ಲೋಕದರ್ಶನ ವರದಿ
ವಿಜಯಪುರ 07:ಸ್ವಚ್ಛ ಭಾರತ ಅಭಿಯಾನ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ
ತಾಲೂಕು ಪಂಚಾಯತ ಸಭಾಂಗಣದಲ್ಲಿ ಸ್ವಚ್ಛಾಗ್ರಾಹಿಗಳಿಗೆ ಒಂದು ದಿನ ತರಬೇತಿ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾಯರ್ಾಗಾರವನ್ನು ಸ್ವಚ್ಛ ಭಾರತ ಅಭಿಯಾನ (ಗ್ರಾ), ಜಿಲ್ಲಾ ಪಂಚಾಯತ ವಿಜಯಪುರದ ನೂಡಲ್ ಅಧಿಕಾರಿಗಳಾದ ಟಿ.ಎಸ್.ಆಲಗೂರ ಉದ್ಘಾಟಿಸಿದರು. ಸ್ವಚ್ಛ ಭಾರತ ಅಭಿಯಾನ (ಗ್ರಾ), ಜಿಲ್ಲಾ ಪಂಚಾಯತ ವಿಜಯಪುರದ ಜಿಲ್ಲಾ ಸಮಾಲೋಚಕರಾದ ಸಿದ್ದಣ್ಣ ಪೂಜಾರಿ ಮಾತನಾಡಿ ಶೌಚಾಯಲವಿದ್ದಲ್ಲಿ ಸ್ವಚ್ಛತೆಯಿರುತ್ತೆ ಸ್ವಚ್ಛತೆಯಿದ್ದಲ್ಲಿ ದೇವರಿರುತ್ತಾನೆ. ಆದಕಾರಣ ನಿಮ್ಮ ನಿಮ್ಮ ಮನೆಗಳಲ್ಲಿ ದೇವರು ನೆಲಿಸಬೇಕಾದರೆ ನಿಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಕೊಳ್ಳಿ ಎಂದು ತಿಳಿಸಿದರು.
ಕಾಯರ್ಾಗಾರವನ್ನು ಉದ್ಘಾಟಿಸಿದ ಸ್ವಚ್ಛ ಭಾರತಅಭಿಯಾನ (ಗ್ರಾ), ಜಿಲ್ಲಾ ಪಂಚಾಯತ ವಿಜಯಪುರದ ನೂಡಲ್ ಅಧಿಕಾರಿಗಳಾದ ಟಿ.ಎಸ್.ಆಲಗೂರ ಅವರು ಮಾತನಾಡಿ "ಸ್ವಚ್ಛಗ್ರಾಹಿಗಳು ಮಾಡುವ ಕೆಲಸ ಇದು ದೇವರ ಕೆಲಸವೆಂದು ತಿಳಿದು ಕಾರ್ಯ ಮಾಡಬೇಕು. ಜೊತೆಗೆ
ನೀವು ಮಾಡುವ ಕೆಲಸ ಇದು ಪುಣ್ಯದ ಕೆಲಸವೆಂದರು. ಇನ್ನ್ಮುಂದೆ ಎಲ್ಲರೂ ಅತ್ಯಂತ ಕಾಯೋನ್ಮೂಖವಾಗಿ ಕಾರ್ಯ ಮಾಡಿ. ಪ್ರತಿ ಮನೆ ಮನೆಗೆ ತೆರಳಿ ಶೌಚಾಲಯದ ಮಹತ್ವ ಮತ್ತು ಅರಿವು ಮೂಡಿಸಿ ಎಂದು ತಿಳಿಸಿದರು. ನಂತರ, ಕಾಯರ್ಾಗಾರದಲ್ಲಿ ಉಪನ್ಯಾಸ ನೀಡಿದ ಸ್ವಚ್ಛ ಭಾರತಅಭಿಯಾನ (ಗ್ರಾ), ಜಿಲ್ಲಾ ಪಂಚಾಯತ ವಿಜಯಪುರದ ಜಿಲ್ಲಾ ಸಮಾಲೋಚಕರಾದ
ಅನುಪಮಾ ಅವರು "ನಿಮ್ಮ ನಿಮ್ಮಗ್ರಾಮ ಪಂಚಾಯತಗಳನ್ನು ಸ್ವಚ್ಛವಾಗಿಡುವುದು ನಿಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಕಾಯರ್ೋನ್ಮೂಖವಾಗಿ ಕೆಲಸ ಮಾಡಿದಲ್ಲಿ ಗಾಂಧೀಜಿಯವರ ಕಲ್ಪನೆಯ ರಾಮರಾಜ್ಯ ಮಾಡುವುದು ಕಷ್ಟವೇನಲ್ಲ ಎಂದು ತಿಳಿಸಿದರು.
ಕಾಯರ್ಾಗಾರದಲ್ಲಿ ಉಪನ್ಯಾಸ ನೀಡಿದ ಸ್ವಚ್ಛ ಭಾರತ ಅಭಿಯಾನ (ಗ್ರಾ), ಜಿಲ್ಲಾ ಪಂಚಾಯತ ವಿಜಯಪುರದ ಮತ್ತೋರ್ವ ಜಿಲ್ಲಾ ಸಮಾಲೋಚಕರಾದ ರಾಜು ಚವ್ಹಾಣ ಮಾತನಾಡಿ "ಸ್ವಚ್ಛ ಭಾರತ ಅಭಿಯಾನ (ಗ್ರಾ)ದ ಕಲ್ಪನೆ ಮತ್ತು ಬೆಳವಣಿಗೆಯ ಕುರಿತು ತಿಳಿಸಿದರು ಕಾಯರ್ಾಗಾರದಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ನೇಮಕಗೊಂಡ ಸ್ವಚ್ಚಾಗ್ರಾಹಿಗಳು, ತಾಲೂಕು ಪಂಚಾಯತ ವಿಜಯಪುರದ ತಾಲೂಕು ಸಂಯೋಜಕರಾದ ಶ್ರೀಧರ, ತಾಲೂಕು ಪಂಚಾಯತ ಸಿಂದಗಿಯ ತಾಲೂಕು ಸಂಯೋಜಕರಾದ ಕಲ್ಲಪ್ಪ ನಂದರಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಾಯರ್ಾಗಾರವನ್ನು ಸ್ವಚ್ಛ ಭಾರತ ಅಭಿಯಾನ (ಗ್ರಾ), ತಾಲೂಕು ಪಂಚಾಯತ ವಿಜಯಪುರದ
ತಾಲೂಕು ಸಂಯೋಜಕರಾದ ಶ್ರೀಧರ ನಿರೂಪಿಸಿ ವಂದಿಸಿದರು. ತಾಲೂಕು ಪಂಚಾಯತ ಸಿಂದಗಿಯ ತಾಲೂಕು ಸಂಯೋಜಕರಾದ ಕಲ್ಲಪ್ಪ ನಂದರಗಿ ಸ್ವಾಗತಿಸಿದರು.