ಬೆಂಗಳೂರು 29: ಬರಗಾಲದಲ್ಲಿ ಪರಿಹಾರ ಕೈಗೊಳ್ಳದೆ ವಿದೇಶ ಪ್ರಯಾಣ ಮಾಡಿದರೆ ಜನರಿಂದ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಉದ್ದೇಶದಿಂದಲೇ ಜನರ ಗಮನ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ನಾಟಕ ಮಾಡಿ ಹೋಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಟೀಕಿಸಿದ್ದಾರೆ.
ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದವರು ವಾರಗಟ್ಟಲೆ ರಾಜ್ಯವನ್ನು ಬಿಟ್ಟು ವಿದೇಶಕ್ಕೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದರೆ ಟೀಕೆಗಳು ವ್ಯಕ್ತವಾಗುತ್ತದೆ.ಇದೇ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಕಣ್ಣೊರೆಸುವ ತಂತ್ರ ಅನುಸರಿಸಿ ಗ್ರಾಮವಾಸ್ತವ್ಯ ನಡೆಸಿದರು ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಜನ ಅಲ್ಲ ದೇವರು ಎನ್ನುತ್ತಾರೆ. ಗೆಲುವಿಗಾಗಿ ತಿರುಪತಿ ಸೇರಿದಂತೆ ನಾನಾ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾ ಕಾಲಹರಣ ಮಾಡಿದ್ದಾರೆ.
ಕೊನೆಗೆ ಜನಾನೂ ಕೈ ಬಿಟ್ಟರು, ದೇವರೂ ಕೈ ಬಿಟ್ಟು ಇದೀಗ ಕುಮಾರಸ್ವಾಮಿ ಏಕಾಂಗಿಯಾಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಮೋದಿಗೆ ಮತ ಹಾಕುತ್ತೀರಾ , ಸಮಸ್ಯೆ ನಮಗೆ ಹೇಳುತ್ತಾರೆ ಎಂದು ಕುಮಾರಸ್ವಾಮಿ ಜನರ ಮೇಲೆ ರೇಗಾಡುತ್ತಿದ್ದಾರೆ. ಕೇಂದ್ರ ಸಕರ್ಾರ ಮೈಸೂರು ರಸ್ತೆ ನಿಮರ್ಾಣಕ್ಕೆ ಸಾವಿರಾರು ಕೋಟಿ ರೂ ಅನುದಾನ ನೀಡಿದೆ. ಹಾಸನ ರಸ್ತೆ ಅಭಿವೃದ್ಧಿಗೂ ಕೇಂದ್ರ ಸಕರ್ಾರ 2000 ಕೋಟಿ ರೂ ಅನುದಾನ ನೀಡಿದೆ. ಕೇಂದ್ರ ಅನುದಾನ ನೀಡಿದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಈ ರಸ್ತೆಯಲ್ಲಿ ಸಂಚರಿಸುವುದನ್ನು ಬಿಡುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರು ಏಕೆ ನಾಮಾ ಹಾಕಬೇಕು ಎಂದು ಜನರನ್ನು ಕೇಳುತ್ತಿದ್ದರು. ಕೊನೆಗೆ ಜನರೇ ಅವರಿಗೆ ನಾಮಾ ಹಾಕಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಸಹವಾಸ ಸಾಕಾಗಿದೆ. ರಾಜ್ಯದಲ್ಲಿನ ಮೈತ್ರಿ ಸಕರ್ಾರ ಐಸಿಯು ಕೃತಕ ಉಸಿರಾಟ ಪರಿಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.