ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಸಂವಹನ ಕೌಶಲ್ಯ ಮುಖ್ಯ: ಮೂಲಿಮನಿ

ಲೋಕದರ್ಶನವರದಿ

ಶಿಗ್ಗಾವಿ 01: ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉದ್ಯೋಗ ಘಟಕ ಹಾಗೂ ಕನರ್ಾಟಕ ವಿಶ್ವವಿದ್ಯಾಲಯ ಉದ್ಯೊಗ ಮಾಹಿತಿ ಮತ್ತು ಮಾರ್ಗದರ್ಶನ  ಕೇಂದ್ರ ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ದಿ. 27 ರ ಬುಧವಾರ ರಂದು ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನದ ಒಂದು ದಿನ ಕಾಯರ್ಾಗಾರವನ್ನು ಆಯೋಜಿಸಲಾಗಿತ್ತು. 

      ಕನರ್ಾಟಕ ವಿಶ್ವವಿದ್ಯಾಲಯ ಉದ್ಯೊಗ ಮಾಹಿತಿ ಮತ್ತು ಮಾರ್ಗದರ್ಶನ  ಕೇಂದ್ರದ ಮುಖ್ಯಸ್ಥರಾದ ಡಾ.ಅರವಿಂದ ಉ ಮೂಲಿಮನಿ ಮಾತನಾಡಿ, ಸಂವಹನ ಕೌಶಲ್ಯ ಕುರಿತು ಆಡಳಿತ, ಸಂದರ್ಶನ, ಸಮೂಹ ಚಚರ್ೆ, ಉದ್ಯೋಗ ಪಡೆಯುವಲ್ಲಿ, ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ತಾಂತ್ರಿಕ ಶಿಕ್ಷಣ  ಮುಂತಾದವುಗಳಲ್ಲಿ ಸಂಹವನ ಕೌಶಲ್ಯ  ಹೇಗೆ ನೆರವಾಗುತ್ತಿದೆ ಎಂಬುದನ್ನು ತುಂಬಾ ಮಾಮರ್ಿಕವಾಗಿ ಮಾತನಾಡಿದರು.  

       ಧಾರವಾಡದ ನಿವೃತ್ತ ಬ್ಯಾಂಕ ಅಧಿಕಾರಿ ಶ್ರೀನಿವಾಸ ಉಡಪಿ ಮಾತನಾಡಿ, ವ್ಯಕ್ತಿತ್ವ ವಿಕಸನ ಕುರಿತು ಹಲವಾರು ಪ್ರಾಯೋಗಿಕ ನಿದರ್ಶನಗಳೊಂದಿಗೆ ಉಪನ್ಯಾಸ ನೀಡಿದರು. 

       ಕನರ್ಾಟಕ ವಿಶ್ವವಿದ್ಯಾಲಯ ಉದ್ಯೊಗ ಮಾಹಿತಿ ಮತ್ತು ಮಾರ್ಗದರ್ಶನ  ಕೇಂದ್ರದ ಉದ್ಯೋಗಾಧಿಕಾರಿ ತನುಜಾ ರಾಮಪುರೆ ಮಾತನಾಡಿ, ಇವರು ಸ್ಪರ್ದತ್ಮಕ ಪರೀಕ್ಷೆಗಳನ್ನು ಹೇಗೆೆ ಎದುರಿಸಬೇಕು ಮತ್ತು ಯಾವ ಉದ್ಯೋಗಕ್ಕೆ ಯುವ ಸ್ಪಧರ್ಾತ್ಮಕ ಪರೀಕ್ಷೆ ಬರೆಯಬೇಕು ಯಾವ ಯಾವ ವಿಷಯಗಳಿರುತ್ತವೆ ಎಂಬುದನ್ನು ಮತ್ತು ಯಾವ ಗ್ರಂಥಗಳನ್ನು ಬಳಸಬೇಕೆಂಬುದನ್ನು ವಿವರವಾಗಿ ಬಹಳ ಉಪಯುಕ್ತ ಮಾಹಿತಿ ನೀಡಿದರು.        

ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಕಾರ್ಯದಶರ್ಿಗಳಾದ  ಎಸ್.ಬಿ.ಹಿರೇಮಠ ಇವರು ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

        ಘಟಕದ ಉದ್ಯೋಗ ಅಧಿಕಾರಿ ಡಾ. ಬಿ. ಸ್. ನರೆಗಲ್ ಇವರು ಕಾಯರ್ಾಗಾರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಡಿ.ಎ.ಗೊಬ್ಬರಗುಂಪಿ ವಹಿಸಿದ್ದರು.

ಸಂವಾದ ಮತ್ತು ಸಮಾರೋಪ ಸಮಾರಂಭದಲ್ಲಿ ಎಲ್ಲ ವಿದ್ಯಾಥರ್ಿಗಳು ಸಕ್ರೀಯವಾಗಿ ಎಲ್ಲ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಮಾಡಿದರು. ಐಕ್ಯೂಎಸಿ ಸಂಚಾಲಕ ಪ್ರೊ.ಎಸ್.ಎಸ್.ಮಲ್ಲಾಡದ ಮತ್ತು ಎಲ್ಲ ಸಿಬ್ಬಂದಿವರ್ಗದವರು  ಕಾಲೇಜು ಒಕ್ಕೂಟದ ವಿದ್ಯಾಥರ್ಿ ಪ್ರತಿನಿಧಿ ದೀಪಕ ಯಾದಣ್ಣವರ ಉಪಸ್ಥಿತರಿದ್ದರು.  ಚೇತನ ಕುವರಕರ ಕಾರ್ಯಕ್ರಮ ನಿರ್ವಹಿಸಿದರು.