ಮೋಳೆ: ಇತರೆ ಸಕ್ಕರೆ ಕಾಖರ್ಾನೆಗಳಿಗಿಂತ ಹೆಚ್ಚಿನ ದರ ನೀಡಲು ಬದ್ಧ

ಲೋಕದರ್ಶನ ವರದಿ

ಮೋಳೆ 20:  ಸಹಕಾರಿ ತತ್ವದ ಆಧಾರದ ಮೇಲೆ ಪ್ರಾರಂಭಗೊಂಡಿರುವ  ದಿ. ಕೃಷ್ಣಾ ಸಹಕಾರಿ ಸಕ್ಕರೆ ಸನ್ 2019-20ನೇ ಸಾಲಿನಲ್ಲಿ ಕಬ್ಬು ಪೂರೈಸುವ  ರೈತರಿಗೆ ಸುತ್ತಲಿನ ಇತರ ಸಕ್ಕರೆ ಕಾಖರ್ಾನೆಗಳು ಯಾವ ದರವನ್ನು ನೀಡುತ್ತವೆಯೋ ಅದಕ್ಕಿಂತ ಹೆಚ್ಚಿನ ದರ ನೀಡಲು ಬದ್ದ ಎಂದು ದಿ.  ಕೃಷ್ಣಾ ಸಕ್ಕರೆ ಕಾಖರ್ಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಹೇಳಿದರು. 

ದಿ.20 ರಂದು ದಿ. ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯ ಸನ್ 2019-20ನೇ ಸಾಲಿನ 18ನೇ ಕಬ್ಬು ನುರಿಸುವ ಹಂಗಾಮಿಗೆ ಕ್ಯಾರಿಯರಗೆ ಕಬ್ಬು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಕಳೆದ 17 ವರ್ಷಗಳಿಂದ ಕೃಷ್ಣಾ ಸಹಕಾರಿ ಸಕ್ಕರೆ ಕಾಖರ್ಾನೆಯು ರಾಜ್ಯದ ಎಲ್ಲ ಸಕ್ಕರೆ ಕಾಖರ್ಾನೆಗಳಿಂತ ಹೆಚ್ಚಿನ ದರವನ್ನು ನೀಡುತ್ತ ಬಂದಿದೆ. ಅದೇ ಪ್ರಕಾರ ಪ್ರಸಕ್ತ ಹಂಗಾಮಿಗೂ  ಸಾಧ್ಯವಾದಷ್ಟು ಹೆಚ್ಚಿನ ದರ ಕೊಡಲಾಗುವುದೆಂದರು.

 ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕೇಂದ್ರ ಸರಕಾರ ನಿಗದಿ ಪಡಿಸಿದಂತರ ಎಫ್.ಆರ್.ಪಿ ಪ್ರಕಾರ ದರ ನೀಡಲಾಗಿದೆ. ಪ್ರವಾಹದಿಂದ ರೈತರು ಆಥರ್ಿಕ ಸಂಕಷ್ಟದಲ್ಲಿದ್ದಾರೆ. ಅದನ್ನು ಆಡಳಿತ ಮಂಡಳಿ ಗಂಬೀರವಾಗಿ ಪರಿಗಣಿಸಿದ್ದು ಮುಂದಿನ ದಿನಮಾನಗಳಲ್ಲಿ  ರೈತರಿಗೆ ಹೊಸ ಗಿಷ್ಟ ನೀಡಲಾಗುವುದೆಂದು ಪರಪ್ಪಣ್ಣ ಸವದಿ ಹೇಳಿದರು.

