ಲೋಕದರ್ಶನ ವರದಿ
ಗದಗ 14: 33ನೇ ವಾಡರ್ಿನ ವೀರೇಶ್ವರ ನಗರದ ಈಶ್ವರ ದೇವಸ್ಥಾನದ ಆವರಣ ಸ್ನೇಹ ಬಳಗ ಗದಗ ಇವರು ದಿ. 14ರ ಪ್ರತಿ ರವಿವಾರದಂತೆ ಈ ವಾರವು ಬೆಳ್ಳಿಗ್ಗೆ 7ರಿಂದ 11ರ ವರೆಗೆ ಸ್ವಚ್ಛ ಕಾರ್ಯದಲ್ಲಿ ಸ್ನೇಹ ಬಳಗದ ಸದಸ್ಯರು ಹಾಗೂ ನಗರದ ನಿವಾಸಿಗರು ಭಾಗವಹಿಸಿದರು.
ಸ್ನೇಹ ಬಳಗ ಮಾರ್ಗದರ್ಶಕರಾದ ಬಾಬು ಎನ್ ಶಿದ್ಲಿಂಗ ಇವರ ಮಾತನಾಡಿ ನಗರವನ್ನು ಸ್ವಚ್ಛ ಸುಂದರ ನಗರವನ್ನಾಗಿ ನಿಮರ್ಾಣ ಮಾಡೋಣ ಎಂದು ನಗರದ ನಿವಾಸಿಗರಿಗೆ ಮನವಿ ಮಾಡಿದರು. ಮನೆಯಲ್ಲಿ ಶೇಕರಣೆ ಮಾಡುವ ಕಸವನ್ನು ಎಲೇಲ್ಲೋ ಎಸೆಯದೆ ಗದಗ ಬೆಟಗೇರಿ ನಗರದ ಸಭೆಯ ಕಸ ವಿಲೇವಾರಿ ವಾಹನ ದಿನನಿತ್ಯ ಬರುತ್ತದೆ. ಗದಗ ಬೆಟಗೇರಿ ನಗರಸಭೆಯ ಪೌರಕಾಮರ್ಿಕರಿಗೆ ತಮ್ಮ ಮನೆಯಲ್ಲಿರುವ ಹಸಿಕಸ, ಒಣಕಸವನ್ನು ವಿಂಗಡಣೆ ಮಾಡಿ ಕಸ ವಿಲೇವಾರಿ ವಾಹಕ್ಕೆ ನೀಡಿ ನಮ್ಮ ನಗರವನ್ನು ಸ್ವಚ್ಛ ಸುಂದರ ನಮ್ಮ ಕನಸಿನ ನಗರವನ್ನಾಗಿ ನಿಮರ್ಾಣ ಮಾಡೋಣ ಎಂದು ನಗರದ ನಿವಾಸಿಗರಿಗೆ ಜಾಗೃತ ನೀಡಿದರು.
ಸ್ವಚ್ಛ ಕಾರ್ಯದಲ್ಲಿ ಸ್ನೇಹ ಬಳಗದ ಸದಸ್ಯರಾದ ರಾಜು ಸೂರಪ್ಪಗೌಡ್ರ, ದೀಪಕ ಎ ಕಲಾಲ, ನಾರಾಯಣ ಶಿದ್ಲಿಂಗ, ಶಿವರಾಜ ಕುರ್ತಕೋಟಿ, ಚೇತನ ಮಟ್ಟಿ, ವಿಶಾಲ ಶಿದ್ಲಿಂಗ, ಕಿರಣ ಶಿದ್ಲಿಂಗ, ಸಿದ್ದು ಸಾಲಿಮಠ, ಶ್ರೀನಿವಾಸ, ಸರ್ವಸದಸ್ಯರು ಹಾಗೂ ನಗರದ ನಿವಾಸಿಗರು ಭಾಗವಹಿಸಿದರು.