ಲೋಕದರ್ಶನ ವರದಿ
ಬೆಳಗಾವಿ, 21: ಸ್ವಚ್ಛ ಪರಿಸರದಿಂದ ರೋಗಗಳನ್ನು ಓಡಿಸಬಹುದಾಗಿದೆ. ಇದರಿಂದ ರೋಗಮುಕ್ತ ಸುಮಾದಾಯ ನೀಮರ್ಾಣ ಮಾಡಬಹುದಾಗಿದ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ ಬಿ ಎಸ್ ಮಹಾಂತಶೆಟ್ಟಿ ಮಾತನಾಡುತ್ತಿದ್ದರು ಅವರು ಇಂದು ಶ್ರೀ ಕಲ್ಮೇಶ್ವರ ಇಂಗ್ಲೀಷ ಮಾದ್ಯಮ ಶಾಲೆಯ ಸಮಿತಿ, ಪಟ್ಟಣ ಪಂಚಾಯತ್ ಎಮ್ ಕೆ ಹುಬ್ಬಳ್ಳಿ ಹಾಗೂ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಂಗವಾಗಿ ಮಾತನಾಡುತ್ತಿದ್ದರು. ನಮ್ಮ ಮನೆಗಳ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯಿಂದ ನಿರೋಗಿಯಾಗಿ ಜೀವನ ನಡೆಸಬಹುದು ಎಂದು ತಿಳುವಳಿಕೆ ನೀಡಿದರು.
ಇದೇ ಸಮಯದಲ್ಲಿ ಉಪಸ್ಥಿತರಿದ್ದ ಎಮ್ ಕೆ ಹುಬ್ಬಳ್ಳಿ ಗ್ರಾಮದ ಹಿರಿಯ ಹಾಗೂ ನಿವೃತ್ತ ಶಿಕ್ಷಕ ಗುರುಲಿಂಗಪ್ಪ ಹಲಸಗಿ ಮಾತನಾಡುತ್ತ ಕೆಎಲ್ಇ ಸಂಸ್ಥೆಯು ಆರೊಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು ಇಂತಹ ದೊಡ್ಡ ಸಂಸ್ಥೆಯು ನಮ್ಮ ಊರಲ್ಲಿ ಶಿಬರವನ್ನು ಹಮ್ಮಿಕೊಂಡಿದ್ದು ನಿಜವಾಗಲೂ ಹೆಮ್ಮೆಯ ಸಂಗತಿಯಾಗಿದೆ. ಸಾರ್ವಜನಿಕ ಸೇವೆಯಲ್ಲಿ ಕೆಎಲ್ಇ ಸಂಸ್ಥೆಯ ಪಾತ್ರ ನಿಜಕ್ಕೂ ಶ್ಲಾಘನೀಯವೆಂದು ಹೊಗಳಿದರು.
ಶಿಬಿರದಲ್ಲಿ 344ಕ್ಕೂ ಅಧಿಕ ಗ್ರಾಮಸ್ತರನ್ನು ತಪಾಸಣೆಗೊಳಪಡಿಸಲಾಯಿತು. ಅದರಲ್ಲಿ 180ಜನರಿಗೆ ಮಧುಮೇಹ ತಪಾಸಣೆ ಮಾಡಲಾಯಿತು. ಅದರಲ್ಲಿ 60 ಜನರಿಗೆ ಮಧುಮೇಹ ಹಾಗೂ 76 ಜನರಿಗೆ ರಕ್ತದೊತ್ತಡ, 49 ಜನರಿಗೆ ಕಣ್ಣಿನ ತಪಾಸಣೆಮಾಡಲಾಯಿತು ಅದರಲ್ಲಿ 16 ಜನರಿಗೆ ಮೋತಿಬಿಂದು ಹಾಗೂ ಮತ್ತಿತರೆ ಕಣ್ಣಿನ ಸಮಸ್ಯೆ, 70 ಜನರಿಗೆ ಎಲುಬುಕೀಲು ತಪಾಸಣೆ ಮಾಡಲಾಯಿತು. 10 ಜನರು ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ತಪಾಸಣೆಗೆ ಒಳಪಟ್ಟರು, ಹಾಗೂ 22 ಮಹಿಳೆಯರನ್ನು ಸ್ತ್ರೀರೋಗ ಹಾಗೂ ಪ್ರಸೂತಿತಜ್ಞರು ತಪಾಶಿಸಿದರು ಅವರಲ್ಲಿ 15 ಜನರಿಗೆ ವಿವಿಧ ರೀತಿಯ ತೊಂದರೆಗಳಿರುವದು ಕಂಡುಬಂದಿತು. ಇಂತಹ ಸಮಸ್ಯೆಗಳಿಗೆ ನಮ್ಮ ಆಸ್ಪತ್ರೆಯಲ್ಲಿ ಅತ್ಯಲ್ಪ ದರದಲ್ಲಿ ಲಭ್ಯವಿದ್ದು ಅದರ ಸದುಪಯೋಗ ಪಡೆದುಕೊಂಡು ನೆಮ್ಮದಿಯ ಜೀವನ ಸಾಗಿಸಿ ಎಂದು ಆಸ್ಪತ್ರೆಯ ಪ್ರಭಾರೀ ನಿದರ್ೇಶಕರಾದ ಡಾ. ಆರ್ ಜಿ ನೆಲವಿಗಿ ಕರೆ ನೀಡಿದ್ದಾರೆ.
ಶಿಬಿರದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ, ಡಾ. ರತ್ನಾ ಬಿ, ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಡಾ ಅನುರಾಧಾ ಉಗಲೆ, ಹಿರಿಯ ಮಕ್ಕಳ ತಜ್ಞ ಡಾ ಸುರೇಶ ಕಾಖಂಡಕಿ, ಹೆಸರಾಂತ ಎಲುಬು ಕೀಲು ತಜ್ಞ ಡಾ ವಿದ್ಯಾನಂದ ಮಾಕನೆ, ಮನೋ ವೈದ್ಯ ಡಾ. ನಿತಿನ ಪಟ್ಟಣಶೆಟ್ಟಿ, ಪ್ರಸಿದ್ದ ಶಸ್ತ್ರಚಿಕಿತ್ಸಜ್ಞ ಡಾ ಎ ಕೆ ರಡ್ಡೇರ, ನಾಮಾಂಕಿತ ಕಿವಿ ಗಂಟಲು ಮೂಗು ತಜ್ಞ ಡಾ. ವಿವೆಕಾನಂದ ಕೊಳ್ವೇಕರ, ಚರ್ಮರೋಗ ತಜ್ಞೆ ಡಾ. ನೀರ್ಮಲಾ ಶೆಟ್ಟರ ಹಾಗೂ ನೇತ್ರ ತಪಾಸಣಾ ಸಹಾಯಕಿ ಕು ದಿನಾರ ದಲಾಯತ ಹಾಗೂ ಸಾರ್ವಜನಿಕ ಸಂಪಕರ್ಾಧಿಕಾರಿ ಸಂತೋಷ ಇತಾಪೆ ವಿಜಯಕುಮಾರ ಮುನವಳ್ಳಿ ಭಾಗವಹಿಸಿದ್ದರು ಮತ್ತು ಎಮ್ ಕೆ ಹುಬ್ಬಳ್ಳಿ ಗ್ರಾಮದ ಹಿರಿಯರಾದ ವೆಂಕಣ್ಣಾ ತೋರಗಲ್, ಗುರುಲಿಂಗಪ್ಪಾ ಹಲಸಗಿ, ಗುರಪ್ಪ ದಡ್ಡಿ ಬಸಪ್ಪಾ ಕರವಿನಕೊಪ್ಪ ಅರುಣ ರಾಹುತ, ರುದ್ದಪ್ಪ ಸಂಗೊಳ್ಳಿ, ರಾಜೇಂದ್ರ ಮುತ್ನಾಳ ಹಾಗೂ ಗ್ರಾಮಸ್ತರು ಭಾಗವಹಿಸಿದ್ದರು.