ಕೊಪ್ಪಳದಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ

ಲೋಕದರ್ಶನ ವರದಿ

ಕೊಪ್ಪಳ 05: ಮುಸ್ಲಿಂ ಸಮುದಾಯದ ಪವಿತ್ರ ರಮಜಾನ್ ಮಾಸಾಚರಣೆ ಮುಕ್ತಾಯ ಗೊಂಡ ಬಳಿಕ ಈದುಲ್ ಫಿತರ್ ಹಬ್ಬವನ್ನು ಕೊಪ್ಪಳ ನಗರದ ಎರಡು ಈದ್ಗಾ ಮೈದಾನ ಸೇರಿದಂತೆ ಜಿಲ್ಲೆಯಾದಂತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿವುದರ ಮೂಲಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮದಿಂದ ರಂಜಾನ್ ಹಬ್ಬ ಆಚರಿಸಿದರು.

ನಗರದ ನಗರ ಸಭೆ ಬಳಿ ಇರುವ ಹಳೆಯ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ಸೇರಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಸಲ್ಲಿಸಿದ ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೆಂದ್ರ ಹಿಟ್ನಾಳ್, ಜಿಪಂ ಮಾಜಿ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ್, ನಗರ ಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ, ಮಾಜಿ ಸದಸ್ಯ ಮಹೇಶ್ ಭಜಂತ್ರಿ ಮುಖಂಡ ವಿರುಪಾಕ್ಷಪ್ಪ ನವೋದಯ, ಮತ್ತಿತರರು ಪಾಲ್ಗೊಂಡು ಹಬ್ಬದ ಶುಭಾಶಯ ಕೊರಿದರು. 

ಈದ್ಗಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಸಹ ಭೇಟಿ ಮಾಡಿ ಮುಸ್ಲಿಂ ಭಾಂಧವರಿಗೆ ಶುಭ ಕೊರಿದರು, ನಗರ ಸಭೆ ವತಿಯಿಂದ ಈದ್ಗಾ ಮೈದಾನ ಸ್ವಚ್ಚತಾ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು, ನಗರ ಪೊಲೀಸ್ ಠಾಣೆ ಸೂಕ್ತ ಬಂದೂಬಸ್ತ ವ್ಯವಸ್ಥೆ, ಸಂಚಾರದ ವ್ಯವಸ್ಥೆ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಿ ಸುಗುಮ ಸಂಚಾರಕ್ಕೆ ವ್ಯವಸ್ಥೆ ಮಾಡಿರುವದಲ್ಲದೆ ಅವರು ಸಹ ಹಬ್ಬದ ಶುಭಾಶಯ ಕೊರಿದರು, ನಂತರ ಸಾಮೂಹಿಕ ಪ್ರಾರ್ಥನೆಯ ನೆತೃತ್ವ ವಹಿಸಿದ ಖಾಜಿ ಅಬ್ಬಾಸಲಿ ಯವರಿಗೆ  ಶಾಸಕರು ಸನ್ಮಾನಿಸಿ ಹಬ್ಬದ ಶುಭ ಕೊರಿದರೆ, ಈದ್ಗಾ ಕಮಿಟಿ ಪರವಾಗಿ ಶಾಸಕರಿಗೆ ಮತ್ತು ಇತರ ಗಣ್ಯರಿಗೆ ಸನ್ಮಾನಿಲಾಯಿತು. 

ಸಾಮೂಹಿಕ ಪ್ರಾರ್ಥನೆಯಲ್ಲಿ ಈದ್ಗಾ ಕಮಿಟಿ ಆಡಳಿತ ಆಧಿಕಾರಿ ಖಾದರ್ ಸಾಬ್, ನಗರ ಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ಜೆಡಿಎಸ್ ಮುಖಂಡ ಕೆಎಂ.ಸೈಯದ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಪಾಷ ಕಾಟನ್, ಅಂಜುಮುನ್ ಅಧ್ಯಕ್ಷ ಹುಸೇನ್ ಪೀರಾ ಮುಜಾವರ್ (ಚಿಕನ್) ಸಮಾಜ ಸೇವಕ ಮಾನ್ವಿ ಪಾಷ, ಮಹಮ್ಮದ್ ಹುಸೇನ್ ಮಂಡಲಗೆರಿ, ಹಿರಿಯ ನ್ಯಾಯವಾದಿ ಅಸೀಪ ಅಲಿ, ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ  ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.