ಸಮುದಾಯದ ಮುಖಂಡರಿಂದ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸನ್ಮಾನ
ದೇವರಹಿಪ್ಪರಗಿ 01: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೂಲಿ ಕಾರ್ಮಿಕ ಕವಿ ಸಂಗಮೇಶ ಕರೆಪ್ಪಗೋಳ ಅವರನ್ನು ತಾಲೂಕು ಕುರುಬರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿದರು.ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಬುಧವಾರದಂದು ಸಂಘದ ಅಧ್ಯಕ್ಷರಾದ ಗುರುನಾಥ ಮುರಡಿ ಅವರ ನೇತೃತ್ವದಲ್ಲಿ ಭೇಟಿ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ಸಮುದಾಯದ ಹಿರಿಯ ಕವಿ ಸಂಗಮೇಶ ಕರೆಪ್ಪಗೋಳ ಅವರು ತಮ್ಮ ಕಾಯಕದ ಜೊತೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಹಲವಾರು ಪುಸ್ತಕ ಪರಿಚಯಿಸಿದ್ದಾರೆ.
ತಾಲೂಕಿನ ಮುಖಂಡರು ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಗುರುತಿಸಿ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶರಣರ ನಾಡಿನಲ್ಲಿ ನಡೆಯುತ್ತಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿರುವುದು ನನ್ನ ಭಾಗ್ಯ. ಜೀವನವಿಡಿ ಕಾಯಕದಲ್ಲಿ ತೊಡಗಿದ ನನ್ನ ಕಾರ್ಯ ಗುರುತಿಸಿ ಈ ಗೌರವ ನೀಡಿರುವುದು ನನ್ನ ಪುಣ್ಯ ಎಂದು ಸರ್ವಾಧ್ಯಕ್ಷರಾದ ಸಂಗಮೇಶ ಕರೆಪ್ಪಗೋಳ ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶರಣು ಪೂಜಾರಿ, ಸುಭಾಷ ಹೊಸಟ್ಟಿ ,ಪ್ರಕಾಶ ದೊಡಮನಿ,ಆನಂದ ವಗ್ಗರ ,ಅಪ್ಪು ಪಟ್ಟೇದ ,ಮಾಳು ,ಹಳ್ಳಿ, ಚಂದ್ರಾಮ ,ಪೂಜಾರಿ ,ಸಾಯಬಣ್ಣ ಮುರಾಳ ,ಭೀಮನಗೌಡ ಲಚ್ಯಾಣ,ಸಿದ್ದು ಪಟ್ಟೇದ ಶರಣು ಅಂಗಡಿ ,ಎಸ್. ಪಿ,ಹೊಕ್ಕುಂಡಿ,ಮಲ್ಲೇಶಿ, ಕರೆಪ್ಪಗೋಳ ತಾಲ್ಲೂಕು ಕುರಬರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.