  ಕಾಖರ್ಾನೆ ಪ್ರಾರಂಭವಾದಾಗಿನಿಂದ  ರೈತರಿಗೆ ಬೆಂಬಲ ಬೆಲೆಯನ್ನೇ ನೀಡುತ್ತ ಬಂದಿದ್ದೇವೆ. ಈ ಬಾರಿಯೂ ಹೆಚ್ಚಿನ ದರ ನೀಡಲಾಗುವುದು. ಇದಕ್ಕೆಲ್ಲ, ಕಾಮರ್ಿಕರ  ಪರಿಶ್ರಮ, ಆಡಳಿತ ಮಂಡಳಿಯ ಪ್ರಾಮಾಣಿಕತೆ ಹಾಗೂ ರೈತರ ಸಹಕಾರವೇ ಕಾರಣ ಎಂದ ಅವರು ಈ ಬಾರಿ ಕೃಷ್ಣಾ ನದಿಗೆ ಪ್ರವಾಹ ಬಂದು ಸಾವಿರಾರು ಎಕ್ಕರ ಬೂಮಿಯಲ್ಲಿದ್ದ ಕಬ್ಬು ನಾಶ್ಯವಾಗಿ ಹೋಗಿದೆ. ಅದಕ್ಕಾಗಿ ರೈತ ಬಾಧವರು ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಮೇಲೆ ಹಾಗೂ ಕಾಖರ್ಾನೆಯ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಕಬ್ಬುನ್ನು ಕಳುಹಿಸಿ ಕೊಡಬೇಕೆಂದು ಮನವಿ ಮಾಡಿದರು.

  ಕೃಷ್ಣಾ ಸಕ್ಕರೆ ಕಾಖರ್ಾನೆಯ ಉಪಾಧ್ಯಕ್ಷ ಜೋತಗೌಡ ಪಾಟೀಲ  ಮಾತನಾಡಿ, ರೈತರಿಗೂ ಲಾಭವಾಗಬೇಕು, ಕಾಖರ್ಾನೆಗಳು ಉಳಿಯಬೇಕು ಎಂಬ ದೃಷ್ಟಿಯನ್ನು ಇಟ್ಟುಕೊಂಡು ಪ್ರತಿವರ್ಷ ಹೆಚ್ಚಿನ ದರ ನೀಡುತ್ತಲೇ ಬಂದಿದ್ದೇವೆ. ಈ ಬಾರಿಯೂ ಇತರ ಸಕ್ಕರೆ ಕಾಖರ್ಾನೆಗಳಿಗಿಂತ ಹೆಚ್ಚಿನ ದರ ನೀಡಲಾಗುವುದೆಂದು ಹೇಳಿದರು.

ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಹುಲಗೇರಿಯ ವೀರಯ್ಯಾ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು, ಉಪಾಧ್ಯಕ್ಷ ಜ್ಯೋತಗೌಡ ಪೊಲೀಸ್ ಪಾಟೀಲ, ವ್ಯವಸ್ಥಾಪಕ ನಿದರ್ೇಶಕ ಜಿ.ಎಮ್. ಪಾಟೀಲ,  ನಿದರ್ೇಶಕರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ,  ಘೂಳಪ್ಪಣ್ಣ ಜತ್ತಿ,ವಿಶ್ವನಾಥ ಪೊಲಿಸಪಾಟೀಲ,  ಸಿ.ಎಚ್. ಪಾಟೀಲ,ರಮೇಶ ಪಟ್ಠಣ.ಎ,ಎಂ ಖೋಬ್ರಿ, ಆರ್.ವ್ಹಿ.ಕುಲಕಣರ್ಿ ಉಪಸ್ಥಿತರಿದ್ದರು.  ರೈತ ಮುಖಂಡರಾದ ಅಶೋಕ ಅವಕ್ಕಣವರ, ಡಿ.ಸಿ ನಾಯಿಕ, ಲೊಕೇಶ ಪಾಟೀಲ ಶಿವರುದ್ರ ಗುಳಪ್ಪನವರ,ಜಗದೀಶ ದಳವಾಯಿ,ದುಂಡಪ್ಪ ಅಸ್ಕಿ,ಫರೀದ ಅವಟಿ,ಸೇರಿದಂತೆ ಅನೇಕರು ಇದ್ದರು. ಕಚೇರಿ ಅಧಿಕ್ಷಕ ಸುರೇಶ ಠಕ್ಕನ್ನವರ ಕಾರ್ಯಕ್ರಮ ನಿರ್ವಹಿಸಿದರು, ಜಿ.ಎಂ.ಜತ್ತಿ, ಸ್ವಾಗತಿಸಿ ನಿರೂಪಿಸಿದರು. ಶಂಕರ ಗೋಟಖಿಂಡಿ ವಂದಿಸಿದರು.