ನಾಳೆ ಸಹನಾ ವಿಜಯಕುಮಾರರೊಂದಿಗೆ ಸಂವಾದ ಕಾರ್ಯಕ್ರಮ

Conversation program with Sahana Vijayakumar tomorrow

ನಾಳೆ ಸಹನಾ ವಿಜಯಕುಮಾರರೊಂದಿಗೆ ಸಂವಾದ ಕಾರ್ಯಕ್ರಮ

ವಿಜಯಪುರ 02: ನಗರದ ಸೋಲಾಪುರ ರಸ್ತೆಯಲ್ಲಿರುವ ಶುಭಶ್ರೀ ಸಾಗರ ಹೋಟೆಲ್‌ನಲ್ಲಿ ಶನಿವಾರ ಸಂಜೆ ದಿ. 4 ರಂದು ಸಂಜೆ 5.30 ಗಂಟೆಗೆ ಓದುಗರೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಆಯೋಜನೆಯ ಈ ಕಾರ್ಯಕ್ರಮದಲ್ಲಿ "ಕಶೀರ", "ಅವಸಾನ", "ಮಾಗಧ" ಕಾದಂಬರಿಗಳ ಖ್ಯಾತಿಯ, ಜನಪ್ರಿಯ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ್ ಅವರು ಭಾಗವಹಿಸಲಿದ್ದಾರೆ.   

ಸಹನಾ ವಿಜಯಕುಮಾರರ ಹೊಸ ಕಾದಂಬರಿ "ಮಾಗಧ" ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಓದುಗರು, ಲೇಖಕರ ಹಸ್ತಾಕ್ಷರ ಮತ್ತು ಅವರೊಟ್ಟೆಗೆ ಸೆಲ್ಫಿಯ ಅವಕಾಶವೂ ಇದೆ ಎಂದು ಅಭಾಸಾಪ ವಿಜಯಪುರ ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಪುಸ್ತಕಗಳಿಗಾಗಿ ಸಂಪರ್ಕಿಸಿ  ವಿವೇಕ ಕುಲಕರ್ಣಿ -9880050818