ಲೋಕದರ್ಶನ ವರದಿ
ಕಾರವಾರ 05 : ತಾಲೂಕಿನ ಅಮದಳ್ಳಿಯಲ್ಲಿ ಯುವ ಜನ ಸೇವಾ ಕ್ರೀಡಾ ಇಲಾಖೆವತಿಯಿಂದ ಆಯೋಜಿಸಲಾದ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿತರು ಹಾಗೂ ಕಲಾವಿದರ ಕೊರತೆ ಕಾಡಿತು.
ಇಲ್ಲಿನ ಅಮದಳ್ಳಿಯ ವೀರಗಣಪತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಕರು ಬಾರದೇ ಅನಿವಾರ್ಯವಾಗಿ ಜಿಲ್ಲಾ ಪಂಚಾಯತಿ ಸದಸ್ಯ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಬೇಕಾಯಿತು. ಬಳಿಕ ಅವರು ಮಾತನಾಡಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸದ ಬಗ್ಗೆ ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದರು.
ಪ್ರತಿಭೆಗಳ ಪ್ರೋತ್ಸಾಹಕ್ಕಾಗಿ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಯುವಜನೋತ್ಸವವನ್ನು ಪ್ರತಿವರ್ಷ ನಡೆಸುತ್ತದೆ. ಅದರಂತೆ ನಿನ್ನೆ ಆಯೋಜನೆಯಾದ ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಸರಕಾರದ ಪ್ರೋಟೋಕಾಲ್ ಪ್ರಕಾರ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಉದ್ಘಾಟಿಸಬೇಕಿತ್ತು. ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಬೇಕಿತ್ತು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ್ ಹಾಗೂ ಜಿಲ್ಲೆಯ ಆರು ಶಾಸಕರು, ಎರಡು ವಿಧಾನ ಪರಿಷತ್ ಸದಸ್ಯರು ಗೌರವ ಉಪಸ್ಥಿತರಿರಬೇಕಿತ್ತು. ಇದಲ್ಲದೇ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಹಾಗೂ ವಿವಿಧ ಸದಸ್ಯರು, ತಾಲೂಕು ಪಂಚಾಯತಿ ಅಧ್ಯಕ್ಷೆ ಮೊದಲಾದವರು ಹಾಜರಿರಬೇಕಿತ್ತು. ಅಲ್ಲದೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವಿನಾಯಕ ಪಾಟೀಲ ಕೂಡ ವಿಶೇಷ ಆಮಂತ್ರಿತರೆಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಹಾಗೂ ಇತರೆ ಜನಪ್ರತಿನಿಧಿಗಳಿಗೆ ಆಮಂತ್ರಣ ನೀಡಲಾಗಿತ್ತು. ಆದರೆ ಯಾರೂ ಕೂಡ ಕಾರ್ಯಕ್ರಮ ನಡೆದ ಸ್ಥಳದತ್ತ ಸುಳಿಯಲೇ ಇಲ್ಲ. ಪ್ರೇಕ್ಷಕರು,ಕಲಾವಿದರೂ ಇಲ್ಲ....
ಪ್ರೇಕ್ಷಕರು ಹಾಗೂ ಕಲಾವಿದರು ಕೂಡ ಯುವಜನೋತ್ಸವದಲ್ಲಿ ಭಾಗವಹಿಸಲು ಆಸಕ್ತಿ ತೋರಲಿಲ್ಲ. ಬರೇ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಿಸಿಕೊಂಡವರಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾದರೂ ನೂರಾರು ಜನ ಸೇರುತ್ತಿದ್ದರು ಎಂಬ ಮಾತು ಕೇಳಿಬಂತು.
ಆದರೆ ಇಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವಾದರೂ ನೂರರ ಗಡಿ ದಾಟದಿರುವುದು ವಿಪಯರ್ಾಸವಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ನಮೂದಾದವರಲ್ಲಿ ಬಹುತೇಕರು ಗೈರಾದ ಕಾರಣ ಬಂದವರು ಖಾಲಿ ಖುಚರ್ಿಗಳ ಮುಂದೆ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಬಂದ ಕೆಲವರು ಮಾತ್ರ ಪ್ರೇಕ್ಷಕರಾಗಿದ್ದರು. ಕೆಲ ಸ್ಪಧರ್ೆಗಳಲ್ಲಿಯೂ ಒಬ್ಬರೇ ಸ್ಪಧರ್ಿಗಳಿದ್ದ ಕಾರಣ ಅವರಿಗೆ ಮೊದಲ ಬಹುಮಾನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ಘೋಷಿಸುವ ಅನಿವಾರ್ಯತೆ ಉಂಟಾಯಿತು.
ಕಾರ್ಯಕ್ರಮ ಸಂಘಟಕರು ಒಂದಷ್ಟು ಖುಚರ್ಿ ಹಾಕಿದ್ದರು. ಆದರೆ, ಅವು ಭತರ್ಿಯಾಗಿರಲಿಲ್ಲ. ಹೀಗಾಗಿ ಪ್ರೇಕ್ಷಕ ಹಾಗೂ ಕಲಾವಿದರ ಕೊರತೆ ಇರುವ ಬಗ್ಗೆಯೂ ವೇದಿಕೆಯಲ್ಲಿದ್ದವರು ಬೇಸರಿಸಿಕೊಂಡರು. ಪರೀಕ್ಷೆ ಇರುವ ಕಾರಣ ಯುವ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕಿ ಜಿ.ಗಾಯತ್ರಿ ತಿಳಿಸಿದರು.