ನಿಗದಿತ ಅವಧಿಗೆ ಕಾಮಗಾರಿ ಪೂರ್ಣಗೊಳಿಸಿ : ಶಾಸಕ ಡಾ. ಚಂದ್ರು ಲಮಾಣಿ
ಶಿರಹಟ್ಟಿ 04: ಅಭಿವೃದ್ದಿ ಕಾಮಗಾರಿಯಲ್ಲಿ ಯಾವುದೇ ಲೋಪದೋಷ ಆಗದಂತೆ ಕಾಮಗಾರಿಯನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಿಂದ ಕೂಡಿರಬೇಕು ಇಲ್ಲವಾದಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಎಚ್ಚರಿಕೆ ನೀಡಿದರು.
ಅವರು ಸೋಮವಾರ ತಾಲೂಕಿನ ಗೋವನನಕೊಪ್ಪ ಗ್ರಾಮದಲ್ಲಿ ಪ್ರವಾಹದಿಂದ ಮತ್ತು ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಮೂಲಭೂತ ಸೌಕರ್ಯಗಳ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ 5105 ಅಡಿಯಲ್ಲಿ ಅಂದಾಜು ಮೊತ್ತ 50 ಲಕ್ಷ ರೂಗಳ ಸಿ ಸಿ. ರಸ್ತೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ರಸ್ತೆಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವದಕ್ಕೆ ಆದ್ಯತೆ ನೀಡಲಾಗುವುದು. ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಪ್ರಸ್ತಾಪನೆಯನ್ನು ಸಲ್ಲಿಸಲಾಗಿದೆ. ಸರಕಾರದ ಗಮನಕ್ಕೆ ತಂದು ಹಂತ ಹಂತವಾಗಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯನ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಗನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ತಿರಕವ್ವ ಹರಿಜನ, ಗ್ರಾ ಪಂ. ಸದಸ್ಯ ಅಜ್ಜಪ್ಪ ಭಜಂತ್ರಿ, ಗ್ರಾ ಪಂ. ಪಿ.ಡಿ.ಓ ಶರಣಪ್ಪ ಮುದ್ದಿ, ಗುರ್ಪ ಕಬ್ಬೇರಹಳ್ಳಿ, , ಹನುಮಂತ ಕಬ್ಬೇರಹಳ್ಳಿ, ಅಪ್ಪಣ್ಣ ಸಾಲಿ, ಅಜ್ಜಪ್ಪ ಭಜಂತ್ರಿ, ಶಂಕರ್ ಭಾವಿ, ರಾಜೀವ್‌ರೆಡ್ಡಿ ಬಮ್ಮನಕಟ್ಟಿ, ಪ್ರವೀಣ್ ಪಾಟೀಲ, ಭೀಮಣ್ಣ ಇಮ್ಮಡಿ, ಫಕ್ಕಿರೇಶ್ ತಳ್ಳಳ್ಳಿ, ಭೀಮನಗೌಡ ಪಾಟೀಲ್, ಸುರೇಶ ತಳ್ಳಳ್ಳಿ, ರವಿ ದುನ್ನೂರು, ವಿಜಯಾನಂದ ಪಾಟೀಲ್, ರಾಘು ಗೋಡ್ಕೊಟ್ಟಿ, ಕುಮಾರ್ ಕಬ್ಬೆರಳ್ಳಿ, ಗುತ್ತಿಗೆದಾರ ಮಾರುತಿ ಹರಿಜನ, ಪ್ರೇಮಕುಮಾರ ಮೇಲಿನಮನಿ ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.