ವ್ಯಕ್ತಿ ಕೊಲೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲು ಆಗ್ರಹ : ಮಲ್ಲಿಕಾರ್ಜುನ ಬಟಗಿ

Demand for COD investigation in man's murder case: Mallikarjuna Batagi

ವ್ಯಕ್ತಿ ಕೊಲೆ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲು ಆಗ್ರಹ : ಮಲ್ಲಿಕಾರ್ಜುನ ಬಟಗಿ 

ವಿಜಯಪುರ,20  : ವಿಜಯಪುರ ಜಿಲ್ಲಾ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದ ಗ್ರಾಮ ಪಂಚಾಯಿತಿಯ ವಾಲ್ಮೀಕಿ ಸಾಮಾಜದ ಗ್ರಾಪಂ ಮಾಜಿ ಅಧ್ಯಕ್ಷೆಯ ಪತಿಯಾದ ಮುದಕಣ್ಣ ದೊರೆ ಇವರನ್ನು ದಿನಾಂಕ 19-01-2025 ರಂದು ಭಾನುವಾರ ನಸುಕಿನ ಜಾವ 6 ಘಂಟೆಗೆ ಹೀನಾಯವಾಗಿ ಕೊಲೆಗೈದು ಹಾಗೂ ಅವರ ತಂದೆಯನ್ನು ಚಿತ್ರಹಿಂಸೆ ನೀಡಿ ಹಲ್ಲೆಗೈದು ಮನೆಯಲ್ಲಿದ್ದ ಮಹಿಳೆಯರ ದೌರ್ಜನ್ಯ ವೆಸಗಿ ಎಲ್ಲರನ್ನು ಮನಬಂದಂತೆ ಥಳಿಸಿದ ಕ್ರೂರತನವನ್ನು ಮೆರೆದ ಸವಣಿರ್ಯಯರನ್ನು ತಕ್ಷಣ ಬಂಧಿಸಿ ಕೊಲೆಯಾದ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಿಓಡಿ ತನಿಖೆ ನಡೆಸಬೇಕು. ಹಾಗೂ ಕೊಲೆಯಾದ ಮುದಪ್ಪನ ದೊರೆ ತಂದೆಗೆ ಚಿಕಿತ್ಸೆ ನೀಡಬೇಕು.  

ಈ ಕೃತ್ಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೆ ಕಾನೂನಿನ ಚೌಕಟ್ಟಿನ ಶಿಕ್ಷೆ ನೀಡಬೇಕು. ಈ ಕೃತ್ಯೆ ನಡೆಯುವ ಮುನ್ನ ಪಿಎಸ್‌ಐ ಅವರ ಗಮನಕ್ಕೆ ತಂದರೆ ಸದರಿ ವಿಷಯದ ಕುರಿತು ದಿವ್ಯ ನಿರ್ಲಕ್ಷ್ಯ ತೋರಿದ ಕಲಕೇರಿ ಪೊಲೀಸ್ ಠಾಣೆ ಪಿಎಸ್‌ಐ ಅವರನ್ನು ಕೂಡಲೇ ಅಮಾನತ್ತುಗೊಳಿಸಬೇಕು. ಈ ಗ್ರಾಮ ಇಂತಹ ಘಟನೆಯಿಂದ ಲೈಸನ್ಸ್‌ ಇಲ್ಲದೇ ಕಂಟ್ರಿ ಪಿಸ್ತೂಲ್‌ಗಳನ್ನು ತಗೆದುಕೊಂಡು ಜನರನ್ನು ಹೆದರಿಸುವುದು ಕೊಲೆಗೈವುದರಿಂದ ಸಾರ್ವಜನಿಕರು ಭಯಬೀತಗೊಂಡಿದ್ದಾರೆ. ಈ ಗಂಭೀರ ವಿಷಯವನ್ನು ಜಿಲ್ಲಾಡಳಿತ ಅರಿತುಕೊಂಡು ಕೃತ್ಯ ವೆಸಗಿದ ಕ್ರೂರ ಮನಸ್ಸಿನ ವ್ಯಕ್ತಿಗಳ ಹಿಂದೆ ಯಾವ ಅಧಿಕಾರಿ, ಹಾಗೂ ರಾಜಕಾರಣಿ ಇನ್ನೀತರರು ಎಲ್ಲರನ್ನು ತನಿಖೆಗೆ ಒಳಪಡಿಸಿ ಕೋಲೆಯಾದ ವ್ಯಕ್ತಿಗೆ ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಸೂಕ್ತ ಪೋಲೀಸ್ ಬಂದು ಬಸ್ತ್‌ ನೀಡಿ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು.  

ಈ ವಿಷಯದ ಕುರಿತು ಒಂದು ವಾರದೊಳಗೆ ಘಟನೆಗೆ ಕಾರಿಣಿಭೂತರಾದ ಪಿಎಸ್‌ಐ ಅವರ ಮೇಲೆ ಪ್ರಥಮ ವರ್ಧಮಾನ ಪೀರಾ​‍್ಯಧಿ ದಾಖಲಿಸಿಕೊಂಡು ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಕೃತ್ಯ ವೆಸಗಿದವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಅನ್ಯಾಯಗೊಳಗಾದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಪಿಎಸ್‌ಐ ಅವರನ್ನು ಅಮಾನತ್ತುಗೊಳಿಸಬೇಕು ಇಲ್ಲದಿದ್ದರೆ ಜಿಲ್ಲಾ ಪೊಲೀಸ್ ವರೀಷ್ಠಾಧೀಕಾರಿ ಕಛೇರಿಗೆ ಮುತ್ತಗಿ ಹಾಕಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುತ್ತೇವೆಂದು ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.