ಎಚ್ ಕೆ ಪಾಟೀಲರಿಂದ ಮಹಿಳಾ ಸ್ವಾವಲಂಬನೆಗಾಗಿ ಉಚಿತ ಹೊಲಿಗೆ ಯಂತ್ರ ವಿತರಣೆ
ಗದಗ 27: ಜಿಲ್ಲೆಯ ಮಹಿಳೆಯರ ಸಾಮಾಜಿಕ ಭದ್ರತೆ ಹಾಗೂ ಅವರ ಸ್ವಾವಲಂಬನೆಯನ್ನು ಭದ್ರಗೊಳಿಸುವ ಸದುದ್ದೇಶದಿಂದ ಗದಗ ನ ಡಿ,ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವಿಶೇಷ ಯೋಜನೆಯ ಅಡಿಯಲ್ಲಿ ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ನೇರವಾಗುವ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಇಂದು ಇದೇ ದಿನಾಂಕ 26 ರಂದು ಕೆ ಎಚ್ ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಗಣ ರಾಜ್ಯೋತ್ಸವದ ವಿಶೇಷ ದಿನದಂದು ಕಾನೂನು ಮತ್ತು ಸಂಸದೀಯ ವ್ಯೆವಹಾರಗಳ ಸಚಿವರು, ಪ್ರವಾಸೋಧ್ಯೇಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರು, ಮತ್ತು ಡಿ,ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯೆವಸ್ಥಾಪಕರಾದ ಗುರುರಾಜ್ ಕುಲಕರ್ಣಿ ಯವರ ಜಂಟಿಯಾಗಿ ಸುಮಾರು 11 ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಮಹಿಳಾ ಕಾಂಗ್ರೇಸ್ ಮುಖಂಡರಾದ ದ್ರಾಕ್ಷಾಯಣಿ ಹಾಸಲಕರ ರವರು ಮಾತನಾಡಿ, ಇಂದು ಮಹಿಳೆಯರ ಆರ್ಥಿಕಾಭಿವೃದ್ಧಿಗಾಗಿ ಸರಕಾರದ ಇಲಾಖೆಯ ವತಿಯಿಂದ ಮಹಿಳೆಯರನ್ನು ಗುರುತಿಸಿ ಅವರ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ನಿರ್ವಹಿಸಿ ಸ್ವಾವಲಂಬಿ ಜೀವನ ನಡೆಸಲು ನೇರವಾಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಎಚ್ ಕೆ ಪಾಟೀಲ್ ಸಾಹೇಬರು ಹಾಗೂ ಇಲಾಖೆಯ ಜಿಲ್ಲಾ ವ್ಯೆವಸ್ಥಾಪಕರಿಗೂ ಧನ್ಯವಾದಗಳನ್ನು ಅರ್ಿಸಿದರು. ಹಾಗೂ ಫಲಾನುಭವಿಗಳಾದ ಸರಸ್ವತಿ ದೇವರಕೊಂಡಿ, ಸುನೀತಾ ಪೋರೆ, ಸುಧಾ ಬೂದಾರಪೂರ, ನೇತ್ರಾ ಮಾನೆ ಅಶ್ವಿನ ಬುದಾರಪೂರ ಭೂಮಿಕಾ ಭಂಡಾ,ರೂಪಾ ಭಸ್ಮೆ, ವಿದ್ಯಾ ಕೋರೆ್ಡ, ಜ್ಯೋತಿ ಬೂದಾರಪೂರ,ಗೌರಮ್ಮಾ ಭಸ್ಮೆ, ಸುನೀತಾ ಬಂಡಾ, ಹಾಗೂ ಬೆಟಗೇರಿ ಕೆ ಎಚ್ ಡಿ ಸಿ ನೇಕಾರ ಕಾಲನಿಯ ಸಮಸ್ತ ಮಹಿಳಾ ಭಾಂದವರು ಉಪಸ್ಥಿತರಿದ್ದರು.