ನವದೆಹಲಿ, ಏಪ್ರಿಲ್ 24 ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ ಎಂಬ ತಮ್ಮ ಹೇಳಿಕೆ ಸಂಬಂಧ ನಾಳೆ ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಲು ವಕೀಲ ಉತ್ಸವ್ ಬೈನ್ಸ್ ಅವರಿಗೆ ಸುಪ್ರೀಂ ಕೋಟರ್್ ಬುಧವಾರ ಕಾಲಾವಕಾಶ ನೀಡಿದೆ. ತಮ್ಮ ಹೇಳಿಕೆ ರುಜುವಾತು ಪಡಿಸಲು ನಾಳೆ ಮತ್ತೊಂದು ಪ್ರಮಾಣಪತ್ರ ಸಲ್ಲಿಸುವಂತೆ ವಕೀಲ ಬೈನ್ಸ್ ಅವರಿಗೆ ಆದೇಶಿಸಿದ ಮುಖ್ಯನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ, ಪ್ರಕರಣವನ್ನು ಮತ್ತೆ ನಾಳೆ ಬೆಳಗ್ಗೆ 10.30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ನ್ಯಾಯಪೀಠ ಚಲಾಯಿಸುತ್ತಿರುವ ತನ್ನ ನ್ಯಾಯಾಂಗ ಅಧಿಕಾರಗಳಿಂದ ಬಾಕಿ ಉಳಿದ ಯಾವುದೇ ಪ್ರಕರಣಗಳ ಮೇಲೆ ಪರಿಣಾಮ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು ಸಿಲುಕಿಸಲು ಸಂಚು ರೂಪಿಸಲಾಗಿದೆ ಎಂಬ ಹೇಳಿಕೆ ನೀಡಿರುವ ಹಿರಿಯ ವಕೀಲ ಉತ್ಸವ್ ಬೈನ್ಸ್ ಅವರನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ಮುಖ್ಯಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಸಿಲುಕಿಸಲು ದೊಡ್ಡ ಸಂಚು ನಡೆಸಲಾಗಿ ಎಂಬ ವಕೀಲ ಉತ್ಸವ್ ಬೈನ್ಸ್ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆಯುಕ್ತರು, ಸಿಬಿಐ ನಿರ್ದೇಶಕ ಹಾಗೂ ಐಬಿ ಮುಖ್ಯಸ್ಥರು ಮುಖ್ಯನ್ಯಾಯಮೂರ್ತಿಗಳ ಕೊಠಡಿಗೆ ಹಾಜರಾಗಲು ಸುಪ್ರೀಂಕೋರ್ಟ್ ಸಮೆನ್ಸ್ ಜಾರಿ ಮಾಡಿತ್ತು ಮುಖ್ಯ ನ್ಯಾಯಮೂತರ್ಿ ರಂಜನ್ ಗೋಗೊಯ್ ಅವರನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ ಎಂದು ವಕೀಲ ಬೈನ್ಸ್ ಮಾಡಿರುವ ಆರೋಪ ಕುರಿತು ಚಚರ್ಿಸಲು ಈ ಸಮೆನ್ಸ್ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತ್ತು. ಮಧ್ಯಾಹ್ನ ವಿಷಯ ಕುರಿತು ಚಚರ್ಿಸಲು ನ್ಯಾಯಾಧೀಶರ ಕೊಠಡಿಗೆ ಬರುವಂತೆ, ದೆಹಲಿ ಪೊಲೀಸ್ ಆಯುಕ್ತರು, ಸಿಬಿಐ ನಿರ್ದೇಶಕರು , ಬೇಹುಗಾರಿಕೆ ಮುಖ್ಯಸ್ಥಗೆ ಸಮೆನ್ಸ್ ನೀಡಲಾಗಿದೆ ಎಂದು ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿತು. ಇದಕ್ಕೂ ಮುನ್ನ, ವಿಚಾರಣೆಯ ವೇಳೆ, ವಕೀಲ ಬೈನ್ಸ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಆಟೊರಿನಿ ಜನರಲ್ ಕೆ.ಕೆ. ವೇಣುಗೋಪಾಲ್ ಪ್ರಕರಣ ಕುರಿತು ತಮ್ಮ ವಾದ ಮಂಡಿಸಿದರು.
ಸಿಬಿಐ ನಿರ್ದೇಶಕರು ದೆಹಲಿಯಲ್ಲಿ ಇಲ್ಲ, ಹಾಗಾಗಿ ಅವರ ಬದಲು ಜಂಟಿ ನಿರ್ದೇಶಕರು ಸಭೆಗೆ ಹಾಜರಾಗಲಿದ್ದಮುಖ್ಯ ಮುಖ್ಯನ್ಯಾಯಮೂರ್ತಿ ಅವರ ಹೆಸರಿಗೆ ಕಳಂಕ ತರುವ ಸಂಚಿನ ಕುರಿತು ಸುಪ್ರೀಂ ಕೋರ್ಟ್ ಎಸ್ ಐಟಿ ರಚಿಸಲು ಆದೇಶಿಸಬೇಕು ಎಂದು ತುಷಾರ್ ಮೆಹ್ತಾ ಮನವಿ ಮಾಡಿದರು. ವಕೀಲ ಉತ್ಸವ್ ಬೈನ್ಸ್ , ತಮ್ಮ ಹೇಳಿಕೆಯನ್ನು ರುಜುವಾತುಪಡಿಸುವ ವಿಶ್ವಸಾರ್ಹ ಪುರಾವೆಗಳನ್ನು ಹೊಂದಿದ್ದು ಅವುಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇನೆ ಎಂದರು ಮುಖ್ಯನ್ಯಾಯಮೂರ್ತಿಅರುಣ್ ಮಿಶ್ರಾ, ಇಡೀ ವ್ಯವಸ್ಥೆಯನ್ನು ಸ್ವಚ್ಚಗೊಳಿಸಲು ಮುಖ್ಯನ್ಯಾಯಮೂರ್ತಿ ಬಯಸಿದ್ದಾರೆ. ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಕುರಿತು ಗಂಭೀರ ಆರೋಪಗಳಿದ್ದು,. ಈ ಎಲ್ಲ ಆರೋಪಗಳ ಬಗ್ಗೆ ಖಂಡಿತ ಪರಿಶೀಲಿಸಲಾಗುವುದು ಎಂದರು.