ಧಾರವಾಡ 05: ಬರುವ ಜನವರಿ 4,5 ಹಾಗೂ 6 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ, ಕಸಾಪ ಹಾಗೂ ಕನ್ನಡ ಪರ ಕಾರ್ಯಕರ್ತರು ಸ್ವಚ್ಛತಾ ಆಂದೋಲನ ಆರಂಭಿಸಿದ್ದಾರೆ. ದಿ.5ರಂದು ಬೆಳಿಗ್ಗೆ ನಗರದ ಕಾಲೇಜು ರಸ್ತೆಯಲ್ಲಿರುವ 115 ವರ್ಷಗಳನ್ನು ಪೂರೈಸಿರುವ ಅರಳಿ ಮರದ ಕಟ್ಟೆಯನ್ನು ಶುಚಿಗೊಳಿಸಿ, ಕಟಕಟೆಗೆ ಬಣ್ಣ ಬಳಿದು ಸುಂದರಗೊಳಿಸಲಾಯಿತು. ರಂಗಾಯಣದ ನೇತೃತ್ವದಲ್ಲಿ ಕಲಾವಿದರು ಬಣ್ಣ ಹಚ್ಚುವ ಕಾರ್ಯ ಕೈಗೊಂಡರು.
ಶತಮಾನ ಕಂಡ ವೃಕ್ಷ; ಕಾಲೇಜು ರಸ್ತೆಯಲ್ಲಿ ಎಲ್.ಐ.ಸಿ.ಕಚೇರಿ ಬಳಿ ಇರುವ ಈ ಅರಳಿ ಮರವನ್ನು ಇಂಗ್ಲೆಂಡ್ನ ದೊರೆ, ಇಂಡಿಯಾದ ಚಕ್ರಾಧಿಪತ್ಯ ಹೊಂದಿದ್ದ 7 ನೇಎಡ್ವರ್ಡನ ಪಟ್ಟಾಭಿಷೇಕದ ಸವಿನೆನಪಿಗಾಗಿ, ಗಿಬ್ ದಂಪತಿಗಳು ಮತ್ತು ನೈಟ್ ಅವರ ಉಪಸ್ಥಿತಿಯಲ್ಲಿ ರೊದ್ದ ಶ್ರೀನಿವಾಸರಾಯರು 1903ರ ಜನವರಿ 1ರಂದು ನೆಟ್ಟಿದ್ದರು. ಈಗ 115 ವರ್ಷಗಳನ್ನು ಈ ವೃಕ್ಷ ಪೂರೈಸಿದೆ.
ಸ್ವಚ್ಛತಾ ಕಾರ್ಯದಲ್ಲಿ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ್, ರಂಗಾಯಣ ಆಡಳಿತಾಧಿಕಾರಿ ಕೆ.ಹೆಚ್. ಚನ್ನೂರ, ಆಹಾರ ಇಲಾಖೆಯ ಜಂಟಿನಿದರ್ೆಶಕ ಸದಾಶಿವ ಮಜರ್ಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕ ಎಸ್.ಕೆ. ರಂಗಣ್ಣವರ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ: ಲಿಂಗರಾಜ ಅಂಗಡಿ, ಪ್ರಕಾಶ ಉಡಕೇರಿ, ಎಸ್.ಎಸ್. ದೊಡ್ಡಮನಿ, ಎಫ್.ಬಿ. ಕಣವಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಎನ್.ಆರ್. ಬಾಳಿಕಾಯಿ, ಶ್ರೀಶೈಲ ರಾಚಣ್ಣವರ, ಬಸವರಾಜ ವಾಸನದ್ ಹಾಗೂ ಮತ್ತಿತರರು ಇದ್ದರು.