಂ ಸೇವಕರಲ್ಲಿ ಒಬ್ಬರಾಗಿದ್ದಾರೆ. ಇಡಿ ಕರ್ನಾಟಕದಲ್ಲಿ ಒಟ್ಟು 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಬೆಳಗಾವಿಯಿಂದ ಪೃಥ್ವರಾಜ ಸಕ್ರಿ ಇವರು ಆಯ್ಕೆಯಾಗಿದ್ದಾರೆ.
ಇವರ ಆಯ್ಕೆಗೆ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಮತ್ತು ಬೋಧಕರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.