ಮಲೇರಿಯಾ ನಿರ್ಮೂಲನೆಗೆ ಸಹಕರಿಸಿ: ಶಾಸಕ ಬಂಡಿ

ಲೋಕದರ್ಶನ ವರದಿ

ಗಜೇಂದ್ರಗಡ 04: ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆಗೋಳಿಸಲು ಸಾಧ್ಯವಿಲ್ಲ ಸಮುದಾಯದ ಸಹಭಾಗಿತ್ವದೊಂದಿಗೆ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆಗೆ   ಮಾಡಲು ಸಾಧ್ಯವಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ  ಪ.ಪೂ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಶುನ್ಯ ಮಲೇರಿಯಾ ನನ್ನಿಂದ ಆರಂಭ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಲೇರಿಯಾ, ಡೆಂಗೂ, ಚಿಕನಗುನ್ಯಾದಂತಹ ಮಾರಕ ರೋಗಗಳ ಮುಕ್ತ ಸಾಮಾಜ ಆರೋಗ್ಯಕರ ವಾತಾವರಣನಿರ್ಮಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜನತೆಯು ಕೈಜೋಡಿಸಬೇಕು ಇದರಿಂದ ಮಲೇರಿಯಾದಂತ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದರು.

ಜಿಲ್ಲಾ ವೈದ್ಯಾಧಿಕಾರಿಯಾದ ಕೆ ಅರುಂಧತಿ ಮಾತನಾಡಿ ಶುನ್ಯ ಮಲೇರಿಯಾ ನನ್ನಿಂದ ಆರಂಭ ಎಂಬ ಈ ವರ್ಷದ ಘೋಷಾವಾಕ್ಯದಡಿಯಲ್ಲಿ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಪರಿಸರದಲ್ಲಿ ಮತ್ತು ನಮ್ಮ ಮನೆಗಳ ಸುತ್ತಾ ಬಿದ್ದಿರುವ ತ್ಯಾಜ್ಯದಿಂದ ಅನಾಫೆಲಿಸ್ ಸೊಳ್ಳೆ ಉತ್ಪಾದನೆಯಿಂದ ರೋಗ ಹರಡುತ್ತದೆ. ಯಾರಿಗೆ ಆಗಲಿ ಚಳಿಜ್ವರ, ನಡುಕ, ತಲೆನೋವು ಈ ರೋಗದ ಲಕ್ಷಣವಾಗಿದ್ದು ತಕ್ಷಣವೇ ಪಕ್ಕದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವಂತೆ ಕರೆ ನೀಡಿದರು.

ತಾಲೂಕಾ ವ್ಯದ್ಯಾಧಿಕಾರಿ ಬಿ ಎಸ್ ಭಜೇಂತ್ರಿ, ವೈದ್ಯರಾದ ಎಂ ಎಚ್ ಹೊಸಮನಿ, ಕೃಷ್ಣಾಭಾಯಿ ಕಮತರ, ಎಂ ಎಸ್ ಜಾಧವ, ಹೊಣಕೇರಿ ಸೇರಿದಂತೆ ಪುರಸಭೆಯ ಸರ್ವ ಸದಸ್ಯರ ಉಪಸ್ಥಿತರಿದ್ದರು.