ಶಾಸಕ ಬೆನಕೆರವರಿಂದ ಸಿಟಿ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ

ಲೋಕದರ್ಶನ ವರದಿ

ಬೆಳಗಾವಿ 11: ದಿ.11ರಂದು ನಗರದ ಸಿಟಿ ಬಸ್ ನಿಲ್ದಾಣದ (ಅಂಡರ್ ಕನ್ಸ್ಟ್ರಕ್ಷನ್) ಕಾಮಗಾರಿಯನ್ನು ಶಾಸಕ ಅನಿಲ ಬೆನಕೆರವರು ಇಂದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ನಡೆಸಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಸಿಟಿ ಬಸ್ ನಿಲ್ದಾಣವು ಸ್ಮಾರ್ಟ ಸಿಟಿ ಅಡಿಯ ಕಾಮಗಾರಿಯಾಗಿದ್ದು ಅದನ್ನು ಅಚ್ಚುಕಟ್ಟಾಗಿ ನಿಮರ್ಾಣ ಮಾಡಬೇಕು ಎಂದು ಸ್ಮಾರ್ಟ ಸಿಟಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಶ್ರೀ ರೇಣುಕಾ ದೇವಿ ಯಾತ್ರಾ ಜಾಗೆಯನ್ನು ಸ್ಥಳಾಂತರಿಸುವ ಕುರಿತು ಚಚರ್ೆ ನಡೆಸಿದರು ಹಾಗೂ ಪ್ರಯಾಣಿಕರಿಗೆ ಬೇಸಿಗೆ ಮತ್ತು ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದೆಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಹಾಗೂ ಪ್ರಯಾಣಿಕರಿಗೆ ಸಿಟಿ ಬಸ್ ನಿಲ್ದಾಣದಲ್ಲಿ ತಂಗಲು ಹೆಚ್ಚುವರಿ ಶೆಡ್ಡ ಗಳನ್ನು ಹೊಸದಾಗಿ ನಿಮರ್ಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಬದಲ್ಲಿ ಶಾಸಕ ಅನಿಲ ಬೆನಕೆ ಅವರೊಂದಿಗೆ ವಿಭಾಗೀಯ ನಿಲ್ದಾಣಾಧಿಕಾರಿ ಎಮ್.ಆರ್ ಮುಂಜಿ, ಸ್ಮಾರ್ಟ ಸಿಟಿ ಸಹಾಯಕ ಅಭಿಯಂತರರಾದ ಕಡಬಿ, ಡಿಪೊ ವ್ಯವಸ್ಥಾಪಕರಾದ ಲಿಂಗರಾಜ ಲಾಟಿ, ನಿತೀನ ಗಡಾದ, ಗುತ್ತಿಗೆದಾರರು, ಇತರ ಅಧಿಕಾರಿಗಳು, ನೌಕರರ ಸಂಘದ ಅಧ್ಯಕ್ಷರುಗಳಾದ ಸಂಜಯ ರಾಜಸ, ರಾಜು ಪುಣ್ಯಾಗೊಳ ಹಾಗೂ ಇತರರು ಉಪಸ್ಥಿತರಿದ್ದರು.