ಲೋಕದರ್ಶನ ವರದಿ
ಬೆಳಗಾವಿ ಂ4: ಕನ್ನಡ ರಾಜ್ಯೋತ್ಸವದ ನಿಮಿತ್ಯವಾಗಿ ಹಿಂದವಾಡಿ ಮಹಿಳಾ ಮಂಡಳದ ವತಿಯಿಂದ ಲಕ್ಷ್ಮೀ ದೇವಸ್ಥಾನದ ಡಾ. ಮಂದಾಕಿನಿ ಪಟ್ಟಣ ಸಭಾಗೃಹದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಾ.ಗುರುದೇವಿ ಹುಲೆಪ್ಪನವರಮಠ ಆಗಮಿಸಿ ಮಾತನಾಡಿ ಕನ್ನಡ ಸಂಸ್ಕೃತಿ ಹಾಗೂ ಗ್ರಾಮೀಣ ಸೊಗಡಿನ ಆಡು ಭಾಷೆಗಳ ಬಗ್ಗೆ, ಜನಪದ ಸಾಹಿತ್ಯದ ಮಹತ್ವದ ಕುರಿತು ತಿಳಿಸಿದರು. ಗೌರವಾಧ್ಯಕ್ಷರಾಗಿ ಸುಧೀರ ಕುಲಕಣರ್ಿ ಆಗಮಿಸಿದ್ದರು. ಪ್ರೋ. ಕಲ್ಪನ ಪಟ್ಟಣ ಸ್ವಾಗತಿಸಿದರು, ಡಾ.ಸಂಜನಾ ಭಾಗಿ ನಿರೂಪಿಸಿದರು, ಗೀತಾ ಮಂತುಗರ್ಿ ವಂದಿಸಿದರು. ವೀಣಾ ಬಾಗಿ, ಚಿತ್ರಾ ಜವಳಗಿ, ಡಾ.ಅಮೃತ ಜವಳಗಿ, ಶೀತಲ ಬಾಗಿ, ಪ್ರಭಾವತಿ ಕೊಡಚವಾಡ, ಅರ್ಚಕರಾದ ಮಾರುತಿ ಭಟ್ ಮತ್ತೀತರು ಭಾಗವಹಿಸಿದ್ದರು. ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.