ಬೆಳಗಾವಿ ತಾಲೂಕಿನ ವಿವಿಧ ಕಾಮಗಾರಿಗಳ ಪರೀಶೀಲಿಸಿದ ಕೇಂದ್ರ ಜಲಶಕ್ತಿ ಅಧಿಕಾರಿ ಡಿ.ವಿ ಸ್ವಾಮಿ

Central Water Power Officer D.V Swamy inspected various works of Belgaum Taluk

ಬೆಳಗಾವಿ ತಾಲೂಕಿನ ವಿವಿಧ ಕಾಮಗಾರಿಗಳ ಪರೀಶೀಲಿಸಿದ ಕೇಂದ್ರ ಜಲಶಕ್ತಿ ಅಧಿಕಾರಿ ಡಿ.ವಿ ಸ್ವಾಮಿ 

ಬೆಳಗಾವಿ 31: ಜ, 31 ರಂದು  ಬೆಳಗಾವಿ ತಾಲ್ಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಟ್ರೆಂಚ್ ಕಾಮಗಾರಿ, ಕಲಖಾಂಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೂದು ನಿರ್ವಹಣೆ ಹಾಗೂ ಮುಚ್ಚಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೊಸಕೆರೆ ನಿರ್ಮಾಣ ಕಾಮಗಾರಿಗೆ  ಕೇಂದ್ರ ಜಲಶಕ್ತಿ ನೋಡಲ್ ಅಧಿಕಾರಿಗಳಾದ ಡಿ.ವಿ ಸ್ವಾಮಿ (ಐಎಎಸ್) ಹಾಗೂ  ಡಾ. ಸುಚೇತನಾ ಬಿಸ್ವಾಸ್ ಅವರು ಭೇಟಿ ನೀಡಿ ಪರೀಶೀಲನೆ ಮಾಡಿದರು.  

ಇದೆ ವೇಳೆ ಜಲಶಕ್ತಿ ನೋಡಲ್ ಅಧಿಕಾರಿಗಳಾದ ಡಿ.ವಿ ಸ್ವಾಮಿ (ಐಎಎಸ್) ಮಾತನಾಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಯಾವುದೇ ಕಾಮಗಾರಿಯನ್ನು ಪ್ರಾರಂಭ ಮಾಡುವ ಮೊದಲಿಗೆ ಕಾಮಗಾರಿ ಪೂರ್ಣವಾದ ಮೇಲೆ ಇದರಿಂದ ಆಗುವ ಉಪಯೋಗವೇನು ಎಂಬುವುದನ್ನು ಅರಿತು ಕಾಮಗಾರಿಗಳನ್ನು ತೆಗೆದೊಕೊಳ್ಳಬೇಕು ಎಂದು ತಿಳಿಸಿದರು.  

ಈ ವೇಳೆ ಮಾನ್ಯ  ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶ್ರೀ ರವಿ ಎನ್ ಬಂಗಾರೆಪ್ಪನವರ,ಎ.ಡಿ.ಪಿ.ಸಿ ಬಸವರಾಜ ಎನ್, ಡಿಎಮ್‌ಐಎಸ್ ಮೌನೇಶ, ಡಿಐಇಸಿ ಸಂಯೋಜಕರು ಪ್ರಮೋದ ಗೋಡೆಕರ,  ಗ್ರಾಪಂ ಅಭಿದ್ಧಿಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಇದ್ದರು.