ಬೆಳಗಾವಿ ಬಿಮ್ಸ್‌ನಲ್ಲಿ ನಿಲ್ಲದ ಬಾಣಂತಿಯರ ಮರಣ ಮೃದಂಗ : ಮತ್ತೋರ್ವ ಮಹಿಳೆ ಸಾವು
ಬೆಳಗಾವಿ 28: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದು, ಬಾಣಂತಿಯರಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಮೃತ್ಯು ಮನೆಯಾಗಿ ಪರಿವರ್ತನೆಯಾಗಿದೆ.
ಅಂಜಲಿ ಪಾಟೀಲ್(31) ಎಂಬ ಬಾಣಂತಿ ಸಾವನ್ನಪ್ಪಿದ್ದು, ಬಿಮ್ಸ್‌ನಲ್ಲಿ ಸೋಮವಾರ ರಾತ್ರಿ ಸಿಜರಿನ್ ಮೂಲಕ ಹೆರಿಗೆ ಮಾಡಲಾಗಿತ್ತು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್ ಇವರು ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದವರಾಗಿದ್ದಾರೆ. ಅಂಜಲಿಗೆ ಜನವರಿ 22ಕ್ಕೆ ಹೆರಿಗೆ ದಿನಾಂಕ ನೀಡಿದ್ದ ವೈದ್ಯರು.
ಬಳಿಕ ಹೆರಿಗೆ ನೋವು ಕಾಣಿಸದ ಹಿನ್ನೆಲೆ ಸೋಮವಾರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆರಿಗೆ ಬಳಿಕ ಬಾಣಂತಿ ಸಾವು ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕುಟುಂಬಸ್ಥರು ದೂರು ನೀಡಲು ಮುಂದಾದ್ದರು. ಬಿಮ್ಸ್ ಹೆರಿಗೆ ವಾರ್ಡ್ ಬಳಿ ಕುಟುಂಬಸ್ಥರ ಕಣ್ಣಿರು ಹಾಕುತ್ತಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆ ಹೆರಿಗೆ ವಾರ್ಡ್ ನಿಂದ ಬಾಣಂತಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಬಾಣಂತಿ ಅಂಜಲಿ ಪಾಟೀಲ್ ಶವ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.