ದೇವದಾಸಿ ಮಹಿಳೆಯರ ಪ್ರತ್ಯೇಕ ಅಭಿವೃದ್ದಿ ನಿಗಮ ಸ್ಥಾಪನೆಗೆ ಒತ್ತಾಯ
ಸಿಂದಗಿ 07 : ಸರ್ಕಾರದಿಂದ ರಾಜ್ಯದಲ್ಲಿನ ದೇವದಾಸಿ ಮಹಿಳೆಯರ ಪ್ರತ್ಯೇಕ ಅಭಿವೃದ್ದಿ ನಿಗಮ, ಅಗತ್ಯ ಸವಲತ್ತುಗಳನ್ನು ಒದಗಿಸಲು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕ ಅಶೋಕ ಮನಗೂಳಿ ಅವರಿಗೆ ಸಿಂಧೂತಾಯಿ ದೇವದಾಸಿಯರ ಒಕ್ಕೂಟದಿಂದ ಮನವಿ ಮಾಡಿದರು.
ಸಿಂಧೂತಾಯಿ ದೇವದಾಸಿಯರ ಒಕ್ಕೂಟದ ಅಧ್ಯಕ್ಷೆ ಸರಿತಾ ಹರಿಜನ ನೇತೃತ್ವದಲ್ಲಿ ಶಾಸಕರನ್ನು ಬೇಟಿ ಮಾಡಿದ ಮಹಿಳೆಯರು, ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ತಾಯಂದಿರು ಇರುವುದರಿಂದ ಪ್ರತ್ಯೇಕ ದೇವದಾಸಿ ಮಹಿಳಾ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದರು.
ಮಾಜಿ ದೇವದಾಸಿ ತಾಯಂದಿರಿಗೆ ಭೂಒಡೆತನ ಯೋಜನೆಯಡಿ ಆಸ್ತಿ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಸಹಾಯಧನದ ಜತೆಗೆ ವಸತಿ ಯೋಜನೆ ಸಹಾಯಧನ ನೀಡಬೇಕು ಎಂದು ಸಿಂಧೂತಾಯಿ ದೇವದಾಸಿಯರ ಒಕ್ಕೂಟದ ಉಪಾಧ್ಯಕ್ಷೆ ಕಸ್ತೂರಿಬಾಯಿ ಕಟ್ಟಿಮನಿ, ಇಂದ್ರಾಬಾಯಿ ಮಾದರ, ಮೀನಾಕ್ಷಿ ಹರಿಜನ, ಪರಮವ್ವ ಚಾಂಧಕವಠೆ, ಸಾಯಬವ್ವ ಚಾಂದಕವಠೆ, ಸುಮಿತ್ರಾ ತೆಲಗಬಾಳ, ಮಲ್ಲಮ್ಮ ನಾಟಿಕಾರ, ಅಚಿಜಳವ್ವ ಅಂತರಗಂಗಿ, ಶಿವಮ್ಮ ಮಾದರ, ಸುಜಾತಾ ಮಾದರ ಸೇರಿದಂತೆ ಇತರರು ಇದ್ದರು