ಕಡತ ವಿಲೇವಾರಿ ಚುರುಕುಗೊಳಿಸಲು ಜಿಲ್ಲಾಧಿಕಾರಿಗಳ ನಿರ್ದೇಶನ

ಗದಗ 30: ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ರೈತರ ನೊಂದಣಿ ಹಾಗೂ ಕಂದಾಯ ಸಚಿವರ ಕಡತ ವಿಲೇವಾರಿ ಸಪ್ತಾಹ ಕುರಿತಂತೆ ಗದಗ ತಹಶೀಲ್ದಾರ ಕಛೇರಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಂದು (ದಿ.30) ಭೇಟಿ ನೀಡಿ ಪರಿಶೀಲಿಸಿದರು. ರೈತರ ಸಮ್ಮಾನ ಯೋಜನೆಯಡಿ ಅಜರ್ಿ ಸಲ್ಲಿಸಿರುವ ಅರ್ಹ ರೈತರ ಮಾಹಿತಿಯನ್ನು ಅಪಲೋಡ ಮಾಡುವ ಪ್ರಕ್ರಿಯೆ ಚುರುಕುಗೊಳಿಸಲು ಹಾಗೂ ರಾಜ್ಯದ ಕಂದಾಯ ಸಚಿವರು ನಿದೇರ್ಶನ ನೀಡಿರುವ ರೀತ್ಯ ಕಡತ ವಿಲೇವಾರಿ ಕ್ರಮ ಜರುಗಿಸಿ ನಿಯಮಿತವಾಗಿ ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.  

   ಗದಗ ತಹಶೀಲ್ದಾರ ಶ್ರೀನಿವಾಸಮೂತರ್ಿ ಕುಲಕಣರ್ಿ, ಕಂದಾಯ ನೀರಿಕ್ಷಕ ಬಿ.ಎಸ್.ಕಣ್ಣೂರ, ಗ್ರಾಮ ಲೆಕ್ಕಾಧಿಕಾರಿಗಳು, ತಹಶೀಲ್ದಾರ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.