ಅಂಗವಿಕಲರ ಹಕ್ಕುಗಳ ಕಾಯ್ದೆ ಯೋಜನೆ ಕಡ್ಡಾಯ : ಬಸವರಾಜು

ಧಾರವಾಡ.29: ಸಕರ್ಾರವು ಅಂಗವಿಕಲ ವ್ಯಕ್ತಿಗಳ (ದಿವ್ಯಾಂಗಜನ) ಸಬಲೀಕರಣಕ್ಕಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016 ನ್ನು ಎಪ್ರಿಲ್ 2017 ರಿಂದ ಜಾರಿಗೊಳಿಸಿದೆ. ಇದರ ಅನ್ವಯ ಸಕರ್ಾರದ ಪ್ರತಿ ಇಲಾಖೆ ತನ್ನ ಯೋಜನೆಗಳಲ್ಲಿ ಮೀಸಲಾತಿ ನೀಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳಲ್ಲಿ ಅಂಗವಿಕಲರ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆ ಮಾಡಿ, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

     ಅಂಗವಿಕಲರ ಕಲ್ಯಾಣಕ್ಕಾಗಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರತಿ ಇಲಾಖೆಯು ತಮ್ಮಲ್ಲಿರುವ ಯೋಜನೆಗಳನ್ನು ಅಧಿನಿಯಮದನ್ವಯ ಅಂಗವಿಕಲರಿಗೆ ಮೀಸಲಾತಿ ನಿಗಧಿಪಡಿಸಿ ಅನುಷ್ಠಾನಗೊಳಿಸಬೇಕು.

     ಅಂಗವಿಕಲರಿಗೆ ಆರೋಗ್ಯ, ಉದ್ಯೋಗ, ಶಿಕ್ಷಣ ಮತ್ತು ವಸತಿ ಬಹುಮುಖ್ಯ. ಕೈಗಾರಿಕೆ ಇಲಾಖೆ ಕೈಗಾರಿಕೆ ಕಾಖರ್ಾನೆಗಳಲ್ಲಿ ಅಂಗವಿಕಲರಿಗೆ ಉದ್ಯೋಗ ಅವಕಾಶ ಸಿಗುವಂತೆ ಜಾಗೃತಿ ವಹಿಸಬೇಕು. ಸ್ವಯಂ ಉದ್ಯೋಗಕ್ಕೆ ಆಸಕ್ತಿ ತೋರುವವರಿಗೆ ಪ್ರೋತ್ಸಾಹ ನೀಡಬೇಕು. ಪಿ. ನಾಗೇಶ, ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಡಾ. ಕೆ. ರಾಮಚಂದ್ರ ಮಡಿವಾಳ, ಉಪತಹಶೀಲ್ದಾರ ಪ್ರದೀಪ ಪಾಟೀಲ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿದರ್ೆಶಕ ಮಲ್ಲಿಕಾಜರ್ುನ ಭಜಂತ್ರಿ, ಜಿಲ್ಲಾ ಅಂಕಿ ಸಂಖ್ಯಾ ಅಧಿಕಾರಿ ದೀಪಕ್ ಮಡಿವಾಳ, ತಾಲೂಕು ಪಂಚಾಯತ್ ಇಓ ಎಸ್.ಎಸ್. ಖಾದ್ರೊಳ್ಳಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಪಟ್ಟಪ್ಪನವರ ಸೇರಿದಂತೆ ಪೊಲೀಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಎನ್ಡಬ್ಲೂಕೆಎಸ್ಆರ್ಟಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಗೃಹಮಂಡಳಿ ಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಅಧಿಕಾರಿಗಳು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು ಪಾಲ್ಗೊಂಡಿದ್ದರು.