ಗದಗ 07: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ವಾತಾವರಣವನ್ನು ನಿಮರ್ಿಸಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುವ ಕುರಿತು ಜನ ಜಾಗೃತಿ ಮೂಡಿಸುವ ಸ್ವಚ್ಛ ಮೇವ ಜಯತೆ ಆಂದೋಲನದ ಜಾಗೃತಿ ರಥಕ್ಕೆ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ ಅವರಿಂದು ಜಿಲ್ಲಾಡಳಿತ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಂದು ಗ್ರಾಮಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವದು ಈ ಆಂದೋಲನದ ಮುಖ್ಯ ಉದ್ದೇಶವಾಗಿದ್ದು ವೈಯಕ್ತಿಕ, ಗೃಹ ಶೌಚಾಲಯ, ಸಮುದಾಯ ಶೌಚಾಲಯಗಳ ಬಳಕೆಯಿಂದಾಗುವ ಪ್ರಯೋಜನೆ ಹಾಗೂ ಜಲ ಸಂರಕ್ಷಣೆ, ನೀರಿನ ಮೂಲಗಳ ಪುನಶ್ಚೇತನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲಿ ಸ್ವಚ್ಚ ಮೇವ ಜಯತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಗ್ರಾಮಗಳಲ್ಲಿ ಸ್ವಚ್ಛ ವಾತಾವರಣ ನಿಮರ್ಿಸಿಕೊಳ್ಳಲು ಮುಂದಾಗುವಂತೆ ಎಸ್.ಪಿ.ಬಳಿಗಾರ ಕರೇ ನೀಡಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ಜಿ.ಪಂ. ಸದಸ್ಯರುಗಳಾದ ವಾಸಣ್ಣ ಕುರಡಗಿ, ಮಂಜುಳಾ ಹುಲ್ಲಣ್ಣವರ, ರೂಪಾ ಅಂಗಡಿ, ಜಿ.ಪಂ. ಸಿ.ಇ.ಓ ಮಂಜುನಾಥ ಚವ್ಹಾಣ, ಜಿ.ಪಂ. ಉಪಕಾರ್ಯದಶರ್ಿ ಕೆ. ಪ್ರಾಣೇಶರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿರೂಪಾಕ್ಷ ರೆಡ್ಡಿ ಮಾದಿನೂರ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಾಗೃತಿ ರಥ ಸಂಚರಿಸುವ ಶಿರಹಟ್ಟಿ ತಾಲೂಕಿನ ಗ್ರಾಮಗಳು: ಜೂನ್08 ರಂದು ಮಾಗಡಿ, ಯಳವತ್ತಿ, ಮಾಡಳ್ಳಿ, ಜೂನ್ 09 ರಂದು ಗೊಜನೂರು, ಬಟ್ಟೂರು, ಪು-ಬಡ್ನಿ, ಜೂನ್ 10 ರಂದು ಶಿಗ್ಲಿ, ದೊಡ್ಡೂರು, ಸುರಣಗಿ, ಜೂನ್ 11 ರಂದು ಅಡರಕಟ್ಟಿ, ಆದರಳ್ಳಿ, ಬಟ್ಟೂರು, ಜೂನ್12 ರಂದು ಬೆಳಹಟ್ಟಿ, ಹುಲ್ಲೂರು, ರಣತೂರು, ಜೂನ್ 13 ರಂದು ಕೊಗನೂರ, ಕೊಂಚಿಗೇರಿ, ಹೊಲೆಆಲೂರ, ಜೂನ್ 14 ರಂದು ವಡವಿ, ಹೆಬ್ಬಾಳ, ಬಾಲೆಹೊಸೂರು, ಜೂನ್ 15 ರಂದು ಛಬ್ಬಿ, ಮಜ್ಜೂರು, ಮಾಚೇನಹಳ್ಳಿ, ಜೂನ್ 16 ರಂದು ಬನ್ನಿಕೊಪ್ಪ, ತಾರಿಕೊಪ್ಪ, ಕಡಕೋಳ ಗ್ರಾಮ ಪಂಜಾಯತಗಳಲ್ಲಿ ಸ್ವಚ್ಛತಾ ರಥ ಸಂಚರಿಸುವದು.