ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚಂದ್ರ್ಪವರು ಅವಿರೋಧವಾಗಿ ಆಯ್ಕೆ
ರಾಣಿಬೆನ್ನೂರ 12: ತಾಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಚಂದ್ರ್ಪ ರಾಮಪ್ಪ ಹಾಲಿವಾಣದ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಾ.ಪಂ ಇಓ ಪರಮೇಶ ಘೋಷಿಸಿದರು.
ವಿಜಯಲಕ್ಷ್ಮಿ ಸಾರದ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಂದ್ರ್ಪ ರಾಮಪ್ಪ ಹಾಲಿವಾಣದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೂಧವಾಗಿ ಆಯ್ಕೆಯಾದರು.
ಗ್ರಾ.ಪಂ ಮಾಜಿ ಅಧ್ಯಕ್ಷೆ ಲಲಿತವ್ವ ಬಡಿಗೇರ, ವರ್ತಕ ಸಂಘದ ಅಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ಜಿ.ಬಿ.ಮಾಸಣಗಿ, ವಿಠ್ಠಲಾಚಾರ ಬಡಿಗೇರ, ಕುಮಾರ್ ಶಂಕ್ರಿಕೊಪ್ಪದ, ಮುರಡಪ್ಪ ಚೌಡಪ್ಪಳವರ, ಬೀರ್ಪ ಕೊಳ್ಳೇರ, ಬಸಪ್ಪ ಬೆನ್ನೂರ, ಬಸವರಾಜ ಚಕ್ರಸಾಲಿ, ಶಿವಕುಮಾರ ಮುದ್ದಪ್ಪಳವರ ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು.