ಅನುಮತಿ ಇಲ್ಲದೇ ಬೋರ್ವೆಲ್ ಕೊರೆತ: ರಸ್ತೆ ತಡೆದು ಪ್ರತಿಭಟಣೆ

ಲೋಕದರ್ಶನ ವರದಿ

ದಾಂಡೇಲಿ 04:  ನಗರದ ಜೆ.ಎನ್ ರಸ್ತೆಯಲ್ಲಿರುವ ಶ್ರೀ ಲಾಡ್ಜ್ನ ಮಾಲಕರು ನಗರಸಭೆಯ ಅನುಮತಿ ಇಲ್ಲದೇ ಲಾಡ್ಜ್ನ ಪ್ರವೇಶದ್ವಾರದ ಬಳಿ ಶನಿವಾರ ರಾತ್ರಿ ಅನಧೀಕೃತ ಬೋರ್ವೆಲ್ ಕೊರೆಸಿದ್ದರಿಂದ ಸಾಕಷ್ಟು ರಾದ್ದಾಂತ ಸೃಷ್ಟಿಯಾಯಿತು. ಬೋರ್ವೆಲ್ ಕೊರೆದ ಕಾರಣ ಹೊರ ಬಿದ್ದ ಹೊಲಸು ನೀರು ಮುಖ್ಯ ರಸ್ತೆಗೆ ಬಂದಿಂದ್ದರಿಂದ ವಾಹನ ಪಾಕರ್ಿಂಗ್ ಮಾಡುವರಿಗೆ, ಅಕ್ಕ ಪಕ್ಕದ ವ್ಯಾಪಾರಸ್ಥರಿಗೆ ಸಾಕಷ್ಟು ಕಿರಿಕಿರಿ ಉಂಟಾಗಿತ್ತು. 

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪತ್ರಕರ್ತ ಬಿ.ಎನ್. ವಾಸರೆ, ನಗರಸಭಾ ಸದಸ್ಯರಾದ ಮೋಹನ ಹಲವಾಯಿ, ದಶರಥ ಬಂಡಿವಡ್ಡರ, ನರೇಂದ್ರ ಚವ್ಹಾನ ಹಾಗೂ ಶಿವಾನಂದ ಗಗ್ಗರಿ, ಪ್ರವೀಣ ಕೋಠಾರಿ, ರಾಧಾಕೃಷ್ಣ ಕನ್ಯಾಡಿ ಮುಂತಾದವರು ಅನುಮತಿ ಇಲ್ಲದೇ ಬೋರ್ವೆಲ್ ನಿಮರ್ಾಣ ಮಾಡಿದ್ದಕ್ಕೆ ಒಂದು ಘಂಟೆಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟಣೆ ನಡೆಸಿದರು. ಪೌರಾಯುಕ್ತರು ಘಟನಾ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಆನಂತರ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಆರ್.ವಿ.ಜತ್ತಣ್ಣ ಹಾಗೂ ವೃತ್ತ ನಿರೀಕ್ಷಕ ಅನಿಸ್ ಮುಜಾವರ್ ಪ್ರತಿಭಟನಾಕಾರರ ಮನವಲಿಸಲು ಪ್ರಯತ್ನಪಟ್ಟರು. 

ಆದರೆ ಪಟ್ಟು ಹಿಡಿದ ಪ್ರತಿಭಟನಾಕಾರರು ಲಾಡ್ಜಿನ ಮಾಲಿಕರನ್ನು ಸ್ಥಳಕ್ಕೆ ಕರೆಸಬೇಕೆಂದು ಆಗ್ರಹಿಸಿದರು. ಪೌರಾಯುಕ್ತ ಆರ್.ವಿ.ಜತ್ತಣ್ಣ ಹಾಗೂ ವೃತ್ತ ನಿರೀಕ್ಷಕ ಅನಿಸ್ ಮುಜಾವರ್ ಪ್ರತಿಭಟನಾಕಾರರ ಮನವಲಿಸಿ ಶ್ರೀ ಲಾಡ್ಜ್ನ ಮಾಲಿಕರಾದ ಮಹೇಂದ್ರ ಶಾ ನಗರಸಭೆಯ ಅನುಮತಿ ಇಲ್ಲದೇ ಬೋರ್ ಕೊರೆಸಿದ್ದರಿಂದ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಹಾಗೂ ಮುಖ್ಯರಸ್ತೆಗೆ ಬಂದ ಹೊಲಸು ನೀರನ್ನು ಲಾಡ್ಜಿನ ನೌಕರರಿಂದ ಸ್ವಚ್ಛಗೊಳಿಸಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟಣೆಯನ್ನು ಹಿಂಪಡೆದುಕೊಂಡರು.