ಲೋಕದರ್ಶನ ವರದಿ
ಧಾರವಾಡ25: ಯುವಕರು ರಾಜಕೀಯೇತರವಾಗಿ ಬೆಳೆದು ವಿವಿಧ ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿ ದೇಶದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲು ಪಣತೋಡಬೇಕೆಂದು ಮಾಜಿ ಶಾಸಕರಾದ ಎ.ಬಿ.ದೇಸಾಯಿ ಅಭಿಪ್ರಾಯಪಟ್ಟರು.
ನಗರದ ಮದಿಹಾಳದ ಜೋಶಿ ಕಲ್ಯಾಣ ಮಂಟಪದಲ್ಲಿ ಇಂದು ಅಮೃತ ದೇಸಾಯಿ ಗೆಳೆಯರ ಬಳಗ ಹಾಗೂ ಎಂ.ಎಂ. ಜೋಶೀ ನೇತ್ರ ವಿಜ್ಞಾನ ಸಂಶೋಧನಾ ಸಂಸ್ಥಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಲಾಗಿದ್ದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿಲಾಯಿತು. ಯುವಕರೆ ನಾಡಿನ ಆಸ್ತಿ ಜನಪರ ಯೋಜನೆಗಳನ್ನು ಸಿದ್ದಪಡಿಸಿಕೊಂಡು ಸಮಾಜ ಕಟ್ಟಕಡೆಯ ವ್ಯಕ್ತಿಗೊ ಉತ್ತಮ ಆರೋಗ್ಯ ದೊರಕಿಸಿಕೊಡುವಲ್ಲಿ ಪ್ರಮಾಣಿಕ ಸೇವೆ ಸಲ್ಲಿಸಲು ಮನಸ್ಸುಮಾಡಬೇಕು ಅದರಲ್ಲಿಯೂ ಇಂತಹ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಗೆಳೆಯರ ಬಳಗ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘೀಸಿದರು.
ಇದು ರಾಜಕೀಯ ಕಾರ್ಯಕ್ರಮವಾಗಿದ್ದರೆ ನಾನು ಬರುತ್ತಿರಲಿಲ್ಲ ಆದರೆ ಇದು ಸಾಮಾಜಿಕವಾಗಿ ಕಳಕಳಿ ಹೊಂದಿದ ಬಡವರ ಹಿತರಕ್ಷೆಣೆಗಾಗಿ ಸಲ್ಲಿಸುತ್ತಿರುವ ಮಹಾನ್ ಕಾರ್ಯವೆಂದು ತಿಳಿದುಕೊಂಡ ಮೇಲೆ ಇಲ್ಲಿಗೆ ಬಂದಿದ್ದೇನೆ. ಹಣ, ಆಸ್ತಿ,ಜಮೀನು, ವಾಹನಗಳ ಸಂಖ್ಯೆ ಹೊಂದಿರುವವನು ಶ್ರೀಮಂತನಲ್ಲ ಯಾರಲ್ಲಿ ಆರೋಗ್ಯ ಸಂಪತ್ತು ಚೆನ್ನಾಗಿದೆಯೂ ಅವನೇ ನಿಜವಾದ ಶ್ರೀಮಂತ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಗುಸಾ ಕಲಬುಗರ್ಿ ಮಾತನಾಡಿ, ಪಾಲಕರು ಇಳಿವಯಸ್ಸಿನಲ್ಲಿ ಮಕ್ಕಳಿಗೆ ಭಾರವಾಗದಿರಲು ಆರೋಗ್ಯ ಸಮಸ್ಯೆಗಳು ತಮ್ಮಲ್ಲಿದ್ದರು ಅದನ್ನೂ ಹೇಳದೆ ನೋವು ನುಂಗಿಕೊಂಡು ಸುಮ್ಮನಿರುತ್ತಾರೆ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನ ಆಯೋಜಿಸಿರುವುದರಿಂದ ಅವರಿಗೆ ಅನುಕೂಲಮಾಡಿಕೊಟ್ಟಂತಾಗುತ್ತದೆ ಜೀವನದಲ್ಲಿ ಹಣಕ್ಕಿಂತ ನೆಮ್ಮದಿ ಹಾಗೂ ಆರೋಗ್ಯ ಬಹಳ ಮುಖ್ಯವೆಂದರು.
ಹು-ಧಾ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಡಿ.ಕೆ.ಚವ್ವಾಣ ಮಾತನಾಡಿ, ಆರೋಗ್ಯ ಭಾಗ್ಯಕ್ಕಾಗಿ ನಮ್ಮ ಪ್ರಧಾನಿ ನೆರೇಂದ್ರ ಮೋದಿ ಅವರು ಯೋಗಾ ದಿವಸವನ್ನು ಆರಂಭಿಸಿದ್ದು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ, ಮೋದಿ ಕಾರ್ಡ ಹೊಸದಾಗಿ ಆರೋಗ್ಯಭಾಗ್ಯ ಪ್ರಾರಂಭವಾಗಿದ್ದು ಬಿಪಿಎಲ್ ಕಾರ್ಡ ಹೊಂದಿದವರು ಪ್ರತಿವರ್ಷ 5 ಲಕ್ಷ ರೂ, ದವರೆಗೆ ಆರೋಗ್ಯ ವಿಮೆ ಹೊಂದಿದ್ದು ಅದರ ಸದುಪಯೋಗವನ್ನು ಪಡೆಯಬೇಕೆಂದರು.
ಪಾಲಿಕೆ ಸದಸ್ಯ ಶಂಕರ ಶೇಳಕೆ, ಸಂಜಯ ಕಪಟಕರ, ಬಿಜೆಪಿ ಜಿಲ್ಲಾ ಅಧ್ಯಕ್ಷ ನಾಗುಸಾ ಕಲಬರ್ುಗಿ, ಈರಣ್ಣ ಹಪ್ಪಳಿ. ಮಂಜು ಮಾಳೆ, ಕೃಷ್ಣಾ ಕೋಳಾನಹಟ್ಟಿ, ಮೋಹನ ನಾಗಮ್ಮನವರ, ಸಂಭಾಜಿ ಪವಾರ್, ರಾಜಶೇಖರ ಅಮೀನಗಡ, ಸಂತೋಷ ಮೇಟಿ, ವಿಠ್ಠಲ ಚವ್ವಾಣ, ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಆರತಿ ಜೈನ, ಸತೀಶ ಶಿರೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವಿ ಶೀಲವಂತ, ಅಮೃತ ಏರಗುಪ್ಪಿ, ಲೋಕೇಶೆ ಚವ್ವಾಣ,ಬಸವರಾಜ ಹುಬ್ಬಳ್ಳಿ, ಸತೀಶ ಕರಾಡೆ, ನಾಗರಾಜ ಮುಳೆ, ವಿಜಯ ಮಾನೆ, ಸಂತೋಷ ಗುರೂಜಿ, ಬಸವರಾಜ ಗಳಗಿ, ರವಿ ಹೋರಗಿನಮಠ, ಅಮೀತ ಮೋಹತೆ, ರವಿ ಕದಂ, ಧಮರ್ಾಜಿ ಜಾಧವ, ತಾನಾಜಿ ರೋಖಡೆ, ಶ್ರೀನಿವಾಸ ಶಿಂಧೆ, ಮಂಹಾತೇಶ ನಿಬ್ಬಣ್ಣವರ,ಸತೀಶ ಮೇಟಿ, ಸುರೇಶ ಸವಾಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